ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟಕ್ಕೆ ಆಸ್ಪತ್ರೆಗಳಾಗಲಿ, ಆಕ್ಸಿಜನ್​ ಸಿಲಿಂಡರ್​ಗಳಾಗಲಿ ಯಾವುದೂ ಸರಿಯಾದ ಸಮಯಕ್ಕೆ ಲಭ್ಯವಾಗ್ತಿಲ್ಲ. ಇದೇ ಸಮಯಕ್ಕೆ ಹುಟ್ಟುಕೊಂಡ ಉಸಿರು ತಂಡ, ಆಕ್ಸಿಜನ್​ ಅಗತ್ಯವಿರುವ ಸೋಂಕಿತರ ಮನೆಗಳಿಗೆ ತೆರಳಿಆಕ್ಸಿಜನ್​ ಕಾನ್ಸೆಂಟ್ರೇಟರ್​ಗಳ ಮೂಲಕ ನೆರವಾಗ್ತಿದ್ದಾರೆ. ನಿನ್ನೆ ನ್ಯೂಸ್​ ಫಸ್ಟ್​ ಕೊಟ್ಟ ಎಕ್ಸ್​​ಕ್ಲೂಸಿವ್​ ಮಾಹಿತಿಯಂತೆ ಉಸಿರು ತಂಡಕ್ಕೆ ಗಜ ಬಲ ಸಿಕ್ಕಿರೋ ಮಾಹಿತಿ ಕನ್ಫರ್ಮ್​ ಆಗಿದೆ.

ಇದನ್ನೂ ಓದಿ: ‘ಉಸಿರು’ ತಂಡಕ್ಕೆ ಗಜ ಬಲ; ಕೊರೊನಾಗೇ ಬಿಗ್ ಚಾಲೆಂಗ್​

ಹೌದು.. ಇದೀಗ ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಉಸಿರು ತಂಡದ ಜೊತೆ ಕೈಜೋಡಿಸಿದ್ದಾರೆ. ಈ ಬಗ್ಗೆ ಸ್ವತಃ ಉಸಿರು ತಂಡ ಅಧಿಕೃತವಾಗಿ ಪೋಸ್ಟರ್​ ಮೂಲಕ ಅನೌನ್ಸ್​ ಮಾಡಿದೆ. ಉಸಿರು ತಂಡ ತೆಗೆದುಕೊಂಡಿರುವ ಇನಿಶಿಯೇಟಿವ್​ ಮೆಚ್ಚಿ ದರ್ಶನ್​ ಉಸಿರು ತಂಡದ ನೆರವಿಗೆ ನಿಂತಿದ್ದಾರೆ.

The post ನಿನ್ನೆಯೇ ನ್ಯೂಸ್​ಫಸ್ಟ್​ ಸುದ್ದಿ; ಸಹಾಯಕ್ಕೆ ಕೈ ಜೋಡಿಸಿದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ appeared first on News First Kannada.

Source: newsfirstlive.com

Source link