ನಿಮ್ಮ ಪಾಸ್​ಪೋರ್ಟ್​ನಲ್ಲಿ ಒಂದೇ ಹೆಸರಿದ್ದರೆ ಈ ದೇಶಕ್ಕೆ ಪ್ರಯಾಣಿಸುವಂತಿಲ್ಲ – Travellers With Single Name On Indian Passport Cant Travel in Flight To This Country Kannada News


ಪಾಸ್​ಪೋರ್ಟ್​ನಲ್ಲಿ ಪ್ರಯಾಣಿಕರ ಮೊದಲ ಮತ್ತು ಕೊನೆಯ ಹೆಸರುಗಳನ್ನು ಸ್ಪಷ್ಟವಾಗಿ ಘೋಷಿಸಿರಬೇಕು. ಮಧ್ಯದ ಹೆಸರು ಮಾತ್ರ ಇದ್ದರೆ ಯುಎಇಯಲ್ಲಿ ಅದಕ್ಕೆ ಮಾನ್ಯತೆಯಿಲ್ಲ.

ನಿಮ್ಮ ಪಾಸ್​ಪೋರ್ಟ್​ನಲ್ಲಿ ಒಂದೇ ಹೆಸರಿದ್ದರೆ ಈ ದೇಶಕ್ಕೆ ಪ್ರಯಾಣಿಸುವಂತಿಲ್ಲ

ಪಾಸ್‌ಪೋರ್ಟ್‌

Image Credit source: NDTV

ನವದೆಹಲಿ: ಇನ್ನುಮುಂದೆ ನಿಮ್ಮ ಪಾಸ್​ಪೋರ್ಟ್​ನಲ್ಲಿ ಫಸ್ಟ್​ ನೇಮ್ (First Name) ಮತ್ತು ಲಾಸ್ಟ್​ ನೇಮ್ (Last Name) ಇಲ್ಲದೆ ಕೇವಲ ಒಂದೇ ಹೆಸರಿದ್ದರೆ ನೀವು ಯುಎಇ (United Arab Emirates)ಗೆ ವಿಮಾನದಲ್ಲಿ ಪ್ರಯಾಣ ಮಾಡುವಂತಿಲ್ಲ. ಪ್ರವಾಸಕ್ಕೆ ಅಥವಾ ಇತರ ಯಾವುದೇ ರೀತಿಯ ಭೇಟಿಗಾಗಿ ವೀಸಾದಲ್ಲಿ ಪ್ರಯಾಣಿಸುವವರ ಪಾಸ್‌ಪೋರ್ಟ್‌ನಲ್ಲಿ (Passport)  ಒಂದೇ ಹೆಸರಿದ್ದರೆ ಆ ಪ್ರಯಾಣಿಕರಿಗೆ ಯುಎಇಯಲ್ಲಿ ವಾಸ್ತವ್ಯ ಹೂಡಲು ಅನುಮತಿಯಿಲ್ಲ. ಕಳೆದ ಸೋಮವಾರದಿಂದಲೇ ಜಾರಿಗೆ ಬರುವಂತೆ ಈ ನಿಯಮ ಜಾರಿಗೆ ತರಲಾಗುತ್ತಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಅಧಿಕಾರಿಗಳು ಇಂಡಿಗೋ ಏರ್‌ಲೈನ್ಸ್​ಗೆ ತಿಳಿಸಿದ್ದಾರೆ.

ಇದರರ್ಥವೇನೆಂದರೆ, ಪಾಸ್​ಪೋರ್ಟ್​ನಲ್ಲಿ ಪ್ರಯಾಣಿಕರ ಮೊದಲ ಮತ್ತು ಕೊನೆಯ ಹೆಸರುಗಳನ್ನು ಸ್ಪಷ್ಟವಾಗಿ ಘೋಷಿಸಿರಬೇಕು. ಮಧ್ಯದ ಹೆಸರು ಮಾತ್ರ ಇದ್ದರೆ ಯುಎಇಯಲ್ಲಿ ಅದಕ್ಕೆ ಮಾನ್ಯತೆಯಿಲ್ಲ.

TV9 Kannada


Leave a Reply

Your email address will not be published.