ನವದೆಹಲಿ: ನಿಮಗೆ 18 ವರ್ಷ ವಯಸ್ಸಾಗಿದೆಯಾ? ಮೇ 1 ನೇ ತಾರೀಖಿನಿಂದ ವ್ಯಾಕ್ಸಿನ್ ಪಡೆಯಲು ಬಯಸಿದ್ದೀರಾ? ಹಾಗಿದ್ದರೆ ನೀವು ಈ ಎಲ್ಲ ವಿವರಗಳನ್ನು ತಿಳಯನೇಕು. ಯಾಕಂದ್ರೆ ಕೆಲವು ಕಡೆ ವ್ಯಾಕ್ಸಿನ್ ಇದೆ ಎನ್ನಲಾಗ್ತಿದೆ.. ಇನ್ನೂ ಕೆಲವು ಕಡೆ ವ್ಯಾಕ್ಸಿನ್ ಇಲ್ಲ ಎನ್ನಲಾಗ್ತಿದೆ. ಹೀಗಾಗಿ ವ್ಯಾಕ್ಸಿನ್ ಸೆಂಟರ್​ಗೆ ಹೋಗಿ.. ತೊಂದರೆ ಅನುಭವಿಸುವುದಕ್ಕಿಂತ ಈ ವಸ್ತುನಿಷ್ಠ ವಿವರಗಳನ್ನು ತಿಳಿಯುವುದು ಸಮಂಜಸ.
ಹೌದು ಸುನಾಮಿಯಂತೆ ಹರಡುತ್ತಿರುವ ಕೊರೊನಾ ವಿರುದ್ಧ ಹೋರಾಟಕ್ಕಿಳಿದಿರೋ ಕೇಂದ್ರ ಸರ್ಕಾರ ಯುದ್ಧೋಪಾದಿಯಲ್ಲಿ ವ್ಯಾಕ್ಸಿನೇಷನ್ ನಡೆಸುತ್ತಿದೆ. ರಾಜ್ಯಸರ್ಕಾರಗಳು ವೇಗವಾಗಿ ವ್ಯಾಕ್ಸಿನೇಷನ್ ನಡೆಸಿ ದೇಶವನ್ನು ಕೊರೊನಾ ಮುಕ್ತವಾಗಿಸಲೆಂದು ಕೋಟಿ ಕೋಟಿ ಡೋಸ್ ವ್ಯಾಕ್ಸಿನ್​ನ್ನು ರವಾನೆ ಮಾಡಿದೆ. ಹಾಗಾದ್ರೆ ಈವರೆಗೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಕಳಿಸಿರೋ ವ್ಯಾಕ್ಸಿನ್ ಎಷ್ಟು..?

ಕೇಂದ್ರ ಆರೋಗ್ಯ ಇಲಾಖೆಯ ಅಂಕಿ-ಅಂಶಗಳು

1. ಇಲ್ಲಿಯವರೆಗೆ ಕೇಂದ್ರ ಸರ್ಕಾರ 16.16 ಕೋಟಿ ಡೋಸ್ ಲಸಿಕೆಯನ್ನು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರಬರಾಜು ಮಾಡಿದೆ.
2. ತಲಾ 1 ಕೋಟಿಗೂ ಹೆಚ್ಚು ಡೋಸ್ ಲಸಿಕೆ ರಾಜ್ಯಗಳ ಬಳಿ ಇವೆ.
3. ಮುಂದಿನ ಮೂರು ದಿನಗಳಲ್ಲಿ ಹೆಚ್ಚುವರಿಯಾಗಿ 20 ಲಕ್ಷ ಡೋಸ್​ಗಳನ್ನ ರಾಜ್ಯಗಳಿಗೆ ರವಾನೆ ಮಾಡಲಾಗುತ್ತೆ.

ಕೇಂದ್ರದಿಂದ ರಾಜ್ಯಗಳಿಗೆ ರವಾನೆಯಾದ ಡೋಸ್​ಗಳ ಅಂಕಿ-ಅಂಶ

ಹಾಗಾದ್ರೆ ರಾಜ್ಯದ ಅಂಕಿ-ಅಂಶಗಳು ಏನು ಹೇಳುತ್ತವೆ..?

1. ಇಲ್ಲಿಯವರೆಗೆ 98,47,900 ಡೋಸ್ ಕರ್ನಾಟಕ ರಾಜ್ಯಕ್ಕೆ ರವಾನೆಯಾಗಿದೆ
2. ಕರ್ನಾಟಕಕ್ಕೆ 6,66,27,000 ಡೋಸ್ ವ್ಯಾಕ್ಸಿನ್ ಬೇಕು ಅಂತ ಅಂದಾಜಿಸಲಾಗಿದೆ.
3. ಕರ್ನಾಟಕದಲ್ಲಿ 0.1 ರಷ್ಟು ಲಸಿಕೆ ಹಾಳಾಗಿದೆ
4. ಇಲ್ಲಿಯವರೆಗೆ ಲಸಿಕೆಯಲ್ಲಿ ಹಾಳಾಗಿರೋದು ಸೇರಿ 92,90,551 ಡೋಸ್ ಬಳಕೆಯಾಗಿದೆ
5. ಕರ್ನಾಟಕ ರಾಜ್ಯದ ಬಳಿ 5,57,349 ಡೋಸ್ ಬಳಕೆಗೆ ಸಿದ್ಧವಾಗಿದೆ

ರಾಜ್ಯಗಳ ಬಳಿ ಸದ್ಯ ಉಳಿದಿರುವ ವ್ಯಾಕ್ಸಿನ್​(ಡೋಸ್​ಗಳಲ್ಲಿ)
ರಾಜ್ಯಗಳು ವೇಸ್ಟ್​​ ಮಾಡಿದ ವ್ಯಾಕ್ಸಿನ್​ ಅಂಕಿ-ಅಂಶ

The post ನಿಮಗೆ 18 ಆಯ್ತಾ? ವ್ಯಾಕ್ಸಿನ್ ಪಡಿಬೇಕಾ? ಹಾಗಿದ್ರೆ ಇದನ್ನು ತಿಳಿಯದಿದ್ದರೆ ನಿಮಗೇ ತೊಂದರೆ.. appeared first on News First Kannada.

Source: newsfirstlive.com

Source link