ದಾವಣಗೆರೆ: ಕೊರೊನಾ ಸೋಂಕಿಗೆ ಸಿಲುಕಿದ್ದ ಕ್ಷೇತ್ರದ ಜನರ ಸಹಾಯಕ್ಕೆ ನಿಂತ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೆ ಗಾಯಕ ರಾಜೇಶ್ ಕೃಷ್ಣನ್ ಅಭಿನಂದನೆ ಹೇಳಿದ್ದಾರೆ.

ಕೋವಿಡ್ ಸಮಯದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವುದಕ್ಕೆ ಅಭಿನಂಧನೆ ಸಲ್ಲಿಸಿದ ರಾಜೇಶ್ ಕೃಷ್ಣನ್.. ಶಾಸಕ ರೇಣುಕಾಚಾರ್ಯ ಹಗಲಿರುಳು ಕೋವಿಡ್ ಸೋಂಕಿತರ ಸೇವೆ ಮಾಡುತಿದ್ದಾರೆ. ಹೊನ್ನಾಳಿಯ ಜನ ಒಳ್ಳೇ ಜನ ಸೇವಕನನ್ನ ಆಯ್ಕೆ ಮಾಡಿದ್ದೀರಿ ಎಂದಿದ್ದಾರೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್​ನಲ್ಲಿ ರೇಣುಕಾಚಾರ್ಯ ವಾಸ್ತವ್ಯ ಹೂಡಿ ಜನರ ರಕ್ಷಣೆ ಮಾಡುತ್ತಿದ್ದರು. ಅವರ ಕಾರ್ಯ ವೈಖರಿ ಕಂಡು ರಾಜೇಶ್ ಕೃಷ್ಣನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

The post ‘ನಿಮ್ಮಂಥ ಶಾಸಕರು ಜನರಿಗೆ ಸಿಕ್ಕಿರೋದು ನಮ್ಮೆಲ್ಲರ ಭಾಗ್ಯ’- ರೇಣುಕಾಚಾರ್ಯ ಬಗ್ಗೆ ರಾಜೇಶ್ ಕೃಷ್ಣನ್ ಮೆಚ್ಚುಗೆ appeared first on News First Kannada.

Source: newsfirstlive.com

Source link