ಬೆಂಗಳೂರು: ರಾಜ್ಯ ಸರ್ಕಾರ 18 ರಿಂದ 44 ವಯಸ್ಸಿನ ನಡುವಿನ ನಾಗರೀಕರಿಗೆ ಕೋವಿಡ್-19 ಲಸಿಕೆಯನ್ನು ನೀಡುವ ಯೋಜನೆಯನ್ನು ಶೀಘ್ರದಲ್ಲಿ ರಾಜ್ಯಾದ್ಯಂತ ಆರಂಭಿಸಲಿದೆ. ಈ ಅಭಿಯಾನಕ್ಕೆ ಒಂದು ಕೋಟಿ ಲಸಿಕೆಗಳನ್ನು ಖರೀದಿ ಮಾಡಲು ಕ್ರಮ ವಹಿಸಲಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.

3ನೇ ಹಂತದ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳುವ ಕುರಿತು ರಾಜ್ಯಮಟ್ಟದ ಇಲಾಖಾ ಕಾರ್ಯದರ್ಶಿಗಳೊಂದಿಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ತಯಾರಿ ಸಭೆಯನ್ನ ಉದ್ದೇಶಿ ಮಾತನಾಡಿದ ರವಿಕುಮಾರ್, ರಾಜ್ಯದಲ್ಲಿರುವ 18-44 ವಯಸ್ಸಿನ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯವಿರುವ ಲಸಿಕೆಯನ್ನು ಖರೀದಿಸಲು ನಿರ್ಧರಿಸಲಾಗಿದೆ. ಈಗಾಗಲೇ ಒಂದು ಕೋಟಿ ಲಸಿಕೆಗಳಿಗೆ ಸಂಬಂಧಿಸಿದ ಕಂಪನಿಗೆ ಬೇಡಿಕೆ ಸಲ್ಲಿಸಲಾಗಿದ್ದು, ಲಸಿಕೆ ತಯಾರಿಕ ಕಂಪನಿ ಸರಬರಾಜು ಆರಂಭಿಸಿದ ತಕ್ಷಣದಿಂದ ಯೋಜನೆ ಆರಂಭಿಸಲಾಗುವುದು ಎಂದರು.

18 ರಿಂದ 44 ವಯಸ್ಸಿನ ಪ್ರತಿಯೊಬ್ಬರು ಈ ಲಸಿಕೆ ಪಡೆಯಲು ಕೋ-ವಿನ್​ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳುವುದು ಅಗತ್ಯವಿರುತ್ತದೆ. ಈ ಪೋರ್ಟಲ್​​​ನಲ್ಲಿ ಲಸಿಕೆಗೆ ಸಂಬಂಧಿಸಿದಂತೆ ಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ. ನೋಂದಣಿ ನಂತರ ಲಸಿಕೆ ಪಡೆಯುವ ಸಮಯ ಹಾಗೂ ದಿನಾಂಕವನ್ನು ತಿಳಿಯಬಹುದಾಗಿದೆ. ಸದ್ಯ ಚಾಲ್ತಿಯಲ್ಲಿರುವ 45 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿರುವ ಲಸಿಕಾ ಕಾರ್ಯಕ್ರಮ ಮೇ 1ರ ನಂತರ ಸಹ ಮುಂದುವರೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.

The post ನಿಮಗೆ 18 ವರ್ಷ ದಾಟಿದೆಯಾ? ಹಾಗಿದ್ರೆ ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ ಮುಖ್ಯಕಾರ್ಯದರ್ಶಿಗಳು appeared first on News First Kannada.

Source: newsfirstlive.com

Source link