ಕೆಲ ವರ್ಷಗಳ ಹಿಂದೆಯೇ ನೀನು ಯಾವ ದಿನ ಅಂತರರಾಷ್ಟ್ರೀಯ ಟೆಸ್ಟ್ ಶತಕವನ್ನು ಬಾರಿಸುತ್ತೀಯೋ, ಅಂದೇ ನಾನು ನಿಮ್ಮ ಮನೆಗೆ ಊಟಕ್ಕೆ ಬರುತ್ತೇನೆ ಎಂದು ಶ್ರೇಯಸ್ ಅಯ್ಯರ್ಗೆ ಕೋಚ್ ಪ್ರವೀಣ್ ಆಮ್ರೆ ಹೇಳಿದ್ದರಂತೆ. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ನನ್ನನ್ನು ಆಹ್ವಾನಿಸಬೇಡ ಎಂದು ಪ್ರವೀಣ್ ಆಮ್ರೆ ಶ್ರೇಯಸ್ ಅಯ್ಯರ್ ಅವರಿಗೆ ಷರತ್ತನ್ನು ವಿಧಿಸಿದ್ದರಂತೆ.
ಇದರ ಬಗ್ಗೆ ಈಗ ಸ್ವತಃ ಶ್ರೇಯಸ್ ಅಯ್ಯರ್ ಕೂಡ ಮಾತನಾಡಿದ್ದಾರೆ. ಅಲ್ಲದೇ ಒಂದು ದಿನ ಊಟಕ್ಕೆ ಕರೆಯುವುದಾಗಿ ಹೇಳಿದ್ದಾರೆ. ಶತಕ ಸಿಡಿಸಿದ ಬಳಿಕ ನಾನು ನನ್ನ ಕೋಚ್ ಪ್ರವೀಣ್ ಆಮ್ರೆ ಅವರನ್ನ ಇದೀಗ ಮುಕ್ತವಾಗಿ ಊಟಕ್ಕೆ ಆಹ್ವಾನಿಸಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ‘ನಿಮ್ಮ ಬಗ್ಗೆ ಹೆಮ್ಮೆ ಇದೆ ಶ್ರೇಯಸ್ ಅಯ್ಯರ್’- ಹಾಡಿ ಹೊಗಳಿದ ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್