ಬೆಂಗಳೂರು: ರಾಜ್ಯದಲ್ಲಿ ಇಂದು 10,311 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,17,357 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ ಒಟ್ಟು 1,27,668 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು 35,297 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 20,88,488ಕ್ಕೆ ಏರಿಕೆಯಾಗಿದೆ.

ಇಂದು 34057 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ, ಈವರೆಗೆ 14,74,678 ಮಂದಿ ಗುಣಮುಖರಾದಂತಾಗಿದೆ. ಇಂದು 344 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 20712ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 5,93,078 ಆ್ಯಕ್ಟಿವ್ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಹೇಳುತ್ತಿವೆ.

ಈ ಮೂಲಕ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ 27.64 ರಷ್ಟಿದೆ. ಇನ್ನು ಬೆಂಗಳೂರು ಒಂದರಲ್ಲೇ ಇಂದು 15191 ಪ್ರಕರಣ್ಳು ಪತ್ತೆಯಾಗಿದೆ. ಇನ್ನು ನಿನ್ನೆಯ ದಿನ ರಾಜ್ಯದಲ್ಲಿ 39,998 ಹೊಸ ಪ್ರಕರಣಗಳು ದಾಖಲಾಗಿದ್ದವು.

The post ನಿನ್ನೆಗಿಂತ ಕೊಂಚ ಇಳಿಮುಖ; ರಾಜ್ಯದಲ್ಲಿ ಇಂದು 35,297 ಹೊಸ ಪ್ರಕರಣ appeared first on News First Kannada.

Source: newsfirstlive.com

Source link