ನಿಜವಾಯ್ತು ಪ್ರೇಮಂ ಪೂಜ್ಯಂ ಬಗ್ಗೆ ರೆಬೆಲ್​ ಸ್ಟಾರ್​​ ಅಂಬರೀಶ್​​ ನುಡಿದಿದ್ದ ಭವಿಷ್ಯ..!


ರೆಬೆಲ್ ಸ್ಟಾರ್ ಅಂಬರೀಶ್ ಅವರ ನೆನಪು ಶಾಶ್ವತ.. ಅಂಬಿ ಅವರ ನೆನಪಿನ ಶಕ್ತಿಯು ಅದ್ಭುತ.. ಹೊಸ ಪ್ರತಿಭೆಗಳನ್ನ ಥಟ್ ಅಂತ ಗುರುತಿಸುವಲ್ಲಿ ಅಂಬರೀಶ್ ಬ್ರಿಲಿಯೆಂಟ್ ಆಗಿದ್ದರು.. ಇಂದು ಅದ್ದೂರಿಯಾಗಿ ತೆರೆಕಾಣುತ್ತಿರುವ ‘‘ಪ್ರೇಮಂ ಪೂಜ್ಯಂ’’ ಸಿನಿಮಾದ ಕಥೆಯನ್ನ ಫರ್​​ದಿ ಫಸ್ಟ್ ಟೈಮ್ ಕೇಳಿದ್ದವರು ಅಂಬರೀಶ್..

ರೆಬೆಲ್ ಸ್ಟಾರ್ ಅಂಬರೀಶ್​.. ಸ್ಯಾಂಡಲ್​ವುಡ್​​ನ ಮರೆಯಲಾದ ಕಲಾ ರತ್ನ.. ಅದ್ಭುತ ಕಲಾವಿದ ಅನ್ನೋದ್ರ ಜೊತೆಗೆ ಅದ್ಭುತ ಹೃದಯವಂತ.. ಹೊಸ ಪ್ರತಿಭೆಗಳನ್ನ ಥಟ್ ಅಂತ ಗುರುತಿಸೋದ್ರಲ್ಲಿ ರೆಬಲ್ ಸ್ಟಾರ್ ಜಿನಿಯಸ್ ಆಗಿದ್ದರು.. ಜೋಗಿ ಪ್ರೇಮ್ ಅವರನ್ನ ಮೊದಲು ಗುರುತಿಸಿದವರು ಇದೇ ಅಂಬರೀಶ್​​.. ಅದರಂತೆ ‘‘ಪ್ರೇಮಂ ಪೂಜ್ಯಂ’’ ಸಿನಿಮಾದ ಮೂಲಕ ನಿರ್ದೇಶಕ , ನಿರ್ಮಾಪಕ, ಸಾಹಿತಿ, ಸಂಭಾಷಣೆಗಾರ ಹಾಗೂ ಸಂಗೀತ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿರುವ ವೈದ್ಯರಾಗಿರುವ ಡಾ.ರಾಘವೇಂದ್ರ ಬಿ.ಎಸ್ ಅವರ ಕಲೆಯನ್ನ ಗುರುತಿಸಿದವರು ರೆಬಲ್ ಸ್ಟಾರ್ ಅಂಬರೀಶ್..

ಮೂಲತಃ ಮಳವಳ್ಳಿಯವರಾಗಿರುವ ಡಾ.ರಾಘವೇಂದ್ರ ಬಿಎಸ್ ಅವರು ಸಖತ್ ಸಿನಿಮಾ ಪ್ರೇಮಿ.. ಪೇಷೆಂಟ್ ಗಳನ್ನ ನೋಡೋದ್ರ ಜೊತೆ ಅತಿ ಹೆಚ್ಚು ಸಿನಿಮಾಗಳನ್ನ ನೋಡೋ ಹವಾಸ್ಯವನ್ನ ಇಟ್ಕೊಂಡಿದ್ದಾರೆ.. ಸಿನಿಮಾ ನೋಡ್ತಾ ನೋಡ್ತಾ ಕಥೆ ಬರೆದು ಚಿತ್ರಕಥೆ ರೂಪಿಸಿ ಸಂಭಾಷಣೆ ಸಾಹಿತ್ಯ ಸಂಗೀತದ ಜೊತೆ ನಿರ್ದೇಶನವನ್ನ ಮಾಡೋ ತನಕ ಬಂದು ನಿಂತರು.. ಫಸ್ಟ್ ಟೈಮ್ ಡಾ.ರಾಘವೇಂದ್ರ ಬಿ.ಎಸ್​ ಅವರು ಒಬ್ಬ ಸಿನಿಮಾ ವ್ಯಕ್ತಿ ಕಥೆ ಹೇಳಿ ಮೆಚ್ಚಿಕೊಂಡಿದ್ದು ಅಂಬರೀಶ್ ಅವರಿಗಂತೆ..

ಕೇಳಿದ್ರದಲ್ಲಿ ಅಂಬರೀಶ್ ಅವರ ದೊಡ್ಡ ತನ ಹಾಗೂ ಅವರ ಸಿನಿಮಾ ಆಸಕ್ತಿಯ ಮನಸು.. ದೂರದೃಷ್ಟಿ ಇದ್ದ ತಮ್ಮ ವ್ಯಕ್ತಿತ್ವದಿಂದ ಸ್ನೇಹ ಲೋಕವನ್ನ ಸೃಷ್ಟಿಸಿದ್ದ ಅಂಬರೀಶ್ ಮತ್ತು ಅಪ್ಪು ಅನ್ನೋ ಎರಡು ನಕ್ಷತ್ರಗಳನ್ನ ನಾವು ಕಳೆದುಕೊಂಡಿದ್ದೇವೆ.

The post ನಿಜವಾಯ್ತು ಪ್ರೇಮಂ ಪೂಜ್ಯಂ ಬಗ್ಗೆ ರೆಬೆಲ್​ ಸ್ಟಾರ್​​ ಅಂಬರೀಶ್​​ ನುಡಿದಿದ್ದ ಭವಿಷ್ಯ..! appeared first on News First Kannada.

News First Live Kannada


Leave a Reply

Your email address will not be published. Required fields are marked *