ನಿಮ್ಮ ಸಂಗಾತಿಯ ಜೊತೆಗೆ ರೊಮ್ಯಾಂಟಿಕ್ ಜೀವನಕ್ಕಾಗಿ ಈ ನಿಯಮಗಳನ್ನು ಪಾಲಿಸಿ ? | Follow these rules for a romantic life with a spouse


ನಿಮ್ಮ ಸಂಗಾತಿಯ ಜೊತೆಗೆ ರೊಮ್ಯಾಂಟಿಕ್ ಜೀವನಕ್ಕಾಗಿ ಈ ನಿಯಮಗಳನ್ನು ಪಾಲಿಸಿ ?

ಸಾಂದರ್ಭಿಕ ಚಿತ್ರ

ಪ್ರತಿಯೊಬ್ಬರ ಜೀವನದಲ್ಲಿ ಸಂಗಾತಿ ಎನ್ನುವದು ಬೇಕೇ ಬೇಕು,  ಪ್ರತಿಯೊಂದು ಜೀವಿಯ ಬದುಕು ಪರಿಪೂರ್ಣವಾಗುವುದು ಒಬ್ಬ ಸಂಗಾತಿಯಿಂದ, ಸುಖ -ದು:ಖ ಎಲ್ಲದಕ್ಕೂ ಸಂಗಾತಿ ಬೇಕು. ಜೀವನದ ಅನನ್ಯತೆಯಲ್ಲಿ ನಮಗೂ ಕೆಲವೊಂದು ಭಾವನೆಗಳನ್ನು ಹೇಳಿಕೊಳ್ಳಲು ಮತ್ತೊಂದು ಜೀವಬೇಕು. ಅದು ನಮ್ಮ ನಡುವಿನ ವಾತ್ಸಲ್ಯದ ಸೇತುವೇ ಆಗಿರಬೇಕು ಮತ್ತು ನಮ್ಮ ಕಾಳಜಿಯನ್ನು ಮಾಡುವ ಒಬ್ಬ ಉತ್ತಮ ಸ್ನೇಹಿತನಾಗಿರಬೇಕು. ಸಂಗಾತಿ ಎನ್ನುವವರು ನಮ್ಮ ಜೀವನದಲ್ಲಿ ಎಲ್ಲವನ್ನು ತಿಳಿಸುವ ಮಾರ್ಗದರ್ಶಕನಾಗಿ, ಪ್ರೀತಿಯನ್ನು ನೀಡುವ ಪ್ರೇಮಿಯಾಗಿಬೇಕು ಎಂದೆಲ್ಲ ನಾವು ಬಯಸುವುದು ಸಹಜ ಆದರೆ ಆ ಪ್ರೀತಿಯನ್ನು  ಹೇಗೆ ವ್ಯಕ್ತಪಡಿಸುವುದು ಎಂಬ  ಗೊಂದಲುಗಳು ನಮ್ಮಲ್ಲಿದೆ. ಕೆಲವೊಂದು ಬಾರಿ ನಮ್ಮ  ಪ್ರೀತಿಯಲ್ಲೂ ದ್ವೇಷ ಕೋಪಗಳು ಹುಟ್ಟಿಕೊಳ್ಳುವುದು ಸಹಜ, ಅದು ನಮ್ಮ ಮಧ್ಯೆ ಇರುವ ಅಂತರ ಮತ್ತು ನಮ್ಮವರನ್ನು ನಾವು ಅರ್ಥ ಮಾಡಿಕೊಳ್ಳದಿರುವಾಗ ಸಹಜವಾಗಿ ವೈಮನಸ್ಸುಗಳು ಉಂಟಾಗುತ್ತದೆ. ಇದಕ್ಕಾಗಿ ತಮ್ಮ ಸಂಗಾತಿಯ ಜೊತೆಗೆ ರೊಮ್ಯಾಂಟಿಕ್ ಮೂಡಿನಲ್ಲೂ ಇರುವ ಪ್ರಯತ್ನವನ್ನು ಮಾಡಬೇಕು. ಮುಖ್ಯವಾಗಿ ಅವರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿಕೊಂಡಾಗ ನಮ್ಮ ಜೀವನ ಸುಂದರವಾಗಿರುತ್ತದೆ.

ಜೀವನದಲ್ಲಿ ಎಲ್ಲರಿಗೂ ಒಂದಲ್ಲ ಒಂದು ವಿಚಾರದಲ್ಲಿ ಇಷ್ಟ-ಕಷ್ಟಗಳು  ಇರುತ್ತಾರೆ.  ಅದು ನಮ್ಮನ್ನು ಆಯ್ಕೆ ಮಾಡುವ ಗೆಳಯ-ಗೆಳತಿಗೆ ಇರಬೇಕೆಂದಿಲ್ಲ, ಆದರೆ ನಮ್ಮ -ನಮ್ಮ ಇಷ್ಟ-ಕಷ್ಟಕ್ಕೆ ಧಕ್ಕೆಬಾರದಂತೆ ವರ್ತಿಸುವುದು ಉತ್ತಮ, ಅದಕ್ಕಾಗಿ ನಮ್ಮಲ್ಲಿರುವ ಕೆಲವೊಂದು ವಿಚಾರಗಳನ್ನು ನಮ್ಮ ಬಾಳಸಂಗಾತಿಗಾಗಿ ನಾವು ಬದಲಾವಣೆ ಮಾಡಿಕೊಳ್ಳುವುದು ಉತ್ತಮ. ಈ ಕಾರಣಕ್ಕೆ ನಮ್ಮಲ್ಲಿರುವ ಕೆಲವೊಂದು ವಿಚಾರಗಳನ್ನು ನಮ್ಮಲ್ಲಿಯೇ ಅಧೀನ ಮಾಡಿಕೊಳ್ಳುವ ಪರಿಸ್ಥಿತಿಗಳ ಮುಂದಾಗುವುದು ಖಂಡಿತ, ಅದಕ್ಕಾಗಿ ನಮ್ಮ ಸಂಗಾತಿಯ ಇಷ್ಟ-ಕಷ್ಟಗಳನ್ನು ನಾವು ಅರಿತುಕೊಳ್ಳುವ ಪ್ರಯತ್ನವನ್ನು ಮಾಡಿಕೊಳ್ಳಬೇಕು. ಸಂಗಾತಿಗಳ ನಡುವಿನ ಸಂಬಂಧ ನಮ್ಮ ಕೈಗನ್ನಡಿಯಂತಿರಬೇಕು.  ಸಂಬಂಧಗಳು ಯಾವತ್ತೂ ಕಟ್ಟಿ ಹಾಕುವ ಬಂಧನದಂತಿರಬಾರದು, ಆಗ ಬದುಕು ಖಂಡಿತ ಸುಂದರವಾಗಿರುತ್ತದೆ.

ರೊಮ್ಯಾಂಟಿಕ್  ಜೀವನ ಸುಂದರ 

ರೊಮ್ಯಾಂಟಿಕ್ ಬಾಂಡ್‌ನಲ್ಲಿ ಸಂವಹನ ಮತ್ತು ಪರಸ್ಪರ ವಿನಿಮಯ ಎಲ್ಲವೂ ಅವಿಭಾಜ್ಯವಾಗಿದ್ದರೂ,  ಮಾತನಾಡದ ಕೆಲವು ವಿಷಯಗಳು ಸಂಬಂಧಕ್ಕೆ ಅಂತರ್ಗತವಾಗಿ ಅನ್ವಯಿಸುತ್ತವೆ. ನಿಮ್ಮ ಸಂಗಾತಿಯ ಜೊತೆಗೆ ರೊಮ್ಯಾಂಟಿಕ್ ಸಮಯವನ್ನು ಕಳೆಯಿರಿ, ಅದು ನಿಮ್ಮನ್ನು ಇನ್ನಷ್ಟು  ವೈವಾಹಿಕ ಜೀವನದಲ್ಲಿ ಒಳ್ಳೆಯ  ಅನುಭವವನ್ನು ನೀಡುತ್ತಾದೆ. ಇದರ ಜೊತೆಗೆ ನಿಮ್ಮ ಸಂಗಾತಿಯು ರೊಮ್ಯಾಂಟಿಕ್ ಬಾಂಡ್‌ ನ್ನು ಬಯಸುತ್ತಿದ್ದರ ಎಂಬುದನ್ನು ಅರ್ಥ ಮಾಡಿಕೊಳ್ಳಿ, ಏಕೆಂದರೆ ನೀವು ಇಲ್ಲಿ ಅವರನ್ನು ಅರ್ಥ ಮಾಡಿಕೊಳ್ಳಲು ಒಂದು ಅವಕಾಶ ಸಿಗುತ್ತದೆ. ಹಾಗಾಗಿ ನಿಮ್ಮ ಪ್ರೇಮ ಪಯಣಕ್ಕೆ ಒಂದು ಸ್ಪೂರ್ತಿ ಸಿಗುತ್ತದೆ. ರೊಮ್ಯಾಂಟಿಕ್ ಲೈಫ್ ನಲ್ಲಿ  ನಿಮ್ಮ ಸಂಗಾತಿಯ ಬಯಕೆಗಳನ್ನು ಅರ್ಥ ಮಾಡಿಕೊಳ್ಳಲು ಉತ್ತಮವಾದ ಕಾಲವನ್ನು ಈ ರೊಮ್ಯಾಂಟಿಕ್ ಮೂಮೆಂಟ್ ನ್ನು ಸೃಷ್ಟಿ ಮಾಡುತ್ತದೆ.

ಬಯಕೆಗಳನ್ನು ಅರ್ಥಮಾಡಿಕೊಳ್ಳಿ

ನಿಮ್ಮ ಸಂಗಾತಿಯು ಲೈಂಗಿಕವಾಗಿ ಏನ್ನನೂ ಬಯಸುತ್ತಾರೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಲಿ, ಲೈಂಗಿಕವಾಗಿ ಅವರು ಏನ್ನನ್ನೂ ಅರ್ಥಮಾಡಿಕೊಂಡಿದ್ದಾರೆ. ಅವರ ಮನಸ್ಸಿನಲ್ಲಿ ಲೈಂಗಿಕತೆಯ ಬಗ್ಗೆ ಯಾವ ಅಭಿಪ್ರಾಯ ಇದೆ, ಎಂಬುದನ್ನು ತಿಳಿದುಕೊಳ್ಳಬೇಕು.   ಜೊತೆಗೆ ನಿಮ್ಮ ಸಂಗಾತಿಯನ್ನು ಸೇರುವಾಗ ರೊಮ್ಯಾಂಟಿಕ್ ಮಾತುಗಳನ್ನು ಹಾಡುವ ಮೂಲಕ ಅವರನ್ನು ನಿಮ್ಮ ಬಳಿ ಸೆಳೆದುಕೊಳ್ಳಿ. ಈ ಸಮಯದಲ್ಲಿ ಅವರ ಜೊತೆಗೆ ಗೌರವಯುತವಾಗಿ ನಡೆಕೊಳ್ಳವುದನ್ನು ಮರೆಯಬೇಡಿ. ಏಕೆಂದರೆ ಲೈಂಗಿಕವಾಗಿ ನಡೆಕೊಳ್ಳುವ ವರ್ತನೆ ನಿಮ್ಮ ಮೇಲಿನ ಗೌರವವನ್ನು ಹೆಚ್ಚಿಸುತ್ತದೆ.

ಸೇರುವ ಸಮಯದಲ್ಲಿ ನಿಷ್ಠೆ ಮತ್ತು ಆರೋಗ್ಯದ ಬಗ್ಗೆ ಗಮನಿಸಿ 

ನಿಮ್ಮ ಸಂಗಾತಿಯನ್ನು ಸೇರುವ ಸಮಯದಲ್ಲಿ ನಿಷ್ಠೆಯನ್ನು ಹೊಂದಿರಬೇಕು ಮತ್ತು ಮುಂಜಾಗೃತ ಕ್ರಮವನ್ನು ಪಾಲಿಸಬೇಕಾಗಿರುವುದು ಉತ್ತಮ ಅಭ್ಯಾಸವಾಗಿರುತ್ತದೆ. ಇದರ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆಯು ಗಮನ ನೀಡಬೇಕಾಗುತ್ತದೆ. ಲೈಂಗಿಕವಾಗಿ ಸೇರುವ ಸಮಯದಲ್ಲಿ ಕೆಲವೊಂದು ವೈವಾಹಿಕ ಪದ್ದತಿಗಳನ್ನು ಹಾಗೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧರಾಗಿರಬೇಕು. ಅದಕ್ಕಾಗಿ ನಮ್ಮ ಪದ್ಧತಿಗಳು ಹಾಗೂ ಕೆಲವೊಂದು ಆಚರಣೆಗಳನ್ನು ಪಾಲಿಸುವುದು ಉತ್ತಮ.

TV9 Kannada


Leave a Reply

Your email address will not be published. Required fields are marked *