ರಾಯಚೂರು: ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ 60 ಹಾಸಿಗೆಗಳ ಮಹಿಳ ಮತ್ತು ಮಕ್ಕಳ ಆಸ್ಪತ್ರೆಯನ್ನು ನಿನ್ನೆ ಮಾನ್ವಿಯ ಶಾಸಕ ರಾಜಾವೆಂಕಟಪ್ಪ ನಾಯಕ ಅವರು ಸಚಿವ ಹಾಲಪ್ಪ ಆಚಾರ್ ಅವರನ್ನು ಕರೆಸಿ ಉದ್ಘಾಟನಾ ಕಾರ್ಯ ನೆರವೇರಿಸಿದ್ದರು.
ಈ ಉದ್ಘಾಟನೆಯ ಸಂದರ್ಭದಲ್ಲಿ ಸಾರ್ವಜನಿಕರು ವೇದಿಕೆ ಮೇಲೆ ಉಪಸ್ಥಿತರಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗೂ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರಲ್ಲಿ ಆಸ್ಪತ್ರೆಗೆ 12 ವೈದ್ಯರು ಸೇರಿದಂತೆ 50 ಸಿಬ್ಬಂದಿಗಳ ಅವಶ್ಯಕತೆ ಇದೆ. ಜೊತೆಗೆ ಆಸ್ಪತ್ರೆಯಲ್ಲಿ ಅಗತ್ಯವಿರುವ ಉಪಕರಣಗಳನ್ನ ತರಿಸುವಲ್ಲಿಯೂ ಶಾಸಕರು ಆಸಕ್ತಿ ತೋರಿಲ್ಲದ ಬಗ್ಗೆ ಪ್ರಶ್ನಿಸಿದ್ದಾರೆ.
ಬರೀ ಉದ್ಘಾಟನೆ ನಾಟಕ ಮಾಡಿ ಜನಸಾಮನ್ಯರಿಗೆ ಮಂಕು ಬೂದಿ ಎರಚಲು ಮುಂದಾಗಿದ್ಯಾಕೆ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಜವಾಬ್ದಾರಿಯುತ ಮಾಧ್ಯಮವಾಗಿ ಜನಸಾಮಾನ್ಯರ ಅನುಕೂಲದ ದೃಷ್ಟಿಯಿಂದ ಪ್ರಶ್ನೆ ಮಾಡಿದ್ರೆ ನಿಮಗ್ಯಾಕೆ ಈ ಪರಿ ಕೋಪ, ಆವೇಶ..? ಎಂದು ಉದ್ಘಾಟನೆಗೆ ಇದ್ದ ಆಸಕ್ತಿ ಆಸ್ಪತ್ರೆ ನಿರ್ವಹಣೆ ವಿಚಾರದಲ್ಲಿ ಯಾಕಿಲ್ಲ ಎಂದು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಆಸ್ಪತ್ರೆಗೆ ವೈದ್ಯರು ಹಾಗೂ ಸಿಬ್ಬಂದಿ ನೇಮಕ ವಿಚಾರವಾಗಿ ಪ್ರಶ್ನಿಸಿದಾಗ ಸಚಿವ ಹಾಲಪ್ಪ ಆಚಾರ್ ಅವರಿದ್ದ ವೇದಿಕೆಯಿಂದಲೇ ಅವಾಜ್ ಹಾಕಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಸಭ್ಯವಾಗಿ ವರ್ತಿಸುವ ಮೂಲಕ ಬೆದರಿಕೆ ಹಾಕಿದ್ದಾರೆ. ಈ ಎಲ್ಲಾ ಕಾರಣಗಳಿಂದ ನಿನ್ನೆ ಉದ್ಘಾಟನೆ ಕಂಡ ಆಸ್ಪತ್ರೆ ಇಂದು ಬಾಗಿಲು ಮುಚ್ಚಿಕೊಂಡು ಬಂದ್ ಆಗಿದೆ.
The post ನಿನ್ನೆ ಉದ್ಘಾಟನೆಗೊಂಡು ಇಂದು ಬಂದ್ ಆದ ಸರ್ಕಾರಿ ಆಸ್ಪತ್ರೆ.. ರೋಗಿಗಳಿಗೆ ಶಾಕ್ appeared first on News First Kannada.