ಉಡುಪಿ: ಲಾಕ್‍ಡೌನ್ ಜೂನ್ 7 ರವರೆಗೆ ಮುಂದುವರಿದರೂ ಉಡುಪಿಯಲ್ಲಿ ಸದ್ಯ ನಿಯಮಾವಳಿಯಲ್ಲಿ ಬದಲಾವಣೆ ಇಲ್ಲ. ಸದ್ಯದ ಮಟ್ಟಿಗೆ ಇರುವ ನಿಯಮಾವಳಿಗಳನ್ನು ಮುಂದುವರಿಸುತ್ತೆವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರತಿಕ್ರಿಯೆ ನೀಡಿದ್ದಾರೆ.

ಕೆಲವೊಂದು ಕಡೆಗಳಲ್ಲಿ ರಿಕ್ಷಾಗಳು ಅನಗತ್ಯ ಸಂಚಾರ ಮಾಡುವುದು ಕಂಡುಬರುತ್ತಿದೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ರಿಕ್ಷಾಗಳನ್ನು ಮುಟ್ಟುಗೋಲು ಹಾಕಲಾಗುತ್ತದೆ. ಕೇವಲ ಆಸ್ಪತ್ರೆಗೆ ಸಂಚರಿಸಲು ಮಾತ್ರ ರಿಕ್ಷಾ ಬಳಕೆ ಮಾಡಬಹುದು. ದಿನಸಿ ಖರೀದಿಗೆ ಸದ್ಯ ಇರುವ ಸಮಯ ಸೂಕ್ತ ಆಗಿದ್ದು, ಒಳ್ಳೆಯ ರೀತಿಯಲ್ಲಿ ಸುಗಮವಾಗಿ ವ್ಯವಹಾರ ನಡೆಯುತ್ತಾ ಇದೆ. ಎರಡು ಅಥವಾ ಮೂರು ದಿನ ಮಾತ್ರ ಖರೀದಿಗೆ ಅವಕಾಶ ನೀಡುವುದರಿಂದ ಮತ್ತೆ ಗೊಂದಲ ಉಂಟಾಗುತ್ತದೆ.

ಇರುವ ನಿಯಮಾವಳಿಗಳನ್ನೇ ನಾವು ಮುಂದುವರಿಸುತ್ತೆವೆ. ಅದೇ ರೀತಿ ದಿನಸಿ ಮತ್ತು ಅಗತ್ಯ ಸಾಮಾಗ್ರಿಗಳನ್ನು ಮನೆಯ ಹತ್ತಿರದ ಅಂಗಡಿಯಿಂದ ಮಾತ್ರವೇ ಖರೀದಿಸುವುದು. ದಿನಸಿ ಖರೀದಿಯ ನೆಪದಲ್ಲಿ ನಗರಕ್ಕೆ ಬಂದರೆ ವಾಹನಗಳನ್ನು ಸೀಜ್ ಮಾಡಲಾಗುತ್ತದೆ. ನಗರಸಭಾ ವ್ಯಾಪ್ತಿಯಲ್ಲಿ ಕೂಡ ತಮ್ಮ ವಾರ್ಡ್ ಬಿಟ್ಟು ಮತ್ತೊಂದು ವಾರ್ಡ್ ನ ವ್ಯಾಪ್ತಿಯಲ್ಲಿ ದಿನಸಿ ಖರೀದಿ ನೆಪದಲ್ಲಿ ವಾಹನ ಸಂಚಾರ ಮಾಡಿಸಿದರೆ ಅಂತಹ ವಾಹನಗಳನ್ನು ಕೂಡ ಮುಟ್ಟುಗೋಲು ಹಾಕಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

The post ನಿಮ್ಮ ಏರಿಯಾದಲ್ಲೇ ಖರೀದಿಸಿ, ಅನಗತ್ಯ ಆಟೋ ಓಡಾಡಿದರೆ ಸೀಜ್: ಉಡುಪಿ ಡಿಸಿ appeared first on Public TV.

Source: publictv.in

Source link