ಬಾಗಲಕೋಟೆ: ನಮ್ಮ ಮುರುಗೇಶ್ ನಿರಾಣಿ ಒಳ್ಳೆ ಮನುಷ್ಯ. ರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸಿಎಂ ರೇಸ್ ನಲ್ಲಿ ಅವರು ಇದ್ದಾರಾ ಗೊತ್ತಿಲ್ಲ, ಆದರೆ ಮುರುಗೇಶ್ ನಿರಾಣಿ ಅವರಿಗೆ ಸಿಎಂ ಆಗುವ ಯೋಗ್ಯತೆ ಇದೆ ಎಂದು ಹರಿಹರ ಪಂಚಮಸಾಲಿ ಪೀಠದ ಮಾಜಿ ಪೀಠಾಧಿಪತಿ ಸಿದ್ದಲಿಂಗೇಶ್ವರ ಸ್ವಾಮೀಜಿ ಪರೋಕ್ಷವಾಗಿ ಸಚಿವ ಮುರಗೇಶ್ ನಿರಾಣಿ ಪರ ಬ್ಯಾಟಿಂಗ್ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ರೇಸ್ ನಲ್ಲಿ ನಿರಾಣಿ ಅವರ ಹೆಸರಿದ್ದರೆ, ಖುಷಿ ಪಡೋಣ, ನಾನು ಸಂತೋಷ ಪಡುತ್ತೇನೆ. ನಿಮ್ಮಂತೆ ನಾನು ನಗುತ್ತೇನೆ. ಸಿಎಂ ಆದರೆ ಪೇಡ ಹಂಚೋಣ, ನಮ್ಮ ಭಾಗದ ಮನುಷ್ಯ ಆಗ್ತಾನೆ ಅಂತ ಸಿಹಿ ಹಂಚೋಣ. ಆಗದಿದ್ದರೂ ಹೆಸರು ಹೇಳುತ್ತಾರೆ ಅಂದರೆ ಮುಂದೆ ಒಂದಲ್ಲ ದಿನ ಆಗೇ ಆಗುತ್ತಾರೆ ಎಂದು ಪರೋಕ್ಷವಾಗಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಇಡೀ ರಾಜ್ಯವನ್ನು ನಿಭಾಯಿಸುವ ಶಕ್ತಿ ನಿರಾಣಿ ಅವರಿಗಿದೆ. ಅವರಂತೆ ಉತ್ತರ ಕರ್ನಾಟಕದಲ್ಲಿ ಅನೇಕ ರಾಜಕಾರಣಿಗಳಿಗೆ ಆ ಯೋಗ್ಯತೆ ಇದೆ. ನಿರಾಣಿ ಸಿಎಂ ಆದರೆ ನಮ್ಮಷ್ಟು ಸಂತೋಷ ಪಡುವವರು ಬೇರೆ ಯಾರು ಇಲ್ಲ ಎನ್ನುವ ಮೂಲಕ ಸಿದ್ದಲಿಂಗ ಸ್ವಾಮೀಜಿ ಮುರಗೇಶ್ ನಿರಾಣಿ ಅವರಿಗೆ ಸಿಎಂ ಸ್ಥಾನ ನೀಡಬೇಕೆಂದು ಪರೋಕ್ಷವಾಗಿ ಹೇಳಿದ್ದಾರೆ. ಇದನ್ನೂ ಓದಿ: ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಅಭಿಮಾನಿ

The post ನಿರಾಣಿ ಅವರಿಗೆ ಸಿಎಂ ಆಗುವ ಯೋಗ್ಯತೆ ಇದೆ : ಸಿದ್ದಲಿಂಗ ಸ್ವಾಮೀಜಿ appeared first on Public TV.

Source: publictv.in

Source link