ರಾಮನಗರ: ನಗರಸಭೆ ಚುನಾವಣೆಯ ಮತಎಣಿಕೆ ಇಂದು ನಡೆಯುತ್ತಿದ್ದು, 4ನೇ ವಾರ್ಡ್​ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೀಲಾ ಗೋವಿಂದರಾಜು ಗೆಲುವು ಸಾಧಿಸಿದ್ದಾರೆ. ಆದ್ರೆ ವಿಪರ್ಯಾಸವೆಂದರೆ ಗೆಲುವಿನ ಸಂಭ್ರಮಾಚರಣೆ ಮಾಡಲು ಅಭ್ಯರ್ಥಿಯೇ ಇಲ್ಲ. ನಿನ್ನೆ 42 ವರ್ಷದ ಲೀಲಾ ಅವರು ಕೋವಿಡ್​ನಿಂದ ಮೃತಪಟ್ಟಿದ್ದಾರೆ.

ಇಂದು ಮತಎಣಿಕೆಯಲ್ಲಿ ಲೀಲಾ ಗೋವಿಂದರಾಜು 917 ಮತಗಳನ್ನ ಪಡೆದು 810 ಮತಗಳ  ಅಂತರದಿಂದ ಗೆಲವು ಪಡೆದಿದ್ದಾರೆ‌. ಇವರ ಪ್ರತಿಸ್ಪರ್ಧಿಯಾದ ಜೆಡಿಎಸ್ ಅಭ್ಯರ್ಥಿ ಕೇವಲ 107 ಮತಗಳನ್ನು ಪಡೆದಿದ್ದಾರೆ.

ಏಪ್ರಿಲ್ 27 ರಂದು ನಗರಸಭೆ ಚುನಾವಣೆಯ ಮತದಾನ ನಡೆದಿತ್ತು. ಈ ಮಧ್ಯೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಲೀಲಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿನ್ನೆ ಸಾವನಪ್ಪಿದ್ದರು.

ಇದನ್ನೂ ಓದಿ: ಕೊರೊನಾ ಮರಣ ಮೃದಂಗ; ಫಲಿತಾಂಶ ಬರೋ ಮುನ್ನವೇ ರಾಮನಗರ ಕಾಂಗ್ರೆಸ್ ಅಭ್ಯರ್ಥಿ ಸಾವು

ನ್ಯೂಸ್​ಫಸ್ಟ್​ ಕಳಕಳಿ 

ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ಮಾಸ್ಕ್ ಧರಿಸಿ, ಸೋಶಿಯಲ್ ಡಿಸ್ಟನ್ಸ್ ಕಾಪಾಡಿ. ಕೈ ತೊಳೆಯುತ್ತಿರಿ. ಮತ್ತು ಮೇ 1 ರಿಂದ 18ರ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಅರ್ಹರಾಗಿದ್ದು ರೆಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ https://www.cowin.gov.in/  ಇಲ್ಲಿಗೆ ಭೇಟಿ ಕೊಟ್ಟು ನೊಂದಣಿ ಮಾಡಿಕೊಳ್ಳಿ. ಮತ್ತೊಂದು ಮುಖ್ಯ ಸಂಗತಿ ಗಮನಿಸಿ CoWin ಆ್ಯಪ್ ಸಾರ್ವಜನಿಕರಿಗೆ ಅಲ್ಲ. ಹೀಗಾಗಿ ಕಡ್ಡಾಯವಾಗಿ ವೆಬ್​ಸೈಟ್​ನಲ್ಲಿಯೇ ನೊಂದಾಯಿಸಿಕೊಳ್ಳಬೇಕು.

The post ನಿನ್ನೆ ಕೊರೊನಾದಿಂದ ಮೃತಪಟ್ಟ ನಗರಸಭೆ ಕಾಂಗ್ರೆಸ್ ಅಭ್ಯರ್ಥಿ, ಎಲೆಕ್ಷನ್​ನಲ್ಲಿ ಗೆಲುವು appeared first on News First Kannada.

Source: newsfirstlive.com

Source link