ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹುಟ್ಟುಹಬ್ಬಕ್ಕೆ ಶುಭಾಶಯ ಪತ್ರ ಬರೆದಿರುವ ಮಾಜಿ ಸಿಎಂ ಎಸ್​. ಎಂ ಕೃಷ್ಣಾ ದೇವೇಗೌಡರನ್ನ ಹಾಡಿಹೊಗಳಿದ್ದಾರೆ.

88ನೇ ವಸಂತಕ್ಕೆ ಕಾಲಿಟ್ಟ ನಿಮಗೆ ಹಾರ್ದಿಕ ಶುಭಾಶಯಗಳು.. ಹಾಸನ ಜಿಲ್ಲೆಯ ರೈತಾಪಿ ವರ್ಗಕ್ಕೆ ನಿಮ್ಮ ದುಡಿಮೆ ಆಪಾರ. ಇಳಿ ವಯಸ್ಸಿನಲ್ಲೂ ನಿಮ್ಮ ಹೋರಾಟದ ಕಿಚ್ಚು ಕುಂದಿಲ್ಲ. ಕಾವೇರಿ ಕೃಷ್ಣ ಜ್ವಲಂತ ಸಮಸ್ಯೆಗಳ ಬಗ್ಗೆ ನಿಮ್ಮ ಹೋರಾಟ ಪ್ರಮುಖವಾದುದು. ನಿಮ್ಮಂತಹ ಹೋರಾಟಗಾರರನ್ನು ಪಡೆದ ನಮ್ಮ ನಾಡು ಧನ್ಯ ಎಂದು ಶುಭಾಶಯ ಪತ್ರದಲ್ಲಿ ದೇವೇಗೌಡರನ್ನ ಹೊಗಳಿದ್ದಾರೆ.

 

The post ನಿಮ್ಮನ್ನು ಪಡೆದ ನಮ್ಮ ನಾಡು ಧನ್ಯ: ದೇವೇಗೌಡರನ್ನ ಹೊಗಳಿದ ಎಸ್​.ಎಂ. ಕೃಷ್ಣಾ appeared first on News First Kannada.

Source: newsfirstlive.com

Source link