ನಿಮ್ಮ ಧ್ವನಿಯಿಂದ ಕೋವಿಡ್-19 ಸೋಂಕನ್ನು ನಿಖರವಾಗಿ ಪತ್ತೆ ಮಾಡುತ್ತ ಈ ಸ್ಮಾರ್ಟ್​ಫೋನ್ ಆ್ಯಪ್ | Smartphone App Accurately Detects COVID 19 Infection in People’s Voices With Help of AI


ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಕ್ರೌಡ್-ಸೋರ್ಸಿಂಗ್ ಕೋವಿಡ್ -19 ಸೌಂಡ್ಸ್ ಅಪ್ಲಿಕೇಶನ್‌ನಿಂದ ಪ್ರಯೋಗ ನಡೆಸಲಾಗಿದ್ದು, ಇದರಲ್ಲಿ ಆರೋಗ್ಯವಾಗಿರುವ ಹಾಗೂ ಅನಾರೋಗ್ಯವಾಗಿರುವ 4,352 ಜನರನ್ನು ಪರೀಕ್ಷೆ ಮಾಡಲಾಗಿದೆ.

ನಿಮ್ಮ ಧ್ವನಿಯಿಂದ ಕೋವಿಡ್-19 ಸೋಂಕನ್ನು ನಿಖರವಾಗಿ ಪತ್ತೆ ಮಾಡುತ್ತ ಈ ಸ್ಮಾರ್ಟ್​ಫೋನ್ ಆ್ಯಪ್

ಸಾಂದರ್ಭಿಕ ಚಿತ್ರ

ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಸ್ಮಾರ್ಟ್‌ಫೋನ್ (Smartphone) ಅಪ್ಲಿಕೇಶನ್ ಜನರ ಧ್ವನಿಯಲ್ಲಿ ಕೋವಿಡ್ -19 (Covid 19) ಸೋಂಕನ್ನು ನಿಖರವಾಗಿ ಪತ್ತೆ ಮಾಡುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಈ ಅಪ್ಲಿಕೇಶನ್ ಮೂಲಕ ಹಲವಾರು ಪರೀಕ್ಷೆಗಳನ್ನು ನಡೆಸಲಾಗಿದ್ದು, ನಿಖರವಾದ ಮಾಹಿತಿ ನೀಡುತ್ತದೆ ಮತ್ತು ಬಳಸಲು ಸುಲಭವಾಗಿದೆ ಎಂದು ಸಂಧೋಧಕರು ತಿಳಿಸಿದ್ದಾರೆ. ಹೀಗಾಗಿ PCR ಪರೀಕ್ಷೆಗಳು ದುಬಾರಿ ಇರುವ ಕಡೆ ಇದನ್ನು ಬಳಸಬಹುದಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ನೆದರ್‌ಲ್ಯಾಂಡ್‌ನ ಮಾಸ್ಟ್ರಿಚ್ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಡೇಟಾ ಸೈನ್ಸ್‌ನ ಸಂಶೋಧಕ ವಫಾ ಅಲ್ಜ್‌ಬಾವಿ, “ಸರಳ ಧ್ವನಿ ರೆಕಾರ್ಡಿಂಗ್‌ಗಳು ಮತ್ತು ಫೈನ್ಟ್ಯೂನ್ ಮಾಡಿದ AI ಅಲ್ಗಾರಿದಮ್‌ಗಳು ಯಾವ ರೋಗಿಗಳಿಗೆ ಕೋವಿಡ್ -19 ಸೋಂಕು ತಗುಲಿದೆ ಎಂಬುದನ್ನು ನಿರ್ಧರಿಸುವಲ್ಲಿ ಸ್ಪಷ್ಟ ಫಲಿತಾಂಶವನ್ನು ತೋರಿಸಿದೆ,” ಎಂದು ಹೇಳಿದ್ದಾರೆ.

ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಕ್ರೌಡ್ಸೋರ್ಸಿಂಗ್ ಕೋವಿಡ್ -19 ಸೌಂಡ್ಸ್ ಅಪ್ಲಿಕೇಶನ್‌ನಿಂದ ಪ್ರಯೋಗ ನಡೆಸಲಾಗಿದ್ದು, ಇದರಲ್ಲಿ ಆರೋಗ್ಯವಾಗಿರುವ ಹಾಗೂ ಅನಾರೋಗ್ಯವಾಗಿರುವ 4,352 ಜನರನ್ನು ಪರೀಕ್ಷೆ ಮಾಡಲಾಗಿದೆ. ಒಟ್ಟು 893 ಧ್ವನಿಯ ಮಾದರಿಗಳನ್ನು ಸಂಗ್ರಹಿಸಿ ಇವರಲ್ಲಿ 308 ಜನರಿಗೆ ಕೋವಿಡ್ -19 ಇರುವುದು ಕಂಡುಬಂದಿದೆ.

ಇನ್ನು ಈಗಾಗಲೇ ಕೋವಿಡ್-19 ಮಾಹಿತಿಯೊಂದಿಗೆ ಆಡಿಯೋ ನ್ಯೂಸ್ ಬ್ರೀಫ್‌ಗಳನ್ನು ಒದಗಿಸುವ ಆ್ಯಪಲ್ ಐಫೋನ್‍‍ನ ಸಿರಿ‘ (ಕೃತಕ ಬುದ್ಧಿಮತ್ತೆ ಸಾಫ್ಟ್‌ವೇರ್) ಸೇವೆ ಭಾರತೀಯ ಬಳಕೆದಾರರಿಗೆ ಲಭ್ಯವಿದೆ. ಆ್ಯಪಲ್ ತನ್ನ ಸಿರಿ ಧ್ವನಿ ಸಹಾಯಕವನ್ನು ನವೀಕರಿಸಿದ್ದು, ಜ್ವರದ ರೋಗಲಕ್ಷಣಗಳನ್ನು ಹೊಂದಿರುವ ಮತ್ತು ಕೊರೊನಾ ವೈರಸ್‌ನಿಂದ ಬಳಲುತ್ತಿದ್ದಾರೆ ಎಂದೆನಿಸುವ ಬಳಕೆದಾರರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಿದೆ. ಈ ವೈಶಿಷ್ಟ್ಯವು ಈಗ ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಚಾಲ್ತಿಯಲ್ಲಿದೆ.

TV9 Kannada


Leave a Reply

Your email address will not be published.