ನಿಖಿಲ್​​ಗೆ ಹೃದಯ ಢವಢವ ಅಂತಿರೋದು ಯಾಕೆ? ಸುದೀಪ್ ಬಗ್ಗೆ ‘ಯುವರಾಜ’ ಹೇಳಿದ್ದೇನು?

ಸ್ಯಾಂಡಲ್​ವುಡ್ ಯುವರಾಜ ನಿಖಿಲ್ ಕುಮಾರ್ ‘ರೈಡರ್’ ಆಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.. ಬರೋದೇನು ಬಂದು ಬಿಡ್ತಾರೆ ನಿಜ.. ಆದ್ರೆ ಅದ್ಯಾಕೋ ಡವ ಡವ ಅಂತ ನನ್ನ ಹೃದಯ ಬಡೆದುಕೊಳ್ತಿದೆ ಅಂತಿದ್ದಾರೆ.. ಅದ್ಯಾಕೆ..? ಜಾಗ್ವಾರ್ ನಾಯಕರಿಗೆ ಯಾಕೆ ಹಾರ್ಟ್ ಡವ ಡವ ಅಂತಿದ್ದೇ..? ಏನ್ ಸಮಾಚಾರ ಬನ್ನಿ ಅವರಿಂದಲೇ ಕೇಳೋಣ.

ಜಾಗ್ವಾರ್ ಸಿನಿಮಾದ ಮೂಲಕ ಕನ್ನಡ ಬೆಳ್ಳಿತೆರೆಗೆ ಜಿಗಿದು ಅಭಿಮನ್ಯುವಾಗಿ ಸೀತಾರಾಮನಾಗಿ ಈಗ ರೈಡರ್ ಆಗ್ತಿದ್ದಾರೆ ಸ್ಯಾಂಡಲ್​ವುಡ್​​ನ ಯುವರಾಜ ನಿಖಿಲ್ ಕುಮಾರ್.

ರೈಡರ್.. ನಿಖಿಲ್ ಕುಮಾರ್ ನಟನೆಯ ಹೊಸ ಸಿನಿಮಾ. ಇಷ್ಟುದಿನ ಪೋಸ್ಟರ್ ಟೀಸರ್ ನಿಂದ ಸುದ್ದಿ ಮಾಡ್ತಿದ್ದ ರೈಡರ್ ಈಗ ಹಾಡಿನಿಂದ ಸದ್ದು ಮಾಡ್ತಿದೆ.. ಡವ ಡವ ಅಂತ ನಿಖಿಲ್ ಕುಮಾರ್ ಕುಣಿದು ಕುಪ್ಪಳಿಸಿದ್ದಾರೆ.

ಅದ್ದೂರಿ ಇವೆಂಟ್ ಮೂಲಕ ರೈಡರ್ ಸಾಂಗ್ ಲಾಂಚ್ ಆಗಿದೆ.. ಬಹುದಿನಗಳ ನಂತರ ತನ್ನ ಅಭಿಮಾನಿ ಬಳಗಕ್ಕೆ ತನ್ನ ಅಭಿಮಾನ ಮಾತುಗಳಿಂದ ಗೌಡ ಮೊಮ್ಮಗ ಖುಷಿ ಪಡಿಸಿದ್ದಾರೆ..

ಟಾಲಿವುಡ್ ಡೈರೆಕ್ಟರ್ ವಿಜಯ್ ಕುಮಾರ್ ಕೊಂಡ ಆ್ಯಕ್ಷನ್ ಕಟ್​​ನಲ್ಲಿ ಲಹರಿ ಆಡಿಯೋ ಕಂಪನಿಯ ನಿರ್ಮಾಣದಲ್ಲಿ ಅರ್ಜುನ್ ಜನ್ಯ ಮ್ಯೂಸಿಕ್​​ ಕಂಪೋಸಿಷನ್​​ನಲ್ಲಿ ರೈಡರ್ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ. ಒಂದು ರಾತ್ರಿ ಕಳೆದು ಹಗಲು ಬರೋಷ್ಟರಲ್ಲಿ 25 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನ ರೈಡರ್ ಸಿನಿಮಾದ ಡವ ಡವ ಹಾಡು ಪಡೆದುಕೊಂಡಿದೆ.

ಸಾಂಗ್ ಲಾಂಚ್ ಇವೆಂಟ್​​​ನಲ್ಲಿ ನಿಖಿಲ್ ಕುಮಾರಸ್ವಾಮಿ ತನ್ನ ಮನದಾಳವನ್ನ ಮುಂದಿನ ಯೋಚನೆ ಯೋಜನೆಯನ್ನ ಇಂದಿನ ಸಿನಿಮಾ ರಂಗದ ಬೆಳಬೆಣಿಗೆಯನ್ನ ನಿಮ್ಮ ನ್ಯೂಸ್​ ಫಸ್ಟ್​ನ ಚಿತ್ರಪ್ರೇಮಿಗಳೇ ತಂಡದ ಜೊತೆ ಹಂಚಿಕೊಂಡಿದ್ದಾರೆ.

ನಿಖಿಲ್​​ಗೆ ಹೃದಯ ಢವಢವ ಅಂತಿರೋದು ಯಾಕೆ..?
ಇಷ್ಟು ಕಷ್ಟ ಪಟ್ಟು ಒಂದು ಸಿನಿಮಾ ಮಾಡ್ತೀವಿ.. ಪ್ರೇಕ್ಷಕರಿಗಾಗಿ ನಾವು ಸಿನಿಮಾ ಮಾಡ್ತೀವಿ.. ಕೊನೆಗೆ ಅವ್ರು ಚಪ್ಪಾಳೆ ತಟ್ಟಿದ್ರೆ ಸಾಕು. ಅದಕ್ಕಾಗಿ ಸಿನಿಮಾ ರಿಲೀಸ್​ ಆಗೋವರೆಗೂ ಹೃದಯ ಸ್ವಲ್ಪ ಢವಢವ ಅನ್ಸುತ್ತೆ ಅಷ್ಟೇ. ಸಿನಿಮಾದ ಸ್ಕ್ರೀಪ್ಟ್​ ಹಾಗೂ ಮೇಕಿಂಗ್​ ಮೇಲೆ ವಿಶ್ವಾಸ ಇದ್ದು. ನಾವು ಪ್ರಮಾಣಿಕ ಪ್ರಯತ್ನ ಮಾಡಿದ್ದಿವಿ ಎಂದರು.

ಕಿಚ್ಚ ಸುದೀಪ್ ಬಗ್ಗೆ ‘ರೈಡರ್’ ನಿಖಿಲ್ ಹೇಳಿದ್ದೇನು..?

ದುನಿಯಾ ವಿಜಯ್ ಡೈರೆಕ್ಷನ್ ಬಗ್ಗೆ ನಿಖಿಲ್ ಮಾತೇನು..?

ಕೋಟಿಗೊಬ್ಬ ರಿಲೀಸ್​ ವೇಳೆ ಏನಾಯ್ತು.. ಒಳಗಿನ ವಿಚಾರ ನನಗೆ ಗೊತ್ತಿಲ್ಲ. ಆದ್ರೆ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ಸುದೀಪ್​ ಸರ್​ನನ್ನು ಅಭಿಮಾನಿಯಾಗಿ ನೋಡಿದ್ರೆ ಹಾಗೂ ಅವರು ಎಲ್ಲಾ ಚಿತ್ರರಂಗಗಳೊಂದಿಗೆ ಗುರುತಿಸಿಕೊಂಡಿರೋ ಕಾರಣ ನಮ್ಮ ಚಿತ್ರರಂಗದ ಮೇಲೆ ಹೇಗೆ ಕಪ್ಪು ಚುಕ್ಕೆ ಬಿಳುತ್ತೆ ಅನ್ನೋ ಬೇಜಾರು ಇದೆ. ಸುದೀಪ್​ ಸರ್​ ಗೆ ಭಗವಂತ ಶಕ್ತಿ ಕೊಟ್ಟಿದ್ದರೆ, ಸಿನಿಮಾ ಚೆನ್ನಾಗಿದೆ. ಇನ್ನು ದುನಿಯಾ ವಿಜಯ್ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದು, ಸಲಗ ಕೂಡ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದಕ್ಕಿಂತ ಕನ್ನಡ ಸಿನಿಮಾ ನಟನಾಗಿ ಇನ್ನು ಏನು ಬೇಕು.. ಸಿನಿಮಾ ಚೆನ್ನಾಗಿ ಇದೆ ಅಂದರೇ ಖುಷಿ ಎಂದರು.

ಇದು ರೈಡರ್ ಸಿನಿಮಾದ ಮೂಲಕ ರಂಜಿಸಲ ಸಜ್ಜಾಗಿರೋ ನಿಖಿಲ್ ಅವರ ಮಾತು. ದೊಡ್ಡ ತಾರಾಬಳಗವಿರೋ ರೈಡರ್ ಸಿನಿಮಾದ ಪೋಸ್ಟ್ ಪ್ರೋಡಕ್ಷನ್ ಕಾರ್ಯ ವೇಗವಾಗಿ ನಡೆಯುತ್ತಿದ್ದು ನವೆಂಬರ್ ತಿಂಗಳು ಪ್ರೇಕ್ಷಕರ ಮುಂದೆ ಬರೋ ಯೋಜನೆಯಲ್ಲಿ ರೈಡರ್ ಸಿನಿಮಾ ನಿಂತಿದೆ.

News First Live Kannada

Leave a comment

Your email address will not be published. Required fields are marked *