ಬಿಗ್​ ಬಾಸ್​ ಮನೆ ಈ ವಾರ ಗಪ್​ಚುಪ್​ ಆಗಿತ್ತು. ಇಲ್ಲಿ ಏನಿದ್ರೂ ಸುದೀಪ್​ ಅವರ ಮಾತುಗಳದ್ದೇ ಸದ್ದು. ಸುದೀಪ್​ ಪ್ರತಿಯೊಬ್ಬರ ತಪ್ಪುಗಳನ್ನು ಬಿಡಿಸಿ, ಬಿಡಿಸಿ ಹೇಳಿದ್ರು. ಅಷ್ಟೇ ಅಲ್ಲ ಮನೆಯಲ್ಲಿ ಹಬ್ಬಿದ್ದ ಮೌನಕ್ಕೆ ಫುಲ್​ ಸ್ಟಾಪ್​ ಇಟ್ಟರು.

ಇಲ್ಲಿ ಮೊದಲಿಗೆ ಇಂಪಾರ್ಟಂಟ್​ ಎಂದು ಎನಿಸಿದ್ದು ಮಂಜು ಪಾವಗಡ ಅವರು ಹೇಳಿದ್ದ ಮಾತು, ಆರೋಪಗಳು. ಕಳೆದ ವಾರ ಚಕ್ರವರ್ತಿ ಹಾಗೂ ಮಂಜು ಪಾವಗಡ ಅವರು ವೈಯಕ್ತಿಕ ವಿಷಯವಾಗಿ ಕಿತ್ತಾಡಿದ್ದರು. ಒಬ್ಬರ ವಿರುದ್ಧ ಮತ್ತೊಬ್ಬರು ದಾಳಿ ನಡೆಸಿದ್ದರು. ಇದಾದ ನಂತರ ಮಂಜು ತುಂಬಾನೇ ಸೈಲೆಂಟ್​ ಆಗಿದ್ದರು. ಆದ್ರೆ ಅವರಿಗೆ ಸುದೀಪ್​ ಅವರು ಒಂದು ವಾರ ಅವಕಾಶ ನೀಡಿದಂತೆ ಕಾಣುತ್ತಿತ್ತು. ಹೀಗಾಗಿ ಈ ವಾರ ಸುದೀಪ್​ ಅವರು ಅಭಿಪ್ರಾಯಗಳಿಗಿಂತ ಅವರು ಮಾಡಿದ ತಪ್ಪುಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ವಾರ ಕಳೆದರೂ ಈ ಇಬ್ಬರ ವಿಷಯದ ಮನಸ್ತಾಪ ತಣ್ಣಗಾಗಿರಲಿಲ್ಲ. ಮಂಜು ಅವರು ಕಳೆದ ವಾರ ಚಕ್ರವರ್ತಿ ಅವರಿಗೆ ನೀನು ಹೇಗೆ ಬಂದಿದ್ದೀಯಾ ಗೊತ್ತು ಎನ್ನುತ್ತಾರೆ. ಈ ಕುರಿತು ಚಕ್ರವರ್ತಿಯವರು ಕೆರಳಿ ಮಾತಾನಾಡಿದ್ದು ಎಲ್ಲರಿಗೂ ಗೊತ್ತು.

ಈ ಎಲ್ಲದರ ಬಗ್ಗೆ ಮಾತನಾಡಿದ ಸುದೀಪ್​ ಅವರು, ಮಂಜು ಅವರೇ ನೀವು ಹೇಳಿದ ಮಾತು ತಪ್ಪು. ನೀವು ಅಷ್ಟೇ ಅಲ್ಲ ಎಲ್ಲರೂ ಬೇರೆಯವರ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಿ. ದಿವ್ಯಾ ಸುರೇಶ್​ ಅವರೇ ನಿಮ್ಮ ಬಗ್ಗೆ ನೀವು ಮಾತನಾಡಿ. ನಿಮ್ಮ ಡಿಗ್ನಿಟಿ ಕಾಪಾಡಿಕೊಳ್ಳಿ. ನಿಮ್ಮನ್ನ ನೀವೇ ಪ್ರೊಟೆಕ್ಟ್​ ಮಾಡಿಕೊಳ್ಳಬೇಕು. ನಾನು 7 ಸೀಸನ್​ಗಳನ್ನು ನೋಡಿದ್ದೀನಿ. ಇದೇ ಮಾತು ಬೇರೆಯ ಹೆಣ್ಣು ಮಕ್ಕಳಿಗೆ ಆಡಿದ್ದರೆ. ಇಲ್ಲಿ ನಡೆಯುತ್ತಿದ್ದಿದ್ದೇ ಬೇರೆ. ನೀವು ಅಳಬೇಡಿ, ಇದ್ರಿಂದ ನೀವು ಕುಗ್ಗುತ್ತಿರಾ ಎಂದು ಹೇಳುತ್ತಾರೆ. ಇದಾದ ನಂತರ ಸಾರಿ ಹೇಳಿಸಿ ಮನಸ್ತಾಪದ ಕಿಚ್ಚನ್ನು ಕಡಿಮೆ ಮಾಡುತ್ತಾರೆ. ಕಿಚ್ಚನ ಮಾತಿನಿಂದ ಇಷ್ಟು ದಿನ ಇದ್ದ ತೊಳಲಾಟದಿಂದ ಮನೆಯ ಸದಸ್ಯರು ನಿರಾಳರಾದರು.

 

‘ಇನ್ನೊಂದು ಕಡೆ ನಿಧಿ ಹಾಗೂ ಅರವಿಂದ್​ ಅವರು ವೈಯಕ್ತಿಕ ನಿಂದನೆಯಿಂದ ಮಾತು ಬಿಟ್ಟಿದ್ದು ಗೊತ್ತಿರುವ ವಿಚಾರ. ಇದೇ ವಾರ ಬಿಗ್​ ಬಾಸ್​ ನೀಡಿದ್ದ ಟಾಸ್ಕ್​ನಲ್ಲಿ ಅರವಿಂದ್ ಹಾಗೂ ಮಂಜು ಅವರ ನಡುವೆ ನಡೆದಿದ್ದ ವಾಕ್​ ಸಮರದಲ್ಲಿ ನಿಧಿ ಅವರು ಮಾತನಾಡಿದಕ್ಕೆ ಅರವಿಂದ ಅವರು ನಿಧಿ ಅವರಿಗೆ ಮುಚ್ಕೊಂಡಿರಿ ಎಂದು ಹೇಳಿದ್ದರು. ಸುದೀಪ್​ ಅವರು ಅರವಿಂದ ಹಾಗೂ ನಿಧಿ ಅವರಿಗೆ ಈ ಕುರಿತು ಮನವರಿಕೆ ಮಾಡಿಕೊಡುತ್ತಾರೆ. ಅರವಿಂದ್​ ನೀವು ರೀ ಎಂದ ಮಾತ್ರಕ್ಕೆ ಅದರ ಅರ್ಥ ಬದಲಾಗುವುದಿಲ್ಲ. ಇದ್ರಿಂದ ವ್ಯಕ್ತಿಗತವಾಗಿ ಸಾಕಷ್ಟು ನೋವಾಗುತ್ತದೆ.

ಹಾಗೇ ನಿಧಿ ಅವರೇ ನೀವು ಒಬ್ಬ ಆಟಗಾರನಿಗೆ ಪದಕ ಗೆದ್ದು ತೋರಿಸು ಎನ್ನುವುದು ದೊಡ್ಡ ತಪ್ಪು. ಇದು ತುಂಬಾ ದೊಡ್ಡ ಹೊಡೆತ ನೀಡುತ್ತದೆ. ಹಾಗಾಗಿ ಇಬ್ಬರೂ ಅವರವರ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದೀರಿ. ಇದರ ಬಗ್ಗೆ ನಮಗೆ ಹೆಮ್ಮೆ ಇದೆ. ನಿಮ್ಮ ತನವನ್ನು ಕಳೆದುಕೊಳ್ಳಬೇಡಿ ಎಂದು ಹೇಳುತ್ತಾರೆ. ನಂತರ ಇಬ್ಬರಿಗೂ ಹಗ್​ ಮಾಡಿಸಿ ಸುಖಾಂತ್ಯ ನೀಡುತ್ತಾರೆ.

The post ‘ನಿಮ್ಮ ಜಾಗದಲ್ಲಿ ಬೇರೆಯವರು ಇದ್ದಿದ್ರೆ ನಡೆಯುತ್ತಿದ್ದದ್ದೇ ಬೇರೆ’ appeared first on News First Kannada.

Source: newsfirstlive.com

Source link