ನಿನ್ನ ಚಿಂತನೆಗಳಿಂದಲೇ ಎಂದಿಗೂ ನಮ್ಮ ಜತೆ ಇರುತ್ತೀಯಾ, ತಮ್ಮ ಪುನೀತ್ನನ್ನು ನೆನೆದು ಭಾವನಾತ್ಮಕ ಪೋಸ್ಟ್ ಮಾಡಿದ ರಾಘಣ್ಣ | Raghavendra rajkumar shares emotional post on remembering of puneeth rajkumar


ನಿನ್ನ ಚಿಂತನೆಗಳಿಂದಲೇ ಎಂದಿಗೂ ನಮ್ಮ ಜತೆ ಇರುತ್ತೀಯಾ, ತಮ್ಮ ಪುನೀತ್ನನ್ನು ನೆನೆದು ಭಾವನಾತ್ಮಕ ಪೋಸ್ಟ್ ಮಾಡಿದ ರಾಘಣ್ಣ

ಪುನೀತ್​ ರಾಜ್​ಕುಮಾರ್ ನೆನಪಲ್ಲಿ ರಾಘವೇಂದ್ರ ರಾಜ್‌ಕುಮಾರ್ (ಫೇಸ್​ಬುಕ್)

ಬೆಂಗಳೂರು: ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ನಮ್ಮನ್ನು ಅಗಲಿ ಇಂದಿಗೆ 12ದಿನಗಳು ಕಳೆದಿವೆ. ಆದರೆ ಅವರ ಅಭಿಮಾನಿಗಳ ಮನಸಲ್ಲಿನ ನೋವು ಸ್ವಲ್ಪವೂ ಕಮ್ಮಿಯಾಗಿಲ್ಲ. ಅವರ ಸಾವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಆ ದೇವರು ನೀಡಿಲ್ಲ. ಪ್ರತಿ ದಿನ ಸಾವಿರಾರು ಅಭಿಮಾನಿಗಳು ಅಪ್ಪು ಸಮಾಧಿ ದರ್ಶನ ಮಾಡ್ತಿದ್ದಾರೆ. ಅಪ್ಪು ಎದ್ದು ಬನ್ನಿ, ಮತ್ತೆ ಹುಟ್ಟಿ ಬನ್ನಿ ಎಂದು ಬಿಕ್ಕಿ ಬಿಕ್ಕಿ ಕಣ್ಣೀರಿನ ಅಭಿಷೇಕ ಮಾಡ್ತಿದ್ದಾರೆ. ಇನ್ನು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಇಂದು ಬೆಳಗ್ಗೆ 11 ಗಂಟೆಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಆರಂಭವಾಗಲಿದೆ. 25 ರಿಂದ 30 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಈ ನಡುವೆ ರಾಘವೇಂದ್ರ ರಾಜ್‌ಕುಮಾರ್(Raghavendra Rajkumar) ಪುನೀತ್ ನೆನೆದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಯಾರಿಗೂ ಗೊತ್ತಾಗದಂತೆ ನೀನು ಸಮಾಜ ಸೇವೆ ಮಾಡಿದೆ. ನಿನ್ನಂತೆ ಸಮಾಜಸೇವೆ ಮಾಡುವ ಶಕ್ತಿಯನ್ನು ನನಗೆ ನೀಡು. ನಿನ್ನ ಚಿಂತನೆಗಳಿಂದಲೇ ಎಂದಿಗೂ ನಮ್ಮ ಜತೆ ಇರುತ್ತೀಯಾ ಎಂದು ತಮ್ಮ ಪುನೀತ್ ನೆನೆದು ರಾಘವೇಂದ್ರ ರಾಜ್‌ಕುಮಾರ್ ಫೇಸ್‌ಬುಕ್ನಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

ಸದಾ ಅಪ್ಪುನನ್ನು ಮಗನೇ ಮಗನೇ ಎಂದು ನೆನೆಪಿಸಿಕೊಳ್ಳುವ ರಾಘಣ್ಣ ಪುನೀತ್​ರನ್ನು ತಮ್ಮನಿಗಿಂತ ಮಗನಂತೆ ಮುದ್ದ ಕಂದಮ್ಮನಂತೆ ಪ್ರೀತಿ ಕೊಡುತ್ತಿದ್ದರು. ಆದರೆ ಪುನೀತ್​ರ ಅಗಲಿಕೆ ರಾಘಣ್ಣನನ್ನು ಕಾಡಿದ್ದು ನಾನು ಒಬ್ಬ ನಿರುದ್ಯೋಗಿ ಆಗಿದ್ದೆ. ನೀನು ನನಗೆ ಸಮಾಜ ಸೇವೆ ಮಾಡುವ ಕೆಲಸ ಕೊಟ್ಟಿದ್ದೀಯಾ, ಯಾರಿಗೂ ಹೇಳದೆ ಕಿವುಡ ಮೂಗನಾಗಿ ಮತ್ತು ಕುರುಡನಾಗಿ ಸಮಾಜ ಸೇವೆ ಮಾಡುವಾಗ ಸದಾ ನಿನ್ನ ಆಲೋಚನೆಗಳೊಂದಿಗೆ ಬಾಳುವ ಆ ಪ್ರೀತಿಯ ಶಕ್ತಿ ನನಗೆ ಕೊಡು ಎಂದು ಫೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಈ ನೋವಿನ ಜತೆ ಬದುಕೋಕೆ ಶಕ್ತಿಕೊಡು ಎಂದು ದೇವರಲ್ಲಿ ಕೇಳಿಕೊಳ್ಳಬೇಕಷ್ಟೆ; ರಾಘವೇಂದ್ರ ರಾಜ್​ಕುಮಾರ್​

TV9 Kannada


Leave a Reply

Your email address will not be published.