‘ನಿಮ್ಮ ದೇಹವನ್ನು ನೀವು ಪ್ರೀತಿಸಿ’; ನಟಿ ರಾಗಿಣಿ ವಿಶೇಷ ಮನವಿ | Actress Ragini Dwivedi gave tips to Youthsಇತ್ತೀಚೆಗೆ ಕಿರುತೆರೆ ನಟಿ ಚೇತನಾ ರಾಜ್ ಅವರು ಫ್ಯಾಟ್​ ಸರ್ಜರಿ ಮಾಡಿಸಿಕೊಳ್ಳೋಕೆ ಹೋಗಿ ನಿಧನ ಹೊಂದಿದ್ದರು. ಈ ಬಗ್ಗೆ ರಾಗಿಣಿ ಮಾತನಾಡಿದ್ದಾರೆ.

TV9kannada Web Team


| Edited By: Rajesh Duggumane

May 24, 2022 | 8:48 PM
ನಟಿ ರಾಗಿಣಿ ದ್ವಿವೇದಿ ಅವರಿಗೆ (Ragini Dwivedi) ಇಂದು (ಮೇ 24) ಹುಟ್ಟುಹಬ್ಬದ ಸಂಭ್ರಮ. ಬರ್ತ್​ಡೇ ದಿನದಂದೇ ‘ಸಾರಿ ಕರ್ಮ ರಿಟರ್ನ್ಸ್’​ ಸಿನಿಮಾದ ಮೋಷನ್​ ಪೋಸ್ಟರ್​ ರಿಲೀಸ್ ಆಗಿದೆ. ಇದಕ್ಕಾಗಿ ಸುದ್ದಿಗೋಷ್ಠಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ಹಲವು ವಿಚಾರಗಳ ಬಗ್ಗೆ ರಾಗಿಣಿ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ಇತ್ತೀಚೆಗೆ ಕಿರುತೆರೆ ನಟಿ ಚೇತನಾ ರಾಜ್ (Chetana Raj) ಅವರು ಫ್ಯಾಟ್​ ಸರ್ಜರಿ ಮಾಡಿಸಿಕೊಳ್ಳೋಕೆ ಹೋಗಿ ನಿಧನ ಹೊಂದಿದ್ದರು. ಈ ಬಗ್ಗೆ ರಾಗಿಣಿ ಮಾತನಾಡಿದ್ದಾರೆ. ‘ಇದೇ ರೀತಿ ಕಾಣಬೇಕು ಎಂಬ ಬಗ್ಗೆ ಅನೇಕ ನಟಿಯರು ಒತ್ತಡ ತೆಗೆದುಕೊಳ್ಳುತ್ತಾರೆ. ನಿಮ್ಮ ಬಾಡಿ ಹಾಗೂ ನಿಮ್ಮ ಅಂದವನ್ನು ನೀವು ಪ್ರೀತಿಸಿ’ ಎಂದು ಕೋರಿದ್ದಾರೆ ರಾಗಿಣಿ ದ್ವಿವೇದಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *