ನಿಮಗೂ ನನ್ನಂತೆ ಪಾಂಡಾ ಆಗಿ ಹುಟ್ಟಬೇಕು ಅನ್ನಿಸ್ತಿದೆಯಾ? ಈ ವಿಡಿಯೋ ನೋಡಿ ಹೇಳಿ – Panda Playing in the snow watch the viral video


Panda playing in the snow : ನಾನೂ ಪಾಂಡಾ ಆಗಿ ಹುಟ್ಟಬಾರದಿತ್ತೇ? ಈಗಲೇ ಅಲ್ಲಿಗೆ ಬಂದುಬಿಡಬೇಕು ಎನ್ನಿಸುತ್ತಿದೆ ಎಂದು ನೆಟ್ಟಿಗರೆಲ್ಲ ತುದಿಗಾಲ ಮೇಲೆ ನಿಂತಿದ್ದಾರೆ. 31.5 ಮಿಲಿಯನ್ ಜನಕ್ಕಿದು ಇಷ್ಟವಾಗಿದೆ ಎಂದಮೇಲೆ…

ನಿಮಗೂ ನನ್ನಂತೆ ಪಾಂಡಾ ಆಗಿ ಹುಟ್ಟಬೇಕು ಅನ್ನಿಸ್ತಿದೆಯಾ? ಈ ವಿಡಿಯೋ ನೋಡಿ ಹೇಳಿ

ಹಿಮದಾಟದಲ್ಲಿ ಪಾಂಡಾ

Viral Video : ನಡೆಯುತ್ತಲೇ ಧೊಪ್ಪನೆ ಬೀಳುತ್ತ ಉರುಳಾಡುತ್ತ ಹತ್ತಿಯುಂಡೆಯಂತೆ ಮುದ್ದುಮುದ್ದಾಗಿ ಚಲಿಸುವ ಪಾಂಡಾಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಈಗ ವೈರಲ್ ಆಗಿರುವ ಈ ವಿಡಿಯೋ ಹಳೆಯದೇ. ಆದರೆ ಮತ್ತೆ ಮತ್ತೆ ನೋಡಬೇಕು ಎನ್ನಿಸುವಷ್ಟು ಮುದ್ದಾಗಿದೆ ಇದರಲ್ಲಿರುವ ಪಾಂಡಾ. ಹಿಮದಲ್ಲಿ ಬೀಳುತ್ತ ಏಳುತ್ತ ಜಾರುತ್ತ ತನ್ನನ್ನೇ ತಾ ಮರೆತುಹೋಗಿದೆ. ಇದನ್ನು ನೋಡುತ್ತಿರುವ ನೀವು ನಿಮ್ಮನ್ನೇ ಕ್ಷಣ ಮರೆಯಲೂಬಹುದು.

They can’t survive in the wild.. pic.twitter.com/t84RceWxhJ

ಈ ಮನಮೋಹಕ ದೃಶ್ಯ ನೆಟ್ಟಿಗರನ್ನು ಮನವನ್ನು ತಣಿಸುತ್ತಿದೆ. 2016ರಲ್ಲಿ ಸ್ಮಿತ್​ಸೋನಿಯನ್​ನ ರಾಷ್ಟ್ರೀಯ ಮೃಗಾಲಯ ಮತ್ತು ಸಂರಕ್ಷಣಾ ಜೀವಶಾಸ್ತ್ರ ಸಂಸ್ಥೆಯು ಈ ವಿಡಿಯೋ ಅನ್ನು ಟ್ವೀಟ್ ಮಾಡಿತ್ತು. ಇದೀಗ @buitengebieden ಮರುಟ್ವೀಟ್ ಮಾಡಿದೆ. ಈತನಕ ಈ ವಿಡಿಯೋ ಅನ್ನು 31.5 ಮಿಲಿಯನ್​ ಜನರು ನೋಡಿದ್ದಾರೆ. ಸಾವಿರಗಟ್ಟಲೆ ಜನ ರೀಟ್ವೀಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ.

ನಾನು ಈಗಲೇ ಈ ಪಾಂಡಾವನ್ನು ತಬ್ಬಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ ಒಬ್ಬರು. ಬಹಳ ಮಜಾ ಪ್ರಾಣಿಗಳು ಇವು. ಈಗಲೇ ಅವುಗಳೊಂದಿಗೆ ಹೋಗಿ ಕುಪ್ಪಳಿಸಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಮಗದೊಬ್ಬರು. ನಾನೂ ಪಾಂಡಾ ಆಗಿಯೇ ಹುಟ್ಟಬೇಕಿತ್ತು, ಆಗ ಹೀಗೆ ಆನಂದದಿಂದ ವಿಹರಿಸಬಹುದಿತ್ತು ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡುತ್ತಿರುವ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ಆಗುತ್ತಿರುವ ವಿಡಿಯೋ ನೋಡಲು ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *