ಬೆಂಗಳೂರು: ಪುನೀತ್ ಅಕಾಲಿಕ ನಿಧನದಿಂದ ಅಪ್ಪು ಅಭಿಮಾನಿಗಳ ಸರಣಿ ಆತ್ಮಹತ್ಯೆ ಮುಂದುವರೆದಿದೆ. ಇದು ದೊಡ್ಮನೆ ಕುಟುಂಬಕ್ಕೆ ಭಾರೀ ನೋವು ತಂದಿದೆ. ಹೀಗಾಗಿ ದಯವಿಟ್ಟು ಯಾರು ಆತ್ಮಹತ್ಯೆಗೆ ಶರಣಾಗಬಾರದೆಂದು ರಾಘವೆಂದ್ರ ರಾಜ್ಕುಮಾರ್ ಮನವಿ ಮಾಡಿಕೊಂಡಿದ್ದಾರೆ.
ಅಶ್ವಿನಿ ನೊಂದಿದ್ದಾರೆ
ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪ್ಪು ಇಲ್ಲದ ನೋವಿನಲ್ಲಿ ನಾವಿನ್ನು ಇದ್ದೀವಿ. ಇನ್ನು ನೀವು ಆತ್ಮಹತ್ಯೆ ಮಾಡಿಕೊಂಡು ನಮ್ಮ ನೋವನ್ನು ಇನ್ನಷ್ಟು ಹೆಚ್ಚಿಸಬೇಡಿ. ಎಲ್ಲರು ಆತ್ಮಹತ್ಯೆ ಮಾಡಿಕೊಂಡ್ರೆ ಭೂಮಿ ಮೇಲೆ ಯಾರೂ ಇರಲ್ಲ. ನಮ್ಮ ನೋವನ್ನು ನಿಮ್ಮ ತಂದೆ ತಾಯಿಗೆ ಕೊಡಬೇಡಿ ಎಂದು ರಾಘವೆಂದ್ರ ರಾಜ್ಕುಮಾರ್ ಅಭಿಮಾನಿಗಳಲ್ಲಿ ಕೋರಿಕೊಂಡಿದ್ದಾರೆ.
ಇದನ್ನೂ ಓದಿ:ನವೆಂಬರ್ 9 ರಂದು ಪ್ಯಾಲೇಸ್ ಗ್ರೌಂಡ್ನಲ್ಲಿ ಅಪ್ಪು ಅಭಿಮಾನಿಗಳಿಗೆ ಅನ್ನದಾನ
ನಿಮ್ಮ ಮನೆಯಲ್ಲಿ ಯಾರಾದರು ಸತ್ತರೆ ನೀವು ಸಾಯಬೇಕೆಂದು ಹೇಳಿ ಕೊಡ್ತಾರಾ? ನಾಳೆ ನಿಮ್ಮ ಮನೆಯವರು ಅಪ್ಪು ಸಾವಿನಿಂದ ಹೀಗಾಯ್ತು ಅಂತ ಮಾತಾಡ್ತಾರೆ. ಅದರಿಂದ ನಮಗೂ ಒಳ್ಳೆದಾಗಲ್ಲ. ಈಗಾಗಲೇ ನೋವಿನಲ್ಲಿದ್ದೀವಿ, ದಯವಿಟ್ಟು ಮತ್ತೆ ನಮಗೆ ನೋವು ಕೊಡಬೇಡಿ. 12 ಅಭಿಮಾನಿಗಳ ಸಾವಿಗೆ ನನ್ನ ಪತಿ ಕಾರಣ ಅಂತ ಪುನೀತ್ ಪತ್ನಿ ಅಶ್ವಿನಿ ಬೇಸರ ಮಾಡ್ಕೊಂಡಿದ್ದಾರೆ. ನಿಮ್ಮ ಪಾದಕ್ಕೆ ನಮಸ್ಕಾರ ಮಾಡ್ತೀನಿ ಯಾರೂ ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ರಾಘಣ್ಣ ಬೇಡಿಕೊಂಡಿದ್ದಾರೆ.
ಇದನ್ನೂ ಓದಿ:ಅಪ್ಪು ಸಮಾಧಿ ನೋಡಲು ಹಠ ಮಾಡಿ.. ನೇಣಿಗೆ ಕೊರಳೊಡ್ಡಿದ ಮತ್ತೊಬ್ಬ ಅಭಿಮಾನಿ
ಇದನ್ನೂ ಓದಿ:ಡ್ಯಾನ್ಸ್ ಕಿಂಗ್ ಪ್ರಭುದೇವ್ ಜತೆ ಸ್ಟೆಪ್ ಹಾಕಿದ್ದ ಅಪ್ಪು; ಈ ಬಗ್ಗೆ ಸಿನಿ ಸ್ಟಾರ್ಸ್ ಹೇಳಿದ್ದೇನು?