ನಿತೀಶ್ ಜೀ , ಪ್ರಧಾನಿ ಹುದ್ದೆ ಖಾಲಿ ಇಲ್ಲ: ಬಿಜೆಪಿ | Nitish Ji no vacancy for Prime minister Post BJP after Bihar CM Nitish Kumar meets Rahul Gandhi


ನಿತೀಶ್ ಕುಮಾರ್ ಅವರು ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಾಗಿ ಬಿಹಾರವನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದರೆ, ಅನೇಕ ಬಿಹಾರಿ ಯುವಕರಿಗೆ ಉದ್ಯೋಗಾವಕಾಶ ಸಿಗುತ್ತಿತ್ತು ಎಂದು ಬಿಜೆಪಿ ನಾಯಕ ಟ್ವೀಟ್ ಮಾಡಿದ್ದಾರೆ.

ನಿತೀಶ್ ಜೀ , ಪ್ರಧಾನಿ ಹುದ್ದೆ ಖಾಲಿ ಇಲ್ಲ: ಬಿಜೆಪಿ

ರಾಹುಲ್ ಗಾಂಧಿ- ನಿತೀಶ್ ಕುಮಾರ್

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಭೇಟಿಯಾದ ಒಂದು ದಿನದ ನಂತರ, ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ನಿತೀಶ್ ಕುಮಾರ್ ಅವರಲ್ಲಿ ಪ್ರಧಾನಿ ಸ್ಥಾನಕ್ಕೆ ಯಾವುದೇ ಹುದ್ದೆ ಖಾಲಿ ಇಲ್ಲ ಎಂದಿದ್ದಾರೆ. ನಿತೀಶ್ ಕುಮಾರ್ ಅವರು ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಾಗಿ ಬಿಹಾರವನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದರೆ, ಅನೇಕ ಬಿಹಾರಿ ಯುವಕರಿಗೆ ಉದ್ಯೋಗಾವಕಾಶ ಸಿಗುತ್ತಿತ್ತು ಎಂದು ಬಿಜೆಪಿ ನಾಯಕ ಟ್ವೀಟ್ ಮಾಡಿದ್ದಾರೆ. ನಿತೀಶ್ ಕುಮಾರ್ ಅವರು ಕಾಂಗ್ರೆಸ್ಸೇತರರ ಮೊದಲ ಪ್ರವರ್ತಕ ರಾಮ್ ಮನೋಹರ್ ಲೋಹಿಯಾ ಅವರ ಶಿಷ್ಯ ಎಂದು ನೆನಪಿಸಿಕೊಂಡ ಆರ್‌ಎಸ್ ಪ್ರಸಾದ್, ನಿತೀಶ್ ಜೀ, ನೀವು ಇಂದು ಎಲ್ಲಿಗೆ ಹೋಗಿದ್ದೀರಿ? ಇಂದು ನೀವು ಮಾಡುತ್ತಿರುವುದು, ಪ್ರತಿ ಬಾಗಿಲನ್ನು ತಟ್ಟುವುದು ಹೊಸದಲ್ಲ. ನಿಮ್ಮ ಹಿಂದೆ ಅನೇಕರು ಅದೇ ರೀತಿ ಮಾಡಿದರು. ಆದರೆ ಯಾವುದೇ ಫಲಿತಾಂಶ ಸಿಗಲಿಲ್ಲ. ಪ್ರಧಾನಿ ಹುದ್ದೆಗೆ ಯಾವುದೇ ಖಾಲಿ ಇಲ್ಲ. ಆದರೆ ಅನೇಕ ವಿರೋಧ ಪಕ್ಷದ ನಾಯಕರು ಈಗಾಗಲೇ ಸರದಿಯಲ್ಲಿದ್ದಾರೆ. ನೀವೂ ಸರದಿಯಲ್ಲಿ ನಿಲ್ಲಿ ಎಂದಿದ್ದಾರೆ.

ಬಿಹಾರದಲ್ಲಿ ಬಿಜೆಪಿಯೊಂದಿಗಿನ ಮೈತ್ರಿಯಿಂದ ಹೊರಬಂದು ಆರ್‌ಜೆಡಿ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಮಹಾಘಟಬಂಧನ್ ಸರ್ಕಾರವನ್ನು ರಚಿಸಿದ ಒಂದು ತಿಂಗಳ ನಂತರ ನಿತೀಶ್ ಕುಮಾರ್ ದೆಹಲಿಯಲ್ಲಿ ಪ್ರತಿಪಕ್ಷ ನಾಯಕರನ್ನು ಭೇಟಿಯಾಗಿದ್ದಾರೆ. ಸೋಮವಾರ, ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾದ ನಿತೀಶ್ ಮಂಗಳವಾರ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರನ್ನು ಭೇಟಿಯಾಗಲಿದ್ದಾರೆ. ನಿತೀಶ್ ಕುಮಾರ್ ಅವರು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರನ್ನು ಭೇಟಿಯಾದ ನಂತರ ಹೊಸದಿಲ್ಲಿಯಲ್ಲಿ ಈ ನಿಗದಿತ ಸಭೆ ನಡೆದಿದೆ.

ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಮಹಾಘಟಬಂಧನ್‌ನ ಮರುಸಂಘಟನೆಯು ನಿತೀಶ್ ಅವರು ಜಂಟಿ ವಿರೋಧ ಪಕ್ಷದ ಪ್ರಧಾನ ಮಂತ್ರಿಯಾಗುತ್ತಾರೆ ಎಂಬ ಊಹಾಪೋಹಗಳನ್ನು ಹುಟ್ಟುಹಾಕಿದೆ. ರಾಹುಲ್ ಭೇಟಿ ಮಾಡಿದ ನಂತರ ನಿತೀಶ್ ಕುಮಾರ್, ನಾನು ಪ್ರಧಾನಿಯಾಗುವ ಆಕಾಂಕ್ಷೆಯನ್ನು ಹೊಂದಿಲ್ಲ ಎಂದು ಹೇಳಿದರು. ದೆಹಲಿ ಭೇಟಿಗೂ ಮುನ್ನ ಅವರು ಪಾಟ್ನಾದಲ್ಲಿ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿ ಮಾಡಿದ್ದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published.