‘ನಿನಗೆ ತಾಕತ್ತಿದ್ರೆ ಮಹಾರಾಷ್ಟ್ರದ ಬಗ್ಗೆ ಮಾತಾಡು’- ಉಮಾಶ್ರೀಗೆ ಸಿದ್ದು ಸವದಿ ಚಾಲೆಂಜ್

‘ನಿನಗೆ ತಾಕತ್ತಿದ್ರೆ ಮಹಾರಾಷ್ಟ್ರದ ಬಗ್ಗೆ ಮಾತಾಡು’- ಉಮಾಶ್ರೀಗೆ ಸಿದ್ದು ಸವದಿ ಚಾಲೆಂಜ್

ಬಾಗಲಕೋಟೆ: “ಮಹಾರಾಷ್ಟ್ರದಲ್ಲಿ ನಮ್ಮ ರಾಜ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಜನರು ಸಾಯುತ್ತಿದ್ದಾರೆ. ಆ ಬಗ್ಗೆ ಮಾತನಾಡದೆ ನಮ್ಮ ರಾಜ್ಯದ ಬಗ್ಗೆ ಮಾತಾಡುತ್ತೀರಿ.. ನಿಮಗೆ ನಾಚಿಕೆ ಆಗಬೇಕು, ತಾಕತ್ ಇದ್ರೆ ಮಹಾರಾಷ್ಟ್ರದ ಬಗ್ಗೆ ಮಾತಾಡಿ” ಅಂತ ತೇರದಾಳ ಶಾಸಕ ಸಿದ್ದು ಸವದಿ, ಕಾಂಗ್ರೆಸ್​ನ ಮಾಜಿ ಶಾಸಕಿ ಉಮಾಶ್ರೀಗೆ ಸವಾಲು ಹಾಕಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ಅನೇಕ ಜನರು ಕೋವಿಡ್​ನಿಂದ ಸಾಯುತ್ತಿದ್ದಾರೆ‌‌. ಆದರೆ ಕಾಂಗ್ರೆಸ್​ನವರು ಸಾವಿನ ಸಂದರ್ಭದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಕೋವಿಡ್ ನಮಗಷ್ಟೇ ಬಂದಿಲ್ಲ ಇಡೀ ಜಗತ್ತಿಗೆ ಬಂದಿದೆ ಎಂದರು.

ಡಿ.ಕೆ. ಶಿವಕುಮಾರ್ ನಿನ್ನೆ ಹೇಳ್ತಾನೆ, ಇದೇ ಸರ್ಕಾರ ಕೋವಿಡ್ ತಂದಿದೆ ಅಂತಾ. ಇವ್ರಿಗೆ ಮಾನ ಮರ್ಯಾದೆ ಇಲ್ವಾ? ಇವ್ರು ಸಿಎಂ ಕ್ಯಾಂಡಿಡೇಟ್ ಆದವ್ರಿವ್ರು. ಮಾತಾಡೋಕು ಒಂದು ನಾಲಿಗೆ ಇದೆ. ನಿನಗೆ ತಾಕತ್ತಿದ್ರೆ ಮಹಾರಾಷ್ಟ್ರದ ಬಗ್ಗೆ ಮಾತನಾಡು. ನಮ್ಮ ಮೇಡಮ್ ಬೆಂಗಳೂರಲ್ಲಿ ಕೂತು ವಿಡಿಯೋ ಮಾಡಿ ಕಳಿಸ್ತಾರೆ. ಅಲ್ಲಿ ಮೂಲೆಯೊಳಗೆ ಕೂತು ವಿಡಿಯೋ ಮಾಡಬೇಡಿ. ಬನ್ನಿ ನಾವು- ನೀವು ಕ್ಷೇತ್ರಕ್ಕೆ, ಹಳ್ಳಿ ಹಳ್ಳಿಗೆ ಹೋಗೋಣ ಎಂದು ಸಿದ್ದು ಸವದಿ ಹರಿಹಾಯ್ದರು.

The post ‘ನಿನಗೆ ತಾಕತ್ತಿದ್ರೆ ಮಹಾರಾಷ್ಟ್ರದ ಬಗ್ಗೆ ಮಾತಾಡು’- ಉಮಾಶ್ರೀಗೆ ಸಿದ್ದು ಸವದಿ ಚಾಲೆಂಜ್ appeared first on News First Kannada.

Source: newsfirstlive.com

Source link