ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿರಿಸಲು ಈ ಆಹಾರ ಪದಾರ್ಥಗಳನ್ನು ಸೇವಿಸಿ | These 3 foods keep the digestive system during wedding season


ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿರಿಸಲು ಈ ಆಹಾರ ಪದಾರ್ಥಗಳನ್ನು ಸೇವಿಸಿ

ಸಂಗ್ರಹ ಚಿತ್ರ

ಮದುವೆ ಸಮಯದಲ್ಲಿ ಜನರು ತಮ್ಮ ಆಹಾರವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಒಂದೇ ದಿನ ಅತಿಯಾಗಿ ಸೇವಿಸುವುದು ಮತ್ತು ಅತಿಯಾಗಿ ಸಿಹಿ ತಿನ್ನುವುದು ಆರೋಗ್ಯವನ್ನು ಹಾನಿಗೊಳಿಸುತ್ತದೆ. ಹೀಗಿರುವಾಗ ನೀವು ಜೀರ್ಣಾಂಗ ವ್ಯವಸ್ಥೆಯನ್ನು ಯಾವಾಗಲೂ ಆರೋಗ್ಯಕರವಾಗಿರಿಸಿಕೊಳ್ಳಿ. ನೀವು ನಿಯಮಿತವಾದ ಆಹಾರ ಸೇವನೆಯಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಕಡುಬು ಕಜ್ಜಾಯ ಎನ್ನುತ್ತಾ ಹಬ್ಬ ಹರಿದಿನಗಳಲ್ಲಿ- ಮದುವೆ ಸಮಾರಂಭಗಳಲ್ಲಿ ಆಹಾರವನ್ನು ಹೆಚ್ಚು ಸೇವಿಸುತ್ತೇವೆ. ಅದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ ಉಂಟಾಗಬಹುದು. ಹೀಗಿರುವಾಗ ನೀವು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಲು ನಿಯಮಿತವಾದ ಆಹಾರ ಸೇವಿಸಿ ಮತ್ತು ಈ ಕೆಲವು ಆಹಾರ ಪದಾರ್ಥಗಳ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಬಹುದಾಗಿದೆ.

ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸಲು ಈ ಆಹಾರ ಪದಾರ್ಥಗಳನ್ನು ಸೇವಿಸಿ:
ಮದುವೆಯ ಸೀಸನ್​ಗಳಲ್ಲಿ ಅತಿಯಾದ ಆಹಾರ ವ್ಯವಸ್ಥೆ ಮತ್ತು ಹೆಚ್ಚು ಸಿಹಿ ಸೇವಿಸುವುದು ಹೆಚ್ಚು ಕ್ಯಾಲೊರಿಯನ್ನು ಮತ್ತು ಜೀರ್ಣಕ್ರಿಯೆಯ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಎಣ್ಣೆಯಲ್ಲಿ ಕರಿದ ಪದಾರ್ಥಗಳು ಮತ್ತು ಮಸಾಲೆಯುಕ್ತ ಆಹಾರದ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆ ಹಾನಿಗೊಳಗಾಗಬಹುದು. ಹೀಗಿರುವಾಗ ನಿಮ್ಮ ಆಹಾರದಲ್ಲಿ ಈ 3 ಪದಾರ್ಥಗಳು ಸೇರಿರಲಿ.

ಮೆಂತ್ಯೆ
ಮೆಂತ್ಯೆ ಬೀಜಗಳು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೀಗಿರುವಾಗ ಮೆಂತ್ಯೆ ಸೇವನೆಯ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಇದು ಮಲಬದ್ಧತೆ ಸಮಸ್ಯೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಜೊತೆಗೆ ಮೆಂತ್ಯೆ ಮಜ್ಜಿಗೆ ಸೇವಿಸುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಬಹುದಾಗಿದೆ.

ಮಜ್ಜಿಗೆ
ಊಟದ ನಂತರ ಮಜ್ಜಿಗೆ ಮತ್ತು ಉಪ್ಪು ಮಿಶ್ರಣ ಮಾಡಿ ಸೇವಿಸುವ ಅಭ್ಯಾಸ ರೂಢಿಯಲ್ಲಿಟ್ಟುಕೊಳ್ಳಿ. ಮಜ್ಜಿಗೆ ಮತ್ತು ಉಪ್ಪು ವಿಟಮಿನ್​ ಬಿ12 ಮತ್ತು ಪ್ರೋಬಯಾಟಿಕ್​ಗಳ ಉತ್ತಮ ಮೂಲವಾಗಿದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನೀವು ಇಂಗು, ಮಜ್ಜಿಗೆ ಮತ್ತು ಉಪ್ಪನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ಆರೋಗ್ಯ ಸುಧಾರಣೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಬಿಸಿ ನೀರು
ನೀವು ಆಗಾಗ ಬಿಸಿ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಚಳಿಗಾಲದ ಈ ಸಮಯದಲ್ಲಿ ನೀವು ಬೆಚ್ಚಗಿರುವಂತೆ ಮಾಡಲು ಬಿಸಿನೀರು ಸಹಾಯಕ ಜೊತೆಗೆ ನಿಮ್ಮ ಜೀರ್ಣಾಂಗ ವ್ಯವಸ್ಥೆ ಸುಧಾರಣೆಗೆ ಸಹಾಯ ಮಾಡುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ನಿಮ್ಮ ಆರೋಗ್ಯದಲ್ಲಿ ಏನೇ ವ್ಯತ್ಯಾಸ ಉಂಟಾದರೂ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ. ತಜ್ಞರ ಸಲಹೆಯ ಮೇರಗೆ ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳಿ.

TV9 Kannada


Leave a Reply

Your email address will not be published. Required fields are marked *