ಮೊಟ್ಟೆ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರೂ ಬಾಯಿ ಮಾತಿನಲ್ಲಿ ಹೇಳುತ್ತಾರೆ. ಆದರೆ, ನಮ್ಮ ದೇಹಕ್ಕೆ ಹಾಗೂ ಆರೋಗ್ಯಕ್ಕೆ ಮೊಟ್ಟೆ ಸೇವನೆಯಿಂದಾಗುವ ಪ್ರಯೋಜನಗಳು ಏನು ಎಂಬುದನ್ನು ಇಲ್ಲಿ ನೋಡೋಣ ಬನ್ನಿ.

ಪ್ರತಿನಿತ್ಯ ಮೊಟ್ಟೆ ಸೇವನೆ ನಮ್ಮ ಹೊಟ್ಟೆ ಭರ್ತಿ ಮಾಡುವುದರ ಜೊತೆಗೆ ಆರೋಗ್ಯ ಕಾಪಾಡುವಲ್ಲಿಯೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇದಕ್ಕೆ ಕಾರಣ ಮೊಟ್ಟೆಯಲ್ಲಿರುವ ಅನೇಕ ಪೋಷಕಾಂಶಗಳು ಕಂಡುಬರುತ್ತವೆ.

ಮೊಟ್ಟೆಗಳಲ್ಲಿ ಸಾಕಷ್ಟು ಪ್ರೋಟೀನ್ ಇದೆ. ನಾವು ಸೇವಿಸುವ ಆಹಾರದಿಂದ ಹೆಚ್ಚಿನ ಪ್ರಮಾಣದ ಅಮೈನೋ ಆಸಿಡ್ ಅನ್ನು ಪಡೆಯಬಹುದು. ಅದೇ ಒಂದು ಮೊಟ್ಟೆಯಿಂದ ಅಷ್ಟೇ ಪ್ರಮಾಣದ ಪ್ರೋಟೀನ್ ದೇಹ ಸೇರುತ್ತದೆ. ಪ್ರತಿದಿನ ಬೆಳಿಗ್ಗೆ ಎದ್ದು ಮೊಟ್ಟೆಯನ್ನು ತಿಂದರೆ, ದೇಹಕ್ಕೆ ಬೇಕಾಗುವ ಪ್ರೋಟಿನ್ ಸಿಗುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ :

ಮೊಟ್ಟೆಯಲ್ಲಿ ಸೆಲೆನಿಯಮ್ ಎಂಬ ಅಂಶ ಕಂಡುಬರುತ್ತದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಮೊಟ್ಟೆಗಳಲ್ಲಿರುವ ಸೆಲೆನಿಯಮ್ ಸೋಂಕುಗಳ ವಿರುದ್ಧ ಹೋರಾಡಲು ಕೂಡಾ ಸಹಾಯ ಮಾಡುತ್ತದೆ. ಥೈರಾಯ್ಡ್ ಮತ್ತು ಹಾರ್ಮೋನುಗಳನ್ನು ನಿಯಂತ್ರಿಸುವಲ್ಲಿಯೂ ಮೊಟ್ಟೆ ಪ್ರಮುಖ ಪಾತ್ರ ವಹಿಸುತ್ತದೆ.

ಮಾನಸಿಕ ಆರೋಗ್ಯಕ್ಕೂ ಸಹಕಾರಿ :

ಮೊಟ್ಟೆಯಲ್ಲಿರುವ ಕೋಲಿನ್ ಎಂಬ ಪೋಷಕಾಂಶವು ನಮ್ಮ ಮಿದುಳನ್ನು ಸದೃಢವಾಗಿಡಲು ಸಹಾಯ ಮಾಡುತ್ತದೆ. ಮೊಟ್ಟೆಗಳಲ್ಲಿರುವ ಒಮೆಗಾ 3, ವಿಟಮಿನ್ ಗಳು ಮೆದುಳಿನ ಆರೋಗ್ಯಕ್ಕೆ ಬಹು ಮುಖ್ಯವಾಗಿದೆ.

ಪುರುಷರ ದೇಹವನ್ನು ಸದೃಢವಾಗಿರಿಸುತ್ತದೆ :

ಮೊಟ್ಟೆ ಸೇವನೆಯಿಂದ ಪುರುಷರಿಗೆ ಅನೇಕ ಪ್ರಯೋಜನಗಳು ಸಿಗಲಿವೆ. ಮೊದಲೇ ಹೇಳಿದಂತೆ, ಮೊಟ್ಟೆಯಲ್ಲಿ ಪ್ರೋಟೀನ್ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಪ್ರತಿದಿನ ಬೆಳಿಗ್ಗೆ ಒಂದು ಮೊಟ್ಟೆಯನ್ನು ತಿನ್ನುವುದರಿಂದ ಪುರುಷರ ದೈಹಿಕವಾಗಿ ಸದೃಢರಾಗುತ್ತಾರೆ.

ತೂಕ ಕಡಿಮೆ ಮಾಡಲು :

ದೇಹ ತೂಕ ಕಡಿಮೆ ಮಾಡಿಕೊಳ್ಳಲು ಮೊಟ್ಟೆ ಸೇವನೆ ಉಪಯೋಗಕಾರಿ. ದೇಹ ತೂಕ ಕಡಿಮೆ ಮಾಡಲು ಬಯಸುವವರು ಮೊಟ್ಟೆಯ ಹಳದಿ ಭಾಗವನ್ನು ತೆಗೆದು ಬಿಳಿ ಭಾಗವನ್ನಷ್ಟೇ ಸೇವಿಸಬೇಕು.

ಆರೋಗ್ಯ – Udayavani – ಉದಯವಾಣಿ
Read More