ನಿಮ್ಮ ಪ್ರೀತಿ ಪಾತ್ರರನ್ನು ಬದಲಾಯಿಸಲು ಹೊರಟಿದ್ದೀರಾ? ಹಾಗಿದ್ದರೆ ಇದರಿಂದ ಆಗುವ ಅಪಾಯ ಏನು? ಈ ಸುದ್ದಿಯನ್ನು ಓದಿ | Are you going to change your life partner? If so, you must know 5 things


ನಿಮ್ಮ ಪ್ರೀತಿ ಪಾತ್ರರನ್ನು ಬದಲಾಯಿಸಲು ಹೊರಟಿದ್ದೀರಾ? ಹಾಗಿದ್ದರೆ ಇದರಿಂದ ಆಗುವ ಅಪಾಯ ಏನು? ಈ ಸುದ್ದಿಯನ್ನು ಓದಿ

ಸಾಂಧರ್ಬಿಕ ಚಿತ್ರ

Image Credit source: ANI

ಮ್ಮ ಜೀವನದಲ್ಲಿ ಒಬ್ಬ ವ್ಯಕ್ತಿ ನಿಮಗೆ ಹೇಳದಿದ್ದರೂ ಅವನು ವಿಶೇಷವಾಗಿ ನಿಮ್ಮಲ್ಲಿ ಇಷ್ಟಪಡದಿರುವ ಕೆಲವು ವಿಷಯಗಳು ಇಲ್ಲಿವೆ

ಪ್ರತಿಯೊಬ್ಬ ಮನುಷ್ಯನು ಒಬ್ಬನಿಗಿಂತ ಒಬ್ಬ ಬಿನ್ನವಾಗಿರುತ್ತಾನೆ. ಅವನ ದೈಹಿಕ ನಡುವಳಿಕೆ, ಮಾನಸಿಕ ಚಟುವಟಿ ಹೀಗೆ ಸಾಕಷ್ಟು ಭಿನ್ನವಾಗಿರುತ್ತಾನೆ. ಆತನನ್ನು ಸಾಕಷ್ಟು ಪ್ರೀತಿಸುವರು ಅವನನ್ನು ಬದಲಾಯಿಸಲು ಪ್ರಯತ್ನಿಸುತ್ತಿರುತ್ತಾರೆ. ಉದಾಹರಣೆಗೆ ಪ್ರೇಮಿಗಳಲ್ಲೇ ನೋಡಿ ಪ್ರಿಯಕರ ಪಾಪ್​ ಆಗಿ ಇದ್ದು, ಕೆಟ್ಟ ಗುಣಗಳನ್ನು ಅಳವಡಿಸಿಕೊಂಡಿದ್ದರೆ, ವಿಚಿತ್ರವಾಗಿ ಬಟ್ಟೆ ತೊಡುತ್ತಿದ್ದರೆ, ಅಥವಾ ಇನ್ನು ಕೆಲವು ಸಂದರ್ಭದಲ್ಲಿ ಆತನು ಸಾಮಾನ್ಯ ಜೀವನ ನಡೆಸುತ್ತಿದ್ದರೆ ಆಗಲೂ ಕೂಡ ಪ್ರೇಯಸಿ ತನ್ನ ಪ್ರಿಯಕರನ ನಡುವಳಿಕೆ, ಹಾವಭಾವ, ಉಡುಗೆ -ತೊಡುಗೆಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿರುತ್ತಾಳೆ. ಆತನು ಇಂತಹ ನಡುವಳಿಕೆಗಳನ್ನು ಅಳವಡಿಸಿಕೊಂಡಿರುವುದು ಆತನ ಸುತ್ತಮುತ್ತ ಇರುವ ಸಮಾಜದಿಂದ ಆಗಿರಬಹುದು.

ಇದನ್ನು ಓದಿ: ಕರುಳಿನ ಉರಿಯೂತಕ್ಕೆ ಕಾರಣವಾಗುವ ಅನಾರೋಗ್ಯಕರ ಅಂಶಗಳಾವವು? ಇಲ್ಲಿದೆ ಮಾಹಿತಿ

ಆದ್ದರಿಂದ, ನಿಮ್ಮ ಜೀವನದಲ್ಲಿ ಒಬ್ಬ ವ್ಯಕ್ತಿ ನಿಮಗೆ ಹೇಳದಿದ್ದರೂ ಅವನು ವಿಶೇಷವಾಗಿ ನಿಮ್ಮಲ್ಲಿ ಇಷ್ಟಪಡದಿರುವ ಕೆಲವು ವಿಷಯಗಳು ಇಲ್ಲಿವೆ…

 1. ನಿಮ್ಮ ಆಪ್ತರು ನಿಮ್ಮನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ:
  ಹೆಚ್ಚಿನ ಪುರುಷರು ತಮ್ಮ ಮನಸ್ಸಿನಲ್ಲಿ ಈ ನಿಯಮವನ್ನು ಅನುಸರಿಸುತ್ತಾರೆ. ಆದರೆ ಇದನ್ನು ಅನ್ವಯಿಸಬೇಡಿ. ಏಕೆಂದರೆ ಅವರನ್ನು ನೀವು ಸಾಷ್ಟು ಪ್ರೀತಿಸುತ್ತಿದ್ದು, ನೀವು ಅವರನ್ನು ಬದಲಾಯಿಸಲು ಪ್ರಯತ್ನಿಸಿದರೆ ನಿಮ್ಮ ಪ್ರೀತಿ ಪಾತ್ರರು ನಿಮ್ಮಿಂದ ದೂರವಾಗುವ ಸಂಭವ ಇರುತ್ತದೆ. ಹೀಗಾಗಿ ಈ ಗೋಜಿಗೆ ಹೋಗ ಬೇಡಿ.  ಇದರಿಂದ  ಏನೂ ಸಿಗುವುದಿಲ್ಲ. ಅದು ಅವನ ಡ್ರೆಸ್ಸಿಂಗ್ ಸೆನ್ಸ್ ಆಗಿರಲಿ, ಸಂಗೀತದ ಅಭಿರುಚಿಯಾಗಿರಲಿ ಅಥವಾ ಅವನ ಸ್ನೇಹಿತರ ವಲಯವಾಗಿರಲಿ, ಈ ಎಲ್ಲಾ ವಿಷಯಗಳು ಅವನು ತನ್ನ ಜೀವನದುದ್ದಕ್ಕೂ ಹಾಯಾಗಿರುತ್ತಾನೆ. ಮತ್ತು ಅದರಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸುವುದು ಅವನ ಸುಖ ಜೀವನಕ್ಕೆ ಅಡ್ಡಿಯಾಗಬಹದು.
 2. ದೀರ್ಘ ಕಾಲ ಫೋನ್​ನಲ್ಲಿ ಸಂಭಾಷಣೆ
  ಇಬ್ಬರು ವ್ಯಕ್ತಿಗಳು ಆರಂಭಿಕ ಹಂತದಲ್ಲಿದ್ದಾಗ ಅಥವಾ ಅವರ ಸಂಬಂಧ ಬಹಳ ಆಳವಾಗಿದ್ದಾಗ ಫೋನ್​ನಲ್ಲಿ ದೀರ್ಘಕಾಲದವರಗೆ  ಮಾತನಾಡುವುದು ಅವರಿಗೆ ವಿನೋದಮಯವಾಗಿರುತ್ತದೆ. ಆದಾಗ್ಯೂ, ಕೆಲವರಿಗೆ ಆ ಹಂತದ ಅಂತ್ಯದ ಬಗ್ಗೆ ತಿಳಿದಿರುವುದಿಲ್ಲ ಮತ್ತು ಗಂಟೆಗಳ ಕಾಲ ಕರೆಯಲ್ಲಿ ಮಾತನಾಡುವುದು ಯಾವುದೇ ಪ್ರಯೋಜನವಿಲ್ಲ ಅನ್ನುತ್ತಾರೆ ತಜ್ಱರು. ಇನ್ನು ಕೆಲವು ವ್ಯಕ್ತಿಗಳು  5-10 ನಿಮಿಷಗಳ ಕಾಲ ಮಾತ್ರ ಫೋನ್​ನಲ್ಲಿ ಮಾತನಾಡುತ್ತಾರೆ. ಪುರುಷರು ಹೇಳದಿದ್ದರೂ, ಅವರು ಗಂಟೆಗಳ ಕಾಲ ಫೋನ್ ಸಂಭಾಷಣೆಗಳನ್ನು ಇಷ್ಟಪಡುವುದಿಲ್ಲ ಎಂಬುದು ಸತ್ಯ.
 3. ಅಧಿಕಾರಕ್ಕಾಗಿ ಹೋರಾಟ: 
  ಒಬ್ಬ ಮಹಿಳೆ ಪುರುಷನಿಗಿಂತ ಹೆಚ್ಚು ಗಳಿಸುವುದು, ಉತ್ತಮವಾಗಿ ಕಾಣುವುದು ಅಥವಾ ಹೆಚ್ಚು ವಿದ್ಯಾವಂತರಾಗಿದ್ದಾಗ, ಸಾಮನ್ಯವಾಗಿ ಪುರುಷರಲ್ಲಿ ಅಸೂಹೆ ಹುಟ್ಟಿಕೊಂಡು ಅವರಿಗಿಂತ ಮೇಲಾಗಿ ಕಾಣಿಸಿಕೊಳ್ಳುವ ಹುಚ್ಚುತನ ಹತ್ತುತ್ತದೆ. ಆದರೆ ಇದು ಒಳ್ಳೆಯದಲ್ಲ. ಇದಕ್ಕೆ ಅಧಿಕಾರಕ್ಕಾಗಿ ಹೋರಾಟ ಅನ್ನುತ್ತಾರೆ. ಇದರ ಬದಲು ಅವಳು ನಮ್ಮಂತೆ ಸಮಾನಳು ಎಂದು ತಿಳಿದು ನಡೆದುಕೊಳ್ಳುವುದು ಉತ್ತಮ.
 4. ಭಾವನಾತ್ಮಕ ಕುಶಲತೆ
  ಭಾವನೆಗಳು ಒಬ್ಬ ವ್ಯಕ್ತಿಯು ತನ್ನೊಳಗೆ ಏನನ್ನು ಅನುಭವಿಸುತ್ತಿದ್ದಾನೆ ಎಂಬುದನ್ನು ವ್ಯಕ್ತಪಡಿಸಲು ಮತ್ತು ಇತರ ವ್ಯಕ್ತಿಯು ಅದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಒಂದು ಮಾರ್ಗವಾಗಿದೆ. ಇದರಿಂದ ನಮ್ಮ ಪ್ರೀತಿ ಪಾತ್ರರೊಂದಿಗೆ ಹತ್ತಿರವಾಗುತ್ತೇವೆ.  ಹೆಣ್ಣಿನ ಭಾವನೆಗಳನ್ನು  ಅರ್ಥ ಮಾಡಿಕೊಳ್ಳಲು ಕೆಲವೊಂದು ಸಮಯದಲ್ಲಿ ಪುರುಷನಿಗೆ ಆಗುವುದಿಲ್ಲ. ಆದರೂ ಕೂಡಾ ಪುರಷ ಹೇಗಾದರು ಮಾಡಿ ಆಕೆಯ ಭಾವನೆಯನ್ನು ಅರ್ಥ ಮಾಡಿಕೊಳ್ಳುತ್ತಾನೆ. ಹಾಗೇ ಮಹಿಳೆ ಕೂಡ ಪರುಷನ ಭಾವನೆಗಳನ್ನು ಅರ್ಥ ಮಾಡಿಕೊಳ್ಳ ಬೇಕು. ಒಬ್ಬರಿಗೊಬ್ಬರು ಭಾವನೆ ಅರ್ಥ ಮಾಡಿಕೊಂಡರೆ ಸುಖ ಜೀವನ ನಡೆಸಲು ಸಾಧ್ಯವಾಗುತ್ತದೆ.
 5. ಪುರುಷ ಮತ್ತು ಮಹಿಳೆಯ ನಡುವಿನ ಸಂಕೇತಗಳು
  ಪುರುಷರು ಕೆಲವೊಂದು ಸಲ ಹೆಣ್ಣಿನ ಸಂಕೇತಗಳನ್ನು ಅರ್ಥ ಮಾಡಿಕೊಳ್ಳಲು ತಡಕಾಡಬಹುದು. ಹಾಗೇ ಮಹಿಳೆ ಕೂಡ ಪುರುಷನ ಸಂಕೇತಗಳನ್ನು ಅರ್ಥ ಮಾಡಿಕೊಳ್ಳಲು ತಡಕಾಡಬಹುದು. ಮಹಿಳೆಯರು ರೊಮ್ಯಾಂಟಿಕ್ ಮತ್ತು ಕ್ಯೂಟ್ ಆಗಿರುವುದಕ್ಕಿಂತ ಹೆಚ್ಚಾಗಿ ಮೃದುವಾಗಿ ವರ್ತಿಸಿದಾಗ ಅದು ಪುರುಷರನ್ನು ಗೊಂದಲಗೊಳಿಸುತ್ತದೆ. ಪುರುಷರಿಗೆ ಸಂಕೀರ್ಣತೆಯನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ತನ್ನನ್ನು ಸಂಪರ್ಕಿಸಲು ಬಯಸುವ ಮಹಿಳೆಯರಿಗೆ ಒಂದು ಸೂಕ್ಷ್ಮ ಸುಳಿವು ಕೂಡ ಬಹಳ ದೂರ ಹೋಗುತ್ತದೆ.

ಇದನ್ನು ಓದಿ: 89 ರೂ. ಚಾಕಲೇಟ್​ನಲ್ಲಿ ಹುಳಗಳು! 50 ಲಕ್ಷ ರೂ. ಪರಿಹಾರ ಕೋರಿದ ಗ್ರಾಹಕ, ಕೋರ್ಟ್ ಹೇಳಿದ್ದೇನು?

TV9 Kannada


Leave a Reply

Your email address will not be published. Required fields are marked *