ಬೆಂಗಳೂರು: ಸದ್ಯ ಕೊರೊನಾದಿಂದ ನಾವು ತಪ್ಪಿಸಿಕೊಳ್ಳಬೇಕು ಅಂದ್ರೆ ವ್ಯಾಕ್ಸಿನ್ ಒಂದೇ ಮದ್ದು. ಇದೇ ವ್ಯಾಕ್ಸಿನ್‌ಗಾಗಿ ಇಲ್ಲೊಬ್ಬ ವ್ಯಕ್ತಿ ಇನ್ನೇನು ರಿಜಿಸ್ಟರ್‌ ಮಾಡಿಕೊಂಡರಾಯ್ತು ಅಂತಾ ಹೊರಟಿದ್ದ. ಆದ್ರೆ ಅಲ್ಲಿಂದ ಬಂದ ಉತ್ತರವೇ ಈಗ ಶಾಕಿಂಗ್‌ ನ್ಯೂಸ್‌. ಮೊನ್ನೆ ಬೆಡ್‌ ಬ್ಲಾಕಿಂಗ್‌ ದಂಧೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಆದ್ರೆ ಇವತ್ತಿನ ಸ್ಟೋರಿ ನೋಡಿದ್ರೆ ವಾಕ್ಸಿನ್‌ ಕೂಡಾ ದಂಧೆಯಾಗಿಬಿಟ್ಟಿದೆಯಾ ಅನ್ನೋ ಅನುಮಾನ ಮೂಡ್ತಿದೆ.

ವ್ಯಾಕ್ಸಿನ್‌ ಹಾಕಿಸಿಕೊಳ್ಳೋಕೆ ಸದ್ಯ ಜನ ಮುಗಿ ಬೀಳ್ತಿದ್ದಾರೆ. ಯಾವ ವ್ಯಾಕ್ಸಿನ್ ಸೆಂಟರ್ ಮುಂದೆ ನೋಡಿದ್ರೂ ದೊಡ್ಡ ದೊಡ್ಡ ಲೈನ್ ಕಾಣೋದು ಸದ್ಯದ ಪರಿಸ್ಥಿತಿ. ಇಷ್ಟೆಲ್ಲಾ ಒದ್ದಾಡಿ ಜನ ವ್ಯಾಕ್ಸಿನ್ ಪಡಿತಿರೋದು ಕೊರೊನಾ ಅನ್ನೋ ಮಹಾಮಾರಿ ವಿರುದ್ಧ ಓಡಾಡೋಕೆ. ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿರೋ ಕೊರೊನಾ ಭಯವನ್ನ ವ್ಯಾಕ್ಸಿನ್ ಅನ್ನೋ ಒಂದೇ ಒಂದು ಅಸ್ತ್ರ ಜನರಲ್ಲಿ ಧೈರ್ಯ ತಂದಿದೆ. ಆದ್ರೆ ವ್ಯಾಕ್ಸಿನ್ ಹಾಕಿಸಿಕೊಳ್ಳೋಣ ಅಂತಾ ರಿಜಿಸ್ಟರ್ ಮಾಡೋಕೆ ಮುಂದಾಗ್ತಿರೋರಿಗೆ ಆರೋಗ್ಯ ಸೇತು  ಆ್ಯಪ್ ಶಾಕ್ ಕೊಡ್ತಿದೆ.

ವ್ಯಾಕ್ಸಿನ್ ಹಾಕಿಸಿಕೊಳ್ಳೋಕು ಮುಂಚೆ ಆರೋಗ್ಯ ಸೇತು ಆಪ್​ನಲ್ಲಿ ಆಧಾರ್ ನಂಬರ್ ಲಿಂಕ್ ಮಾಡಬೇಕು. ಬಳಿಕ ಬರೋ ಮೆಸೇಜ್ ತೋರ್ಸಿದ್ರೆ ಲಸಿಕೆ ಕೊಡ್ತಾರೆ. ಆದ್ರೀಗ ಆರೋಗ್ಯ ಸೇತು ಆ್ಯಪ್​​​ನಲ್ಲಿ ಆಧಾರ್ ಕಾರ್ಡ್ ನಂಬರ್ ಎಂಟ್ರಿ ಮಾಡ್ತಿದ್ದಂತೆಯೇ ಲಸಿಕೆ ಹಾಕಿಸದಿದ್ರೂ, ವ್ಯಾಕ್ಸಿನೇಷನ್ ಡನ್ ಅಂತಾ ತೋರಿಸ್ತಿದೆ.

ಒಬ್ಬರ ಆಧಾರ್ ಕಾರ್ಡ್ ನಂಬರ್​ನಲ್ಲಿ ಮತ್ತೊಬ್ಬರಿಗೆ ವ್ಯಾಕ್ಸಿನೇಷನ್ ಆಗ್ತಿದೆ ಅನ್ನೋ ಅನುಮಾನ ಹುಟ್ಟುಕೊಂಡಿದೆ. ಅನಿಲ್ ಎಂಬ ವ್ಯಕ್ತಿಯ ಆಧಾರ್ ಕಾರ್ಡ್ ಬಳಸಿ ಮತ್ತೊಬ್ಬರಿಗೆ ಲಸಿಕೆ ನೀಡಿರೋದು ಬೆಳಕಿಗೆ ಬಂದಿದೆ. ಅನಿಲ್​ ಆರೋಗ್ಯ ಸೇತು ಆ್ಯಪ್​ನಲ್ಲಿ ರಿಜಿಸ್ಟರ್ ಮಾಡೋಕೆ ಹೋದಾಗ ಇವರ ಆಧಾರ್​ ಕಾರ್ಡ್​ನಲ್ಲಿ ಮತ್ತೊಬ್ಬರಿಗೆ ವ್ಯಾಕ್ಸಿನ್​ ಹಾಕಿರೋದು ಗೊತ್ತಾಗಿದೆ. ಅನಿಲ್ ಪತ್ನಿ ಆಧಾರ್ ನಂಬರ್​ನಿಂದ ವ್ಯಾಕ್ಸಿನೇಷನ್​ಗೆ  ರಿಜಿಸ್ಟರ್ ಆಗುತ್ತಿದೆ. ಆದರೆ ಅನಿಲ್ ಅವರ ಆಧಾರ್ ಕಾರ್ಡ್​ನಲ್ಲಿ ಈಗಾಗ್ಲೆ ವ್ಯಾಕ್ಸಿನ್ ಹಾಕಲಾಗಿದೆ. ಅನಿಲ್ ಅವರ ತಾಯಿಯ ಹೆಸರಲ್ಲೂ ಬೇರೆಯವ್ರಿಗೆ ವ್ಯಾಕ್ಸಿನ್ ಕೊಡಲಾಗಿದೆ. ವ್ಯಾಕ್ಸಿನೇಷನ್ ಅಕ್ರಮದ ಬಗ್ಗೆ ಸರ್ಕಾರದ ವಿರುದ್ಧ ಅನಿಲ್ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಇವ್ರು ಹೇಳ್ತಿರೋ ಹಾಗೇ ವ್ಯಾಕ್ಸಿನೇಷನ್ ರಿಜಸ್ಟ್ರೇಷನಲ್ಲೂ ದಂಧೆ ನಡೀತಿದ್ಯಾ ಅನ್ನೋ ಪ್ರಶ್ನೆ ಹುಟ್ಟುಕೊಳ್ತಿದೆ. ಬೆಡ್ ಬ್ಲಾಕಿಂಗ್ ದಂಧೆ ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿತ್ತು. ಈಗ ವ್ಯಾಕ್ಸಿನೇಷನ್ನಲ್ಲೂ ಇದೇ ರೀತಿ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಒಟ್ನಲ್ಲಿ, ಲಸಿಕೆ ಹಾಕಿಸಿಕೊಂಡಾದ್ರೂ, ಧೈರ್ಯದಿಂದಿರೋಣ ಅಂತಾ ನಿಟ್ಟುಸಿರುಬಿಟ್ಟ ಜನರಿಗೆ ಆರೋಗ್ಯ ಸೇತು ಆ್ಯಪ್ ಮತ್ತೊಂದು ಶಾಕ್ ಕೊಟ್ಟಿದೆ. ಜನರಿಗೆ ತೋರಿಸ್ತಿರೋ ಮೆಸೇಜ್, ಟೆಕ್ನಿಕಲ್ ಮಿಸ್ಟೇಕಾ ಅಥವಾ ಬೇರೆ ಏನಾದ್ರೂ ನಡಿತಿದ್ಯಾ ಅನ್ನೋದನ್ನ ಪತ್ತೆ ಹಚ್ಚಲೇಬೇಕಿದೆ. ಇಲ್ಲಾ ಅಂದ್ರೆ ಲಸಿಕೆ ವಿತರಣೆಯಲ್ಲೂ ದೊಡ್ಡ ಮಟ್ಟದಲ್ಲಿ ಗೋಲ್​ಮಾಲ್​ ಆಗೋಗುತ್ತೆ.

The post ನಿಮಗೀಗಲೇ ವ್ಯಾಕ್ಸಿನೇಷನ್ ಆಗಿದೆ ಎಂದ ಕೋವಿನ್ ಆ್ಯಪ್.. ಲಸಿಕೆಗೆ ಬಂದವನಿಗೆ ಶಾಕ್ appeared first on News First Kannada.

Source: newsfirstlive.com

Source link