ನವದೆಹಲಿ: ಕೊರೊನಾ 2ನೇ ಅಲೆ ಅಬ್ಬರ ಕಡಿಮೆ ಆಗುತ್ತಿದ್ದಂತೆ ಮತ್ತೊಂದು ಆಘಾತ ಎದುರಾಗಿದೆ. ನದಿಯಲ್ಲಿ ಸಂಶೋಧನೆ ನಡೆಸಿದ ಗಾಂಧಿನಗರ ಐಐಟಿಗೆ ಅಹ್ಮದಾಬಾದ್​ನ ಸಬರಮತಿ, ಕಾಂಕರಿಯಾ, ಚಂದೋಲಾ ನದಿಯಲ್ಲಿ ವೈರಸ್ ಇರುವುದು ಪತ್ತೆಯಾಗಿದೆ.

ಪ್ರೊ.ಮನೀಶ್ ಕುಮಾರ್​ ನೇತೃತ್ವದಲ್ಲಿ ಸೋಂಕಿನ ಬಗ್ಗೆ 8 ಸಂಸ್ಥೆಗಳೊಂದಿಗೆ ಗಾಂಧಿನಗರ ಐಐಟಿ ನಡೆಸಿದ ಅಧ್ಯಯನದಲ್ಲಿ ನದಿ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ ನೀರಿನಲ್ಲೂ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಗಾಂಧಿನಗರ ಐಐಟಿ ಭೂವಿಜ್ಞಾನ ವಿಭಾಗದ ಮುಖ್ಯಸ್ಥರ ನೇತೃತ್ವದಲ್ಲಿ ಈ ಕುರಿತ ವರದಿ ತಯಾರಾಗಿದೆ.

2020ರ ಸೆ.3ರಿಂದ 2020ರ ಡಿ.29ರ ವರೆಗೆ ನೀರು ಸಂಗ್ರಹಿಸಿ ಕೊರೊನಾ ಟೆಸ್ಟ್ ನಡೆಸಲಾಗಿದೆ. ಸಬರಮತಿ ನದಿಯಿಂದ 694, ಕಾಂಕರಿಯಾ ನದಿಯಿಂದ 549, ಚಂದೋಲಾ ನದಿಯಿಂದ 402 ಸ್ಯಾಂಪಲ್ ಸಂಗ್ರಹಿಸಲಾಗಿದೆ. ಸಂಗ್ರಹಿಸಿದ ಎಲ್ಲ ನೀರಿನ ಸ್ಯಾಂಪಲ್​ನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ.

ಪ್ರತಿ ವಾರ ಈ ಮೂರು ನದಿಯ ನೀರಿನ ಮಾದರಿ ಸಂಗ್ರಹ ಮಾಡಲಾಗುತ್ತಿತ್ತು ಎನ್ನಲಾಗಿದೆ. ನೀರಿನಲ್ಲಿ ವೈರಸ್​ ಪತ್ತೆಯಾಗಿರುವುದನ್ನು ಸಂಶೋಧನಾ ತಂಡ ಸ್ಪಷ್ಟಪಡಿಸಿದೆ. ಈ ಮೂಲಕ ನೀರಿನಲ್ಲೂ ಮಹಾಮಾರಿ ಕೊರೊನಾ ಸೋಂಕು ಇರೋದು ದೃಢಪಟ್ಟಿದೆ. ದೇಶದ ಎಲ್ಲ ನದಿಗಳ ನೀರನ್ನು ಟೆಸ್ಟ್ ಮಾಡಬೇಕೆಂದು ಅಧ್ಯಯನ ತಂಡ ಮನವಿ ಮಾಡಿದೆ.

The post ನಿಟ್ಟುಸಿರು ಬಿಡುವಾಗಲೇ ಮತ್ತೊಂದು ಆತಂಕ; ನದಿಗಳ ನೀರಿನಲ್ಲೂ ಕೊರೊನಾ ವೈರಸ್ ಪತ್ತೆ appeared first on News First Kannada.

Source: newsfirstlive.com

Source link