ನವದೆಹಲಿ: ಕೊರೊನಾ ಮಹಾಮಾರಿ ತನ್ನ ರೂಪಾಂತರಿಯ ಅವತಾರವನ್ನ ಎಲ್ಲೆಡೆ ತೋರ್ದಿದೆ. ಇಡೀ ವಿಶ್ವದಲ್ಲೇ ರೌದ್ರ ನರ್ತನ ಪ್ರದರ್ಶಿಸುತ್ತಾ, ಜನರ ಜೀವದ ಜೊತೆ ಚೆಲ್ಲಾಟವಾಡ್ತಿದೆ. ಭಾರತದಲ್ಲಿ ತಾನೆಷ್ಟು ಕ್ರೂರಿ ಅನ್ನೋದನ್ನ ಎಚ್ಚರಿಕೆ ಗಂಟೆಯಾಗಿ ಸಾರುತ್ತಿದೆ. ಈ ನಡುವೆ ಮೊದಲ ಹಾಗೂ ಎರಡನೇ ಅಲೆಯಲ್ಲಿ ಕೊರೊನಾ ಬಂದು ಸಾಕಷ್ಟು ಜನ ಕೊರೊನಾ ಹೆಮ್ಮಾರಿಯನ್ನ ಗೆದ್ದಿದ್ದಾರೆ. ಇದೀಗ, ಯಾರಿಗೆಲ್ಲಾ ಕೊರೊನಾ ಸೋಂಕು ಹಬ್ಬಿತ್ತೋ ಅಂಥವರೆಲ್ಲಾ ತಾವು ದಿನನಿತ್ಯ ಬಳಸೋ ಟೂತ್​ ಬ್ರಷ್​ ಅಥವಾ ಟಂಗ್​ಕ್ಲೀನರ್​ನ್ನ ಚೇಂಜ್​ ಮಾಡಲೇ ಬೇಕು ಅಂತ ದೆಹಲಿಯ ಲೇಡಿ ಹಾರ್ಡಿಂಗ್​ ಮೆಡಿಕಲ್​ ಕಾಲೇಜಿನ ಡೆಂಟಲ್​ ಸರ್ಜರಿ ಡಿಪಾರ್ಟ್​ಮೆಂಟ್​ನ ಹೆಚ್​ಒಡಿ ಡಾ.ಪ್ರವೇಶ್​ ಮೆಹ್ರಾ ಸ್ಪಷ್ಟ ಪಡಿಸಿದ್ದಾರೆ.

20 ದಿನದೊಳಗೆ ನಿಮ್ಮ ಟೂತ್​ಬ್ರಷ್​ನ್ನ ಚೇಂಜ್​ ಮಾಡ್ಬೇಕು
ಕೊರೊನಾ ಸೋಂಕು ಬಂದವ್ರು, ಅದ್ರಲ್ಲೂ ಯಾರೂ ಹೋಂ ಐಸೋಲೇಷನ್​ನಲ್ಲಿ ತಮ್ಮ ಫ್ಯಾಮಿಲಿ ಜೊತೆಯೇ ಮನೆಯಲ್ಲಿಯೇ ವಾಸವಿರ್ತಾರೋ ಅಂಥವರು 20 ದಿನದೊಳಗೆ ತಮ್ಮ ಟೂತ್​​ಬ್ರಷ್​ನ್ನ ಚೇಂಜ್​ ಮಾಡ್ಬೇಕು. ಕಾರಣ, ಈ ಬ್ರಷ್​ನಿಂದ ಮನೆಯ ಬೇರೆ ಸದಸ್ಯರಿಗೂ ಹರಡೋ ಸಾಧ್ಯತೆ ಹೆಚ್ಚಿರುತ್ತೆ ಅನ್ನೋ ಕಾರಣಕ್ಕೆ ಅಂತಾರೆ ವೈದ್ಯರು. ಅಲ್ಲದೇ, ಟೂತ್​ಬ್ರಷ್​ನ್ನ ಚೇಂಜ್​ ಮಾಡದೇ ಇದ್ದಲ್ಲಿ ಬ್ರಷ್​ನಲ್ಲಿ ಕೀಟಾಣುಗಳು ಹುಟ್ಟಿಕೊಳ್ಳುತ್ತವೇ.ಇದರಿಂದ ಶ್ವಾಸದಲ್ಲಿ ಸೋಂಕು ಹೆಚ್ಚಾಗೋ ಸಾಧ್ಯತೆ ಇರುತ್ತೆ ಅನ್ನೋದು ವೈದ್ಯರ ಸಲಹೆ.

ಒಬ್ಬ ಕೊರೊನಾ ಸೋಂಕಿತ ಮಾತನಾಡಿದ್ರೆ, ಕೆಮ್ಮಿದರೆ, ಸೀನದರೇ ಸೋಂಕು ಮತ್ತೊಬ್ಬರಿಗೆ ತಗುಲುತ್ತೆ ಅಂಥದ್ರಲ್ಲಿ, ತಾನೂ ಉಪಯೋಗಿಸಿರೋ ಟೂತ್​ಬ್ರಷನ್ನ 20 ದಿನದೊಳಗೆ ಚೇಂಜ್​ ಮಾಡದಿದ್ದರೇ, ಮತ್ತೆಷ್ಟು ಜನರಿಗೆ ಸೋಂಕು ತಗುಲಬಹುದು ನೀವೇ ಯೋಚಿಸಿ. ಹೀಗಾಗಿ, ನೀವು ಸುರಕ್ಷಿತವಾಗಿರಿ, ನಿಮ್ಮವರನ್ನೂ ಸುರಕ್ಷಿತವಾಗಿರಿಸಿ.

The post ನಿಮಗೆ ಕೋವಿಡ್​ ಸೋಂಕು ತಗುಲಿತ್ತಾ? ಹಾಗಾದ್ರೆ ನಿಮ್ಮ ಟೂತ್​ಬ್ರಷ್​ನ್ನ ಬದಲಾಯಿಸಿರಲೇಬೇಕು! appeared first on News First Kannada.

Source: newsfirstlive.com

Source link