ನವದೆಹಲಿ: ಭಾರತ ಕೊರೊನಾ ಎರಡನೇ ಅಲೆಯ ವಿರುದ್ಧ ಹೋರಾಟ ನಡೆಸುತ್ತಿದ್ದರೆ ಸ್ವಯಂ ಘೋಷಿತ ದೇವ ಮಾನವ ಮತ್ತೊಮ್ಮೆ ವಿವಾದತ್ಮಾಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

2019ರಲ್ಲಿ ಭಾರತದಿಂದ ಪರಾರಿಯಾಗಿದ್ದ ಅತ್ಯಾಚಾರ ಆರೋಪಿ ನಿತ್ಯಾನಂದ ಸದ್ಯ ಈಕ್ವೆಡಾರ್​ ದ್ವೀಪವೊಂದನ್ನು ಖರೀದಿ ಮಾಡಿ ಅದಕ್ಕೆ ಕೈಲಾಸ ಎಂದು ನಾಮಕರಣ ಮಾಡಿ ಅಲ್ಲಿಯೇ ನೆಲೆಸಿದ್ದಾರೆ. ಈ ನಡುವೆ ನಿತ್ಯಾನಂದ ತನ್ನ ಹೊಸ ವೀಡಿಯೊ ಒಂದನ್ನ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ನಾನು ಭಾರತಕ್ಕೆ ಕಾಲಿಟ್ಟರೆ ಮಾತ್ರ ದೇಶದಲ್ಲಿ ಮಹಾಮಾರಿ ಕೊರೊನಾ ನಿರ್ಮೂಲನೆಯಾಗುತ್ತೆ ಎಂದು ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಹೇಳಿಕೊಂಡಿದ್ದಾರೆ.

ನಿತ್ಯಾನಂದನ ಶಿಷ್ಯರೊಬ್ಬರು ಕೋವಿಡ್-19 ಯಾವಾಗ ಭಾರತವನ್ನು ತೊರೆಯುತ್ತದೆ ಎಂದು ಕೇಳಿದರು. ಇದಕ್ಕೆ ಉತ್ತರಿಸುವಾಗ ನಿತ್ಯಾನಂದನು, ಅಮ್ಮನ್ ದೇವಿಯು ತನ್ನ ಆಧ್ಯಾತ್ಮಿಕ ದೇಹವನ್ನು ಪ್ರವೇಶಿಸಿದ್ದಾಳೆ, ನಾನು ಭಾರತದ ನೆಲದ ಮೇಲೆ ಕಾಲಿಟ್ಟಾಗ ಮಾತ್ರ ಕೋವಿಡ್-19 ಭಾರತವನ್ನು ತೊರೆಯುತ್ತಾಳೆ ಎಂದು ಹೇಳಿಕೆ ನೀಡಿದ್ದಾರೆ..

ಇದನ್ನೂ ಓದಿ:ಕೊರೊನಾ ಸಂಕಷ್ಟ: ‘ಕೈಲಾಸ’ಕ್ಕೆ ಭಾರತದ ಪ್ರವಾಸಿಗರನ್ನ ಬ್ಯಾನ್ ಮಾಡಿದ ನಿತ್ಯಾನಂದ

The post ನಿತ್ಯಾನಂದ ಭಾರತದಲ್ಲಿ ಕಾಲಿಟ್ಟ ಬಳಿಕವೇ ಕರೋನಾ ನಿರ್ಮೂಲನೆ; ಕೈಲಾಸವಾಸಿ ಭವಿಷ್ಯವಾಣಿ..! appeared first on News First Kannada.

Source: newsfirstlive.com

Source link