ನಿಮ್ಮ ವಿಡಿಯೋಗೆ ಯೂಟ್ಯೂಬ್ ವೇದಿಕೆಯಲ್ಲಿ ಡಿಸ್ಲೈಕ್​ಗಳು ಬರುತ್ತಿದ್ದರೆ ಚಿಂತೆ ಬೇಡ, ಇನ್ನು ಮುಂದೆ ಆ ಕೌಂಟರ್ ಕಾಣದಂತೆ ಮರೆಯಾಗುವುದು | YouTube officially announces hiding of dislike counter to help creators not to be discouraged


ಜಗತ್ತಿನಾದ್ಯಂತ ಅಸಂಖ್ಯಾತ ಯೂಟ್ಯೂಬರ್ ಗಳಿದ್ದಾರೆ. ತಮ್ಮ ಕ್ರಿಯೇಟಿವಿಟಿಯನ್ನು ಅವರು ಒಂದು ವಿಡಿಯೋ ಮಾಡಿ ಅದನ್ನು ಯೂಟ್ಯೂಬ್ ವೇದಿಕೆಗೆ ಅಪ್ಲೋಡ್ ಮಾಡುತ್ತಾರೆ. ಅವರು ಮಾಡಿದ ವಿಡಿಯೋ ಎಲ್ಲರಿಗೂ ಇಷ್ಟವಾಗಬೇಕೆಂದೇನಿಲ್ಲ. ಅಂಥವರು ಅದನ್ನು ಡಿಸ್ಲೈಕ್ ಮಾಡುತ್ತಾರೆ. ಇದರಿಂದ ಉದ್ಭವಿಸಿರುವ ಸಮಸ್ಯೆಯೇನೆಂದರೆ, ಲೈಕ್ ಗಿಂತ ಹೆಚ್ಚು ಡಿಸ್ಲೈಕ್ ಪಡೆದ ಯೂಟ್ಯೂಬರ್ ಗಳು ನಿರುತ್ತೇಜಿತರಾಗುತ್ತಿದ್ದಾರೆ ಮತ್ತು ಹೊಸ ವಿಡಿಯೋ ಮಾಡುವುದನ್ನು ನಿಲ್ಲಿಸಿಬಿಡುತ್ತಿದ್ದಾರೆ. ಇದು ಮತ್ತೊಂದು ರೀತಿಯಲ್ಲಿ ಯೂಟ್ಯೂಬ್ ಪ್ಲಾಟ್ ಫಾರ್ಮ್ ಮೇಲೂ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲೇ ಸದರಿ ವೇದಿಕೆಯು ಒಂದು ಹೊಸ ನಿಯಮವನ್ನು ಜಾರಿಗೊಳಿಸಿದೆ.

ಡಿಸ್ಲೈಕ್ ಕೌಂಟ್ ಅಂದರೆ ಒಂದು ನಿರ್ದಿಷ್ಟ ವಿಡಿಯೋವನ್ನು ಎಷ್ಟು ಜನಕ್ಕೆ ಇಷ್ಟವಾಗಿಲ್ಲ ಅನ್ನೋ ಮಾಹಿತಿ ಇದುವರೆಗೆ ಆ ವಿಡಿಯೋದ ಕೆಳಭಾಗದಲ್ಲೇ ಡಿಸ್ ಪ್ಲೇ ಆಗುತ್ತಿತ್ತು. ಆದರೆ ಇನ್ನು ಮುಂದೆ ಅದನ್ನು ಬಚ್ಚಿಡುವುದಾಗಿ ಯೂಟ್ಯೂಬ್ ಅಧಿಕೃತವಾಗಿ ಘೋಷಣೆ ಮಾಡಿದೆ. ಅಂದರೆ, ವಿಶ್ವದಾದ್ಯಂತ ಯೂಟ್ಯೂಬ್ ಸೈಟ್ನಲ್ಲಿ ಡಿಸ್ಲೈಕ್ ಅನ್ನೋದು ಗೋಚರವಾಗುವುದಿಲ್ಲ. ಜನರಿಗೆ ಕಾಣದ ಹಾಗೆ ಅದನ್ನು ಮರೆಮಾಡಲಾಗುವುದು. ಅದು ವಿಡಿಯೋ ಕ್ರಿಯೇಟರ್ ಗಳಿಗೆ ಬೇಕು ಅಂತಾದಲ್ಲಿ ಯೂಟ್ಯೂಬ್ ಸ್ಟುಡಿಯೋ ಡ್ಯಾಶ್ ಬೋರ್ಡ್ ಮೂಲಕ ಪಡೆದುಕೊಳ್ಳಬಹುದು.

ಯೂಟ್ಯೂಬ್ ಕಂಪನಿಯು, ವಿಡಿಯೋ ಸೃಷ್ಟಿಕರ್ತರ ಹಿತದೃಷ್ಟಿಯಿಂದ ಈ ನಿರ್ಣಯ ತೆಗೆದುಕೊಂಡಿರುವುದಾಗಿ ಹೇಳುತ್ತಿದೆಯಾದರೂ ಕೆಲ ಸೃಷ್ಟಿಕರ್ತರೇ ಸದರಿ ನಿರ್ಣಯವನ್ನು ಡಿಸ್ಲೈಕ್ ಮಾಡುತ್ತಿದ್ದಾರೆ ಮತ್ತು ಕೆಲವರು ಒಳ್ಳೇ ನಿರ್ಧಾರ ಅಂತ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಯೂಟ್ಯೂಬ್ ಕಂಪನಿ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

‘ಯೂಟ್ಯೂಬ್ ನ ಡಿಸ್ಲೈಕ್ ಬಟನ್, ಯೂಟ್ಯೂಬರ್​ಗಳಿಗೆ ಅವರ ವಿಡಿಯೋ ಇಷ್ಟವಾಗಿದೆಯೋ ಇಲ್ಲವೋ ಅನ್ನೋದನ್ನು ಸೂಚಿಸುವ ಇಂಡಿಕೇಟರ್ ಅಗಿದೆ, ಅದನ್ನು ಕಾಣದ ಹಾಗೆ ಮಾಡಿದರೆ, ಪ್ರಯೋಜನವೇನು?’ ಅಂತ ಭಾರತದ ಹಲವಾರು ಯೂಟ್ಯೂಬರ್ಗಳು ಹೇಳಿದ್ದಾರೆ.

ಇದನ್ನೂ ಓದಿ:    ಹೆಚ್.ಡಿ. ಕೋಟೆ: ಕೆರೆ ಕೋಡಿಯಲ್ಲಿ ಮೀನು ಹಿಡಿಯಲು ಮುಗಿಬಿದ್ದ ಯುವಕರು; ವಿಡಿಯೋ ನೋಡಿ

TV9 Kannada


Leave a Reply

Your email address will not be published. Required fields are marked *