ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ವಿರುದ್ಧ ದಿ ಹೆಲ್ಪಿಂಗ್ ಸಿಟಿಜನ್ ಅಂಡ್ ಪೀಪಲ್ಸ್ ಕೋರ್ಟ್ ಸಂಸ್ಥಾಪಕ ಎ. ಆಲಂ ಪಾಷಾ ಗಂಭೀರ ಆರೋಪ ಮಾಡಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಆಲಂ ಪಾಷಾ, ನಿರಾಣಿಯವರು ಸದ್ಯದಲ್ಲೇ ಪ್ರಮುಖ ಹುದ್ದೆಗೆ ನೇಮಕವಾಗಲಿದ್ದಾರೆ ಎನ್ನಲಾಗುತ್ತಿದೆ. ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಲಿಮಿಟೆಡ್​​ ಮತ್ತು ನಿರಾಣಿ ಶುಗರ್ಸ್ ಕಂಪನಿಯ ನಿರ್ದೇಶಕ ನಿರಾಣಿ ತಮ್ಮ ಪ್ರಭಾವ ಬಳಸಿ ಭಾರೀ ಅಕ್ರಮ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರೈತರ ಹೆಸರಿನಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆಸಿರುವ ನಿರಾಣಿ ಬಳಿ 500 ಸಿಡಿಗಳು ಇವೆ. ಉತ್ತರ ಕರ್ನಾಟಕದ ಸುಮಾರು 50 ಬ್ಯಾಂಕುಗಳಲ್ಲಿ ರೈತರ ಹೆಸರಿನಲ್ಲಿ ಹಣ ವಂಚಿಸಿರುವ ಇವರಿಗೆ ಸಿಡಿ ಮಾಡೋದು ಹೊಡ್ಡ ವಿಚಾರವೇನಲ್ಲ. ಈಗ ಯಾರು ಬೇಕಾದ್ರೂ ಸಿಡಿ ಮಾಡಬಹುದು. ಇವರಿಗೆ ರಾಜ್ಯದ ಆರೂವರೆ ಕೋಟಿ ಜನರ ಬೆಂಬಲ ಸಿಕ್ಕರೆ ಈ ಸಿಡಿಗಳ ಸಂಖ್ಯೆ 50 ಲಕ್ಷ ಆಗಬಹುದು ಎಂದರು.

The post ‘ನಿರಾಣಿ ಬಳಿ 500 ಸಿಡಿ ಇವೆ‘ ಸಿಎಂ ರೇಸ್​​ನಲ್ಲಿ ಹೆಸರು ಕೇಳಿ ಬರ್ತಿದ್ದ ಹಾಗೆ ಸುತ್ತಿಕೊಂಡ ಆರೋಪ appeared first on News First Kannada.

Source: newsfirstlive.com

Source link