ಬೆಂಗಳೂರು: ಕೋವಿಡ್-19 2ನೇ ಅಲೆಯಿಂದಾಗಿ ದೇಶ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸುಂತಾಗಿರುವ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರ ಪರಿಸ್ಥಿತಿಯ ನಿಯಂತ್ರಣ ಕುರಿತು ನೀಡಿದ್ದ ಸಲಹೆಗಳಿಗೆ ಮೆಚ್ಚುಗೆ ಸೂಚಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಧನ್ಯವಾದ ತಿಳಿಸಿದ್ದಾರೆ.

ಕೊರೊನಾ ತೀವ್ರತೆ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ದೇಶದಲ್ಲಿ ಆಕ್ಸಿಜನ್​ ಹಾಗೂ ಬೆಡ್​ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಹೆಚ್​​ಡಿಡಿ ನಾಲ್ಕು ಪುಟಗಳ ಸುದೀರ್ಘ ಪತ್ರವನ್ನು ಬರೆದು ಹಲವು ಸಲಹೆಗಳನ್ನು ನೀಡಿದ್ದರು. ಈ ಕುರಿತ ಪತ್ರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು.

ಹೆಚ್​ಡಿಡಿ ಅವರು ಸಲಹೆ ನೀಡಿದ ಬೆನ್ನಲ್ಲೇ ಮೋದಿ ಅವರು ಕರೆ ಮಾಡಿ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಹೆಚ್​ಡಿಡಿ, ಕೆಲವೇ ಕ್ಷಣಗಳ ಹಿಂದೆ ಪ್ರಧಾನಿ ಮೋದಿ ಅವರು ಕರೆ ಮಾಡಿ ಮಾತನಾಡಿದರು. ಕೊರೊನಾ ಕುರಿತು ನಾನು ಕಳುಹಿಸಿದ ಪತ್ರವನ್ನು ಎಚ್ಚರಿಕೆಯಿಂದ ಓದಿದ್ದು, ನಾನು ನೀಡಿದ ಸಲಹೆಗಳನ್ನು ಪಾಲಿಸುವುದಾಗಿ ಭರವಸೆ ನೀಡಿದರು. ನನ್ನ ಪತ್ರಕ್ಕೆ ಕಾಳಜಿ ವಹಿಸಿ ತ್ವರಿತವಾಗಿ ಪ್ರತಿಕ್ರಿಯೆ ನೀಡಿದ ಅವರಿಗೆ ನನ್ನ ಧನ್ಯವಾದ. ಸಾಂಕ್ರಾಮಿಕ ಸೋಂಕನ್ನು ಎದುರಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದು ಬರೆದುಕೊಂಡಿದ್ದಾರೆ.

The post ‘ನಿಮ್ಮ ಸಲಹೆಗಳಿಗಾಗಿ ಧನ್ಯವಾದ’ ಮಾಜಿ ಪಿಎಂ ಹೆಚ್​​ಡಿಡಿಗೆ ಪ್ರಧಾನಿ ಮೋದಿ ಕರೆ appeared first on News First Kannada.

Source: News First Kannada
Read More