ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಾದ ಅಪಘಾತ ಇಂದು ಸಂಜೆ ಬೆಳಕಿಗೆ ಬಂದಿರೋ ಘಟನೆ ನಡೆದಿದೆ. ಜಿಲ್ಲೆಯ ಕಳಸ ತಾಲೂಕಿನ ಸುಂಕಸಾಲೆ ಬಳಿ ಘಟನೆ ನಡೆದಿದ್ದು, 20 ಗಂಟೆಗಳ ಬಳಿಕ ಯುವಕನ ಮೃತ ದೇಹ ಪತ್ತೆಯಾಗಿದೆ. ರಂಜಿತ್ 33 ಮೃತ ವ್ಯಕ್ತಿ.

ಮೃತ ರಂಜಿತ್​, ಸಂಪ್ಲಿ ಗ್ರಾಮದ ನಿವಾಸಿ ಅನ್ನೋದು ಬೆಳಕಿಗೆ ಬಂದಿದೆ. 6 ಅಡಿ ಆಳದ ಕಂದಕಕ್ಕೆ ಬಿದ್ದಿದ್ದರಿಂದ ಯಾರಿಗೂ ಗೊತ್ತಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಬಾಳೂರು ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

The post ನಿನ್ನೆ ರಾತ್ರಿಯಾದ ಅಪಘಾತ, ಇಂದು ಸಂಜೆ ಬೆಳಕಿಗೆ: ಒಂದಿಡೀ ದಿನ ಅನಾಥವಾಗಿತ್ತು ಮೃತದೇಹ appeared first on News First Kannada.

Source: newsfirstlive.com

Source link

Leave a comment