‘ನಿಮಗೊಂದೇ ಕನ್ನಡದ ಬಗ್ಗೆ ಕಾಳಜಿ ಇರೋದಾ’; ಪಾಠ ಮಾಡಲು ಬಂದ ರೂಪೇಶ್ ರಾಜಣ್ಣಗೆ ಪ್ರಶ್ನೆ ಮಾಡಿದ ಮಯೂರಿ | I am Also Love Kannada Talk fight between Mayuri and Roopesh Rajanna


‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ ಮಧ್ಯೆ ಕಿತ್ತಾಟ ಜೋರಾಗಿದೆ. ಸಣ್ಣ ಸಣ್ಣ ವಿಚಾರಕ್ಕೂ ಇಬ್ಬರ ಮಧ್ಯೆ ಕಿತ್ತಾಟ ಆರಂಭ ಆಗುತ್ತಿದೆ. ಇದನ್ನು ನೋಡಿ ಮನೆ ಮಂದಿಯವರಿಗೂ ಬೇಸರ ಆಗಿದೆ.

‘ನಿಮಗೊಂದೇ ಕನ್ನಡದ ಬಗ್ಗೆ ಕಾಳಜಿ ಇರೋದಾ’; ಪಾಠ ಮಾಡಲು ಬಂದ ರೂಪೇಶ್ ರಾಜಣ್ಣಗೆ ಪ್ರಶ್ನೆ ಮಾಡಿದ ಮಯೂರಿ

ಮಯೂರಿ-ರೂಪೇಶ್

ರೂಪೇಶ್ ರಾಜಣ್ಣ (Roopesh Rajanna) ಅವರು ಕನ್ನಡ ಪರ ಹೋರಾಟ ಮಾಡಿ ಗುರುತಿಸಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ವೃತ್ತಿ ಬದುಕು ಆರಂಭಿಸಿದ ಅವರು ನಂತರ ಕನ್ನಡ ಪರ ಹೋರಾಟಕ್ಕೆ ಇಳಿದರು. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ. ಈಗ ಬಿಗ್ ಬಾಸ್ (Bigg Boss) ಮನೆಯಲ್ಲಿ ಅವರು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮಧ್ಯೆ ಎಲ್ಲರಿಗೂ ಬುದ್ಧಿವಾದ ಹೇಳಲು ಹೋಗಿ ಬೈಸಿಕೊಂಡಿದ್ದಾರೆ ರೂಪೇಶ್ ರಾಜಣ್ಣ.

‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ ಮಧ್ಯೆ ಕಿತ್ತಾಟ ಜೋರಾಗಿದೆ. ಸಣ್ಣ ಸಣ್ಣ ವಿಚಾರಕ್ಕೂ ಇಬ್ಬರ ಮಧ್ಯೆ ಕಿತ್ತಾಟ ಆರಂಭ ಆಗುತ್ತಿದೆ. ಇದನ್ನು ನೋಡಿ ಮನೆ ಮಂದಿಯವರಿಗೂ ಬೇಸರ ಆಗಿದೆ. ‘ಮನೆಯಲ್ಲಿ ಅನೇಕರು ನೀರು ಪೋಲು ಮಾಡುತ್ತಿದ್ದಾರೆ. ಲೋಟ ತೊಳೆಯುವಾಗ ನೀರು ಬಿಟ್ಟೇ ಇರುತ್ತಾರೆ. ಆ ರೀತಿ ಮಾಡಬೇಡಿ. ನಾವು ನೀರು ಉಳಿಸಬೇಕಿದೆ’ ಎಂಬ ಮಾತನ್ನು ಹೇಳಿದರು ರೂಪೇಶ್ ರಾಜಣ್ಣ. ಈ ನಿಯಮವನ್ನು ಪಾಲಿಸುತ್ತಿರುವ ಕೆಲವರು ಈ ಬಗ್ಗೆ ಸಿಟ್ಟಾದರು.

ಇದನ್ನು ರೂಪೇಶ್ ರಾಜಣ್ಣ ಅವರು ಹೇಳಿದ್ದು ಪ್ರಶಾಂತ್ ಸಂಬರ್ಗಿ ಅವರಿಗೆ ಆಗಿತ್ತು. ಈ ವಿಚಾರಕ್ಕೆ ಪ್ರಶಾಂತ್ ಕೂಡ ರಾಂಗ್ ಆದರು. ‘ಇದನ್ನೆಲ್ಲ ಏಳನೇ ಕ್ಲಾಸ್​ ಮಕ್ಕಳಿಗೆ ಹೇಳಿ ಕೊಡ್ತಾರೆ’ ಎಂಬ ಮಾತನ್ನು ಪ್ರಶಾಂತ್ ಹೇಳಿದರು. ‘ಪ್ರಶಾಂತ್ ಅವರೇ ಒಂದು ವಿಚಾರವಾದರೂ ಒಪ್ಪಿಕೊಳ್ಳಿ’ ಎಂದು ರೂಪೇಶ್ ರಾಜಣ್ಣ ಹೇಳಿದರು. ಇಬ್ಬರ ಮಧ್ಯೆ ಕಿತ್ತಾಟ ಮುಂದುವರಿದೇ ಇತ್ತು.

TV9 Kannada


Leave a Reply

Your email address will not be published.