ನಿತೀಶ್ ಕುಮಾರ್​​ನ್ನು ಉಪರಾಷ್ಟ್ರಪತಿ ಮಾಡಿ ಎಂದಿದ್ದರು ಜೆಡಿಯು ನಾಯಕರು: ಬಿಜೆಪಿ | JDU wanted Bihar Chief Minister Nitish Kumar to become Vice President says BJP MP Sushil Kumar


ರಾಜ್ಯಸಭಾ ಸಂಸದರಾಗುವ ಮೊದಲು ನಿತೀಶ್ ಕುಮಾರ್ ಅವರ ಉಪ ಮುಖ್ಯಮಂತ್ರಿಯಾಗಿದ್ದ ಮೋದಿ, ಜನತಾ ದಳ (ಯುನೈಟೆಡ್) ನಾಯಕರು ಕುಮಾರ್ ಅವರು ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೋದರೆ ನೀವು ಬಿಹಾರ ಮುಖ್ಯಮಂತ್ರಿಯಾಗಬಹುದು ಎಂಬ…

ನಿತೀಶ್ ಕುಮಾರ್​​ನ್ನು ಉಪರಾಷ್ಟ್ರಪತಿ ಮಾಡಿ ಎಂದಿದ್ದರು ಜೆಡಿಯು ನಾಯಕರು: ಬಿಜೆಪಿ

ನಿತೀಶ್ ಕುಮಾರ್- ತೇಜಸ್ವಿ ಯಾದವ್

ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಉಪರಾಷ್ಟ್ರಪತಿಯಾಗಬೇಕೆಂದು ಅವರ ಪಕ್ಷದ ಕೆಲವರು ಬಯಸಿದ್ದರು ಎಂದು ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ (Sushil Kumar Modi) ಹೇಳಿದ್ದಾರೆ. ರಾಜ್ಯಸಭಾ ಸಂಸದರಾಗುವ ಮೊದಲು ನಿತೀಶ್ ಕುಮಾರ್ ಅವರ ಉಪ ಮುಖ್ಯಮಂತ್ರಿಯಾಗಿದ್ದ ಮೋದಿ, ಜನತಾ ದಳ (ಯುನೈಟೆಡ್) (Janata Dal (United) ನಾಯಕರು ಕುಮಾರ್ ಅವರು ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೋದರೆ ನೀವು ಬಿಹಾರ ಮುಖ್ಯಮಂತ್ರಿಯಾಗಬಹುದು ಎಂಬ ಯೋಜನೆಯೊಂದಿಗೆ ನನ್ನನ್ನು ಸಂಪರ್ಕಿಸಿದ್ದರು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ ಹೇಳಿದ್ದಾರೆ. ಆದಾಗ್ಯೂ ಮೋದಿಯವರ ಈ ಆರೋಪಗಳಿಗೆ ಜನತಾ ದಳ (ಯುನೈಟೆಡ್) ಅಥವಾ ಜೆಡಿಯು ಇನ್ನೂ ಪ್ರತಿಕ್ರಿಯಿಸಿಲ್ಲ. ಕೆಲವು ಜೆಡಿಯು ನಾಯಕರು ಬಂದು, ನಿತೀಶ್ ಕುಮಾರ್ ಅವರನ್ನು ಉಪ ರಾಷ್ಟ್ರಪತಿಯನ್ನಾಗಿ ಮಾಡಿ. ಹಾಗಾದರೆ ನೀವು ಬಿಹಾರದಲ್ಲಿ ಅಧಿಕಾರಕ್ಕೇರಬಹುದು ಎಂದು ಹೇಳಿರುವುದಾಗಿ ಮೋದಿ ಹೇಳಿದ್ದಾರೆ. ಎಂಟನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಮೋದಿ ಈ ಮಾತನ್ನು ಹೇಳಿದ್ದಾರೆ.

ಯಾವುದೇ ರಾಷ್ಟ್ರೀಯ ಮಹತ್ವಾಕಾಂಕ್ಷೆಯನ್ನು ಹೊಂದಿಲ್ಲ ಎಂದು ಹೇಳಿದ ನಿತೀಶ್ ಕುಮಾರ್, ಬಿಜೆಪಿಯ ತಂತ್ರದಿಂದ ತಮ್ಮ ಪಕ್ಷವನ್ನು ಉಳಿಸಲು ಈ ರೀತಿ ಮಾಡಿದ್ದೇನೆ ಎಂದು ಹೇಳಿದ್ದಾರೆ. “ನಾನು ಇರುತ್ತೇನೆ ಅಥವಾ ಬಿಡುತ್ತೇನೆ, ಜನರು ಏನು ಬೇಕಾದರೂ ಹೇಳಿಕೊಳ್ಳಲಿ. ನಾನು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ, 2014 ರಲ್ಲಿ ಬಂದವರು 2024 ರಲ್ಲಿ ಗೆಲ್ಲುತ್ತಾರೆಯೇ ಎಂಬುದು ಪ್ರಶ್ನೆ. ಕಳೆದ ಒಂದೂವರೆ ತಿಂಗಳಲ್ಲಿ ನಾನು ಮಾಧ್ಯಮಗಳೊಂದಿಗೆ ಮಾತನಾಡುವುದನ್ನು ನಿಲ್ಲಿಸಿದೆ” ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಎನ್‌ಡಿಎಗೆ ಮತ ಹಾಕಿದ ಬಿಹಾರದ ಜನತೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ನಿತೀಶ್ ಕುಮಾರ್ ಅವಮಾನಿಸಿದ್ದಾರೆ ಎಂದು ಮೋದಿ ಹೇಳಿದರು. “ತೇಜಸ್ವಿ (ಯಾದವ್) ಅವರು ಉಪ ಮುಖ್ಯಮಂತ್ರಿಯಾಗಿ ಬಿಹಾರದ ಹೊಸ ಸರ್ಕಾರವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾವು ನೋಡಲು ಬಯಸುತ್ತೇವೆ. ಮುಂದಿನ ಚುನಾವಣೆಯ ಮೊದಲು ಸರ್ಕಾರವು ಪತನವಾಗಲಿದೆ ಎಂದಿದ್ದಾರೆ ಮೋದಿ.

ಮಹಾರಾಷ್ಟ್ರದಲ್ಲಿ ಶಿವಸೇನಾಯನ್ನು ವಿಭಜಿಸಲು ನಾವು ಪ್ರಯತ್ನಿಸಲಿಲ್ಲ ಎಂದು ಹೇಳಿದ ಮೋದಿ, ಜೆಡಿಯುವನ್ನು ವಿಭಜಿಸಲು ಬಿಜೆಪಿ ಕೆಲಸ ಮಾಡುತ್ತಿದೆ ಎಂಬ ಜೆಡಿಯು ಆರೋಪಗಳನ್ನು ನಿರಾಕರಿಸಿದರು. ನಿತೀಶ್ ಅವರು ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ)ವನ್ನು ತೊಡೆದುಹಾಕುತ್ತಾರೆ ಮತ್ತು ಲಾಲು ಯಾದವ್ ಅವರ ಅನಾರೋಗ್ಯದ ಲಾಭವನ್ನು ಪಡೆದುಕೊಂಡು ಅದನ್ನು ವಿಭಜಿಸಲು ಪ್ರಯತ್ನಿಸುತ್ತಾರೆ” ಎಂದು ಬಿಜೆಪಿ ಸಂಸದರು ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *