ನಿಯಂತ್ರಣ ತಪ್ಪಿ ಭೀಕರವಾಗಿ ಕೆರೆಗೆ ಉರುಳಿ ಬಿದ್ದ KSRTC ಬಸ್


ಚಿಕ್ಕಬಳ್ಳಾಪುರ: ನಿಯಂತ್ರಣ ತಪ್ಪಿ ಕೆರೆಗೆ ಕೆಎಸ್ಆರ್​​ಟಿಸಿ ಉರುಳಿ ಬಿದ್ದಘಟನೆ ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿ ಗ್ರಾಮದಲ್ಲಿ ನಡೆದಿದೆ.

ಯಲ್ಲಂಪಲ್ಲಿ ಕೆರೆಯ ನೀರಿನಲ್ಲಿ ಸಾರಿಗೆ ಬಸ್ ಮುಳುಗಿದೆ. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಾಗೇಪಲ್ಲಿಯಿಂದ ಚಿಂತಾಮಣಿ ಕಡೆಗೆ ಕೆಎಸ್​​ಆರ್​ಟಿಸಿ ಬಸ್​ ಬರುತ್ತಿತ್ತು.

ಇನ್ನು ಬಸ್​ ಕೆರೆಗೆ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದರು. ಇದೀಗ ಬಸ್​ ಮೇಲಕ್ಕೆ ಎತ್ತುವ ಕಾರ್ಯ ಮುಂದುವರಿದಿದೆ.

News First Live Kannada


Leave a Reply

Your email address will not be published. Required fields are marked *