ನಿಮ್ಮ ಕಿಡ್ನಿ ಹಾನಿಯಾಗುತ್ತಿದೆ ಎನ್ನುವುದಕ್ಕೆ ಈ ರೋಗ ಲ್ಷಣಗಳ ಕಾರಣ | Health tips warning signs and symptoms of kidney disease


ಈ ರೋಗಲಕ್ಷಣಗಳು ನಿಮ್ಮ ಮೂತ್ರಪಿಂಡ ಕಾಯಿಲೆಯ ರೋಗಲಕ್ಷಣ ಸೂಚಕವಾಗಿರಬಹುದು

ನಿಮ್ಮ ಕಿಡ್ನಿ ಹಾನಿಯಾಗುತ್ತಿದೆ ಎನ್ನುವುದಕ್ಕೆ ಈ ರೋಗ ಲ್ಷಣಗಳ ಕಾರಣ

ಪ್ರಾತಿನಿಧಿಕ ಚಿತ್ರ

ಮೂತ್ರಪಿಂಡಗಳು ದೇಹಕ್ಕೆ ಹೃದಯ ಮತ್ತು ಮಿದುಳಿನಷ್ಟೇ ಮುಖ್ಯ. ನಮ್ಮ ಹೃದಯ ಮತ್ತು ದೇಹವನ್ನು ಆರೋಗ್ಯವಾಗಿಡಲು ಯೋಗ, ಧ್ಯಾನ ಮಾಡುವಂತೆ. ಹಾಗೇ ಉತ್ತಮ ಆಹಾರ ಮತ್ತು ದಿನಚರಿಯನ್ನು ಅನುಸರಿಸುತ್ತೇವೆ. ಅಂತೆಯೇ, ಮೂತ್ರಪಿಂಡಗಳ ಕಡೆಗೂ ವಿಶೇಷ ಗಮನ ಹರಿಸಬೇಕು. ಕಿಡ್ನಿಯ ಆರೋಗ್ಯದ ಬಗ್ಗೆ ನಿರ್ಲಕ್ಷಿಸಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಕಿಡ್ನಿ ಸಂಬಂಧಿತ ಸಮಸ್ಯೆಗಳು ಉದ್ಭವಿಸಿದರೆ, ನಮ್ಮ ದೇಹವು ಕೆಲವು ರೋಗಲಕ್ಷಣಗಳನ್ನು ತೋರಿಸುತ್ತದೆ. ಆದಾಗ್ಯೂ, ಅನೇಕ ಜನರು ಅದನ್ನು ನಿರ್ಲಕ್ಷಿಸಿ ಸಾವಿಗೀಡಾಗುತ್ತಾರೆ.

ಒಮ್ಮೆ ಮೂತ್ರಪಿಂಡಗಳು ಹಾನಿಗೊಳಗಾದರೆ, ಚೇತರಿಕೆ ತುಂಬಾ ಕಷ್ಟ. ಹಾಗಾಗಿ ಆ ಲಕ್ಷಣಗಳು ಕಂಡು ಬಂದ ತಕ್ಷಣ ಎಚ್ಚೆತ್ತುಕೊಳ್ಳುವಂತೆ ವೈದ್ಯರು ಸೂಚಿಸುತ್ತಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದರೆ ಸಮಸ್ಯೆ ಕಡಿಮೆಯಾಗುತ್ತದೆ ಇಲ್ಲವೇ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಕಿಡ್ನಿ ಆರೋಗ್ಯ ಹದಗೆಟ್ಟಾಗ ಕಾಣಿಸಿಕೊಳ್ಳುವ ರೋಗಲಕ್ಷಣಗಳು ಇಲ್ಲಿವೆ

1. ತುಂಬಾ ಸುಸ್ತಾಗುವುದು: ದೇಹದಲ್ಲಿ ಆಗುವ ಸಣ್ಣ ಪುಟ್ಟ ಬದಲಾವಣೆಗಳನ್ನು ನಿರ್ಲಕ್ಷಿಸುವುದು ಭೀಕರ ಪರಿಣಾಮಗಳನ್ನು ಉಂಟುಮಾಡುತ್ತದೆ. ಸಣ್ಣ ಪ್ರಮಾಣದ ವ್ಯಾಯಾಮ ಕೂಡ ದೇಹವನ್ನು ತ್ವರಿತವಾಗಿ ದಣಿಸಬಹುದು. ಇದು ದೇಹದಲ್ಲಿನ ಟಾಕ್ಸಿನ್‌ಗಳು ಹೆಚ್ಚಾಗುವುದರಿಂದ ಆಗುತ್ತದೆ. ಈ ವಸ್ತುಗಳು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದರೊಂದಿಗೆ ರಕ್ತದಲ್ಲಿನ ಕಲ್ಮಶಗಳ ಪ್ರಮಾಣವೂ ಹೆಚ್ಚಾಗತೊಡಗುತ್ತದೆ. ಇದರಿಂದ ಮೂತ್ರಪಿಂಡಗಳು ಹಾನಿಗೊಳಗಾಗುತ್ತವೆ.

2. ನಿದ್ರಾಹೀನತೆ, ಚರ್ಮದ ಸಮಸ್ಯೆಗಳು: ನಿದ್ರಾಹೀನತೆ ಮತ್ತು ಚರ್ಮದ ಸಮಸ್ಯೆಗಳ ಬಗ್ಗೆ ಎಚ್ಚರವಹಿಸಬೇಕು. ಈ ಸಮಸ್ಯೆಗಳು ಮೂತ್ರಪಿಂಡದ ಕಾಯಿಲೆಗಳಿಗೆ ಸಂಬಂಧಿಸಿವೆ. ಇವುಗಳನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಚರ್ಮವು ಒಣಗಿದ್ದರೆ, ಚಪ್ಪಟೆಯಾಗಿ, ತುರಿಕೆ ಸಮಸ್ಯೆಯಾಗಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.

3. ಕಾಲುಗಳ ಊತ: ಕಾಲುಗಳ ಊತವು ಕಿಡ್ನಿ ಸಂಬಂಧಿ ಕಾಯಿಲೆಗಳನ್ನೂ ಸೂಚಿಸುತ್ತದೆ. ಕಾಲುಗಳು ಅತಿಯಾಗಿ ಊದಿಕೊಂಡರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ. ಇಲ್ಲವಾದರೆ ಸಮಯ ಕಳೆದಂತೆ ಸಮಸ್ಯೆ ಉಲ್ಬಣಿಸುವ ಅಪಾಯವಿದೆ.

ಮತ್ತಷ್ಟು ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.