ನಿಟ್ಟುಸಿರು ಬಿಟ್ಟ ನಾಗೋಹಳ್ಳಿ ಗ್ರಾಮಸ್ಥರು, ವಿದ್ಯಾರ್ಥಿ ಮೇಲೆ ದಾಳಿ ಮಾಡಿ ಕಾಟ ಕೊಡುತ್ತಿದ್ದ ಕೋತಿಯ ಸೆರೆ | Villagers capture monkey which attacks on students in ramanagara


ನಿಟ್ಟುಸಿರು ಬಿಟ್ಟ ನಾಗೋಹಳ್ಳಿ ಗ್ರಾಮಸ್ಥರು, ವಿದ್ಯಾರ್ಥಿ ಮೇಲೆ ದಾಳಿ ಮಾಡಿ ಕಾಟ ಕೊಡುತ್ತಿದ್ದ ಕೋತಿಯ ಸೆರೆ

ಕೋತಿ

ರಾಮನಗರ: ವಿದ್ಯಾರ್ಥಿ ಮೇಲೆ ದಾಳಿ ಮಾಡಿದ್ದ ಕೋತಿಯನ್ನು ಸೆರೆ ಹಿಡಿಯಲಾಗಿದೆ. ರಾಮನಗರ ತಾಲೂಕಿನ ನಾಗೋಹಳ್ಳಿಯಲ್ಲಿ ಕೋತಿಯೊಂದು ಗ್ರಾಮಸ್ಥರಿಗೆ ವಿಪರೀತ ಕಾಟ ಕೊಡುತ್ತಿತ್ತು. ಜನ ಕೋತಿ ಕಾಟಕ್ಕೆ ಬೇಸತ್ತು ಹೋಗಿದ್ದರು. ಸದ್ಯ ಈ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು ಗ್ರಾಮಸ್ಥರು ಕೋತಿಯನ್ನು ಸೆರೆ ಹಿಡಿದಿದ್ದಾರೆ.

ರಾಮನಗರ ತಾಲೂಕಿನ ನಾಗೋಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ಶಾಲೆಗೆ ನುಗ್ಗಿ ಶಾಲಾ ವಿದ್ಯಾರ್ಥಿಯ ಮೇಲೆ ಕೋತಿ ದಾಳಿ ನಡೆಸಿತ್ತು. ಘಟನೆಯಲ್ಲಿ ಲಿಖಿತ್ (10) ಎಂಬ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿದ್ದವು. ವಿದ್ಯಾರ್ಥಿಯನ್ನು ಮಂಡ್ಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇದೊಂದೆ ಅಲ್ಲಾ ಇದೇ ರೀತಿ ಪದೇ ಪದೇ ವಿದ್ಯಾರ್ಥಿಗಳಿಗೆ ಈ ಕೋತಿ ಕಾಟ ಕೊಡುತ್ತಿತ್ತು. ಹಾಗೂ ಕಳೆದ ಹಲವು ದಿನಗಳಿಂದ ಗ್ರಾಮಸ್ಥರಿಗೂ ಆಟವಾಡಿಸುತ್ತಿತ್ತು. ಹೀಗಾಗಿ ಗ್ರಾಮಸ್ಥರು ಉಪಾಯ ಮಾಡಿ ಕೋತಿಯನ್ನ ಸೆರೆ ಹಿಡಿದಿದ್ದಾರೆ.

ತುಮಕೂರಿನಲ್ಲಿ ಹೃದಯ ಕಲಕುವ ಘಟನೆ
ತಾಯಿ ನಾಯಿ ತನ್ನ ಮರಿಗಳನ್ನ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಕೊಳಕು ಮಂಡಲ ಹಾವನ್ನು ತಾಯಿ ನಾಯಿ ಕಚ್ಚಿಬಿಟ್ಟಿದೆ. ನಾಯಿ ಮತ್ತು ಹಾವಿನ ಕಾದಾಟ ತಿಳಿದು ವಾರಂಗಲ್ ವನ್ಯ ಜೀವಿ ಸಂಸ್ಥೆಯ ದಿಲೀಪ್ ಮತ್ತು ತಂಡದವರು ಸ್ಥಳಕ್ಕೆ ಬಂದಿದ್ದಾರೆ. ಹಾವನ್ನು ಹಿಡಿಯುವಾಗ ನಾಯಿಯು ಅಚಾನಕ್ಕಾಗಿ ಹಾವನ್ನ ಕಚ್ಚಿದೆ. ಆಗ ಹಾವು ಕೂಡ ತಕ್ಷಣ ತಪ್ಪಿಸಿಕೊಂಡು ಹುಲ್ಲಿನ ಬಳಿ ಅವಿತುಕೊಂಡಿದೆ. ಸುಮಾರು ಅರ್ಧ ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಆದ್ರೆ ಕೊಳಕುಮಂಡಲ ಹಾವನ್ನು ಕಚ್ಚಿದ ಪರಿಣಾಮ ನಾಯಿ ಸಾವನ್ನಪ್ಪಿದೆ.

TV9 Kannada


Leave a Reply

Your email address will not be published. Required fields are marked *