ಕೇರಳ: ಹೆಣ್ಮಕ್ಕಳೇ ಸ್ಟ್ರಾಂಗು ಗುರು ಅನ್ನೋ ಮಾತು ಸುಮ್ನೆ ಅಲ್ಲ. ಒಮ್ಮೆ ಏನಾದ್ರೂ ಮಾಡ್ಬೇಕು ಅನ್ನೋ ಛಲ ಇಟ್ಕೊಂಡ್ರೆ ಅದನ್ನ ಮಾಡಿ ಮುಗಿಸಿಯೇ ಬಿಡ್ತಾರೆ. ಇದಕ್ಕೆ ಬೇಕಾದಷ್ಟು ಉದಾಹರಣೆ ಇವೆ. ಕೇರಳದ 21 ವರ್ಷದ ಈ ಯುವತಿಯ ಸಾಧನೆ ಹಲವರಿಗೆ ಸ್ಫೂರ್ತಿ.

ಲೆಮನ್​ ಜ್ಯೂಸ್​ ಮಾರ್ತಿದ್ದ ಯುವತಿ ಎಸ್​ಪಿ ಆಗಿದ್ದು ಹೇಗೆ?
ತಿರುವನಂತಪುರಂನ ಎಸ್​ಪಿ ಆ್ಯನಿ ಜೀವನಾಗಾಥೆ ತುಂಬಾ ಇಂಟ್ರೆಸ್ಟಿಂಗ್​. ಅವ್ರಿಗೆ ತುಂಬಾ ಚಿಕ್ಕ ವಯಸ್ಸಿನವರಿದ್ದಾಗಲೇ ಮದುವೆ ಆಗಿತ್ತು, 21ವರ್ಷದೊಳಗೆ ತನ್ನ ಗಂಡನಿಂದ ದೂರವಾಗಿ, ತಮ್ಮ ಅಜ್ಜಿಯ ಮನೆಯಲ್ಲಿ ವಾಸ ಮಾಡ್ತಾಯಿದ್ರು. ಅಜ್ಜಿ ಮನೆಯಲ್ಲಿ ವಾಸವಿದ್ದ ಆ್ಯನಿ ಜೀವನ ನಿರ್ವಹಣೆಗಾಗಿ ಮನೆಮನೆಗೂ ಹೋಗಿ ನಿಂಬೆ ಜ್ಯೂಸ್​ ಮಾರಾಟ ಹಾಗೂ ದೊಡ್ಡ ದೊಡ್ಡ ಆಟದ ಮೈದಾನದಲ್ಲಿ ಐಸ್​ಕ್ರೀಮ್​ ಮಾರಾಟ ಮಾಡ್ತ ಜೀವನ ನಡೆಸುತ್ತಿದ್ದರು. ಇದೇ ಯುವತಿ 31 ವರ್ಷಕ್ಕೆ ತನ್ನ ಕನಸ್ಸನ್ನ ಸಾಧಿಸಬೇಕು ಅನ್ನೋ ಹಠ ಹಿಡಿದು, ಈಗ ಕೇರಳಾದ ವೆರಕಾಲ್​ ಪೊಲೀಸ್​ ಠಾಣೆಯಲ್ಲಿ ಎಸ್​ಪಿ ಆಗಿದ್ದಾರೆ.

ತನ್ನ ಅಜ್ಜಿನ ಮನೆಯಲ್ಲಿದ್ದಾಗ, ಅವ್ರು ಓದೋ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಕಾಂಪ್ರಮೈಸ್​ ಮಾಡಿಕೊಂಡಿರ್ಲಿಲ್ಲ. ದೂರ ಶಿಕ್ಷಣ ಮಾಡಿಕೊಂಡು, ಓದನ್ನ ಮುಗಿಸಿಕೊಂಡ್ರು. ಮದುವೆಯಾಗಿ ಒಂದು ಮಗುವಿರೋ ಆ್ಯನಿ, ತಮ್ಮ ಮಗುವಿನ ಜೊತೆಗೆ ಒಂದು ಸಿಂಗಲ್​ ರೂಂ ಮನೆ ಹುಡುಕೋದಕ್ಕು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಕಾರಣ ಒಂಟಿ ಮಹಿಳೆ, ಒಂದು ಮಗುವಿತ್ತು ಅನ್ನೋ ಕಾರಣಕ್ಕೆ. ಹೀಗಾಗಿ, ತನ್ನನ್ನ ಬೇರೆ ಯಾವ ಗಂಡಸೂ ನೋಡಬಾರದು ಅಂತ ‘ಬಾಯ್​ ಕಟ್​’ ಮಾಡಿಸಿಕೊಂಡಿದ್ರು.

ನಂತರದಲ್ಲಿ 2016ರಲ್ಲಿ ಸಬ್​ ಇನ್ಸ್​​ಪೆಕ್ಟರ್​ ಎಕ್ಸಾಂ ತೆಗೆದುಕೊಂಡ್ರು, ಲೋನ್​ ಮಾಡಿಕೊಂಡು ಎಕ್ಸಾಂಗೆ ಎಲ್ಲಾ ರೀತಿಯಲ್ಲೂ ತಯಾರಿ ಮಾಡಿಕೊಂಡು, ಎಕ್ಸಾಂ ಬರೆದು ಕ್ಲಿಯರ್​ ಮಾಡಿದ್ದಾರೆ. ನಂತರ, ಒಂದೂವರೆ ವರ್ಷದ ನಂತರ ಟ್ರೈನಿಂಗ್​ ಮುಗಿಸಿ ಕೇರಳದ ವರ್ಕಾಲಾ ಎಸ್​ಪಿಯಾಗಿದ್ದಾರೆ.

The post ನಿಂಬೇಹಣ್ಣಿನ ಜ್ಯೂಸ್​ ಮಾರುತ್ತಿದ್ದ ಮಹಿಳೆ ಈಗ ಕೇರಳದ ವರ್ಕಾಲಾದ ಎಸ್​ಪಿ appeared first on News First Kannada.

Source: newsfirstlive.com

Source link