ನಿನ್ನೆ ಕವಿತೆ ಹಾಡಿ ಮೋದಿ ಬಳಿ ವಿಷಾದ ವ್ಯಕ್ತಪಡಿಸಿದ CM ಚನ್ನಿ


ನವದೆಹಲಿ: ಪಂಜಾಬ್​ನಲ್ಲಿ ಪ್ರಧಾನಿ ಭೇಟಿ ವೇಳೆ ನಡೆದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಪಂಜಾಬ್ ಸಿಎಂ ಚರಣ್​ಜಿತ್ ಸಿಂಗ್ ಚನ್ನಿ ಪ್ರಧಾನಿ ಮೋದಿ ಬಳಿ ವಿಷಾದ ವ್ಯಕ್ತಪಡಿಸಿದ್ದಾರೆ.

ನಿನ್ನೆ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಮೋದಿ ವಿಡಿಯೋ ಸಂವಾದ ನಡೆಸಿದ್ರು. ಈ ವೇಳೆ ಚನ್ನಿ, ನೀವು ನಮಗೆಲ್ಲರಿಗೂ ಗೌರವಾನ್ವಿತ ವ್ಯಕ್ತಿಯಾಗಿದ್ದೀರಿ. ನೀವು ಪಂಜಾಬ್​ಗೆ ಭೇಟಿ ಕೊಟ್ಟ ವೇಳೆ ನಡೆದಿದ್ದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

ಜೊತೆಗೆ ನೀವು ಈ ಜಗತ್ತು ಮುಗಿಯೋ ತನಕವೂ ಸುರಕ್ಷಿತವಾಗಿರಿ ಹಾಗೂ ಜಗತ್ತಿಗೆ ಎಂದಿಗೂ ಅಂತ್ಯವೇ ಬರದೇ ಇರಲಿ ಎಂಬ ಹಿಂದಿ ಕವಿತೆಯನ್ನ ಸಭೆಯಲ್ಲಿ ಪಂಜಾಬ್ ಸಿಎಂ ಹೇಳಿದ್ದಾರೆ.

News First Live Kannada


Leave a Reply

Your email address will not be published. Required fields are marked *