ಬೆಂಗಳೂರು: ಲಾಕ್​ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಇಂದಿನಿಂದ ಬಿಎಂಟಿಸಿ ಬಸ್​​ಗಳು ರಸ್ತೆಗೆ ಇಳಿಯುತ್ತಿವೆ. ಅದರಂತೆ ನಿರೀಕ್ಷೆಗೂ ಮೀರಿ ಮೆಜೆಸ್ಟಿಕ್ ಸೇರಿದಂತೆ ಹಲವು ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಂದು ನಿಂತಿದ್ದಾರೆ. ಕೆಲವು ಕಡೆ ಬಸ್​ ಬಾರದಿದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜನರು ನಿರೀಕ್ಷೆಗೂ ಮೀರಿ ಬರುತ್ತಿರುವ ಹಿನ್ನೆಲೆಯಲ್ಲಿ ಬಸ್​ಗಳ ಸಂಖ್ಯೆಯನ್ನ ಬಿಎಂಟಿಸಿ ಹೆಚ್ಚಿಸುತ್ತಿದೆ. ಮೊದಲ ಪಾಳಿಯದಲ್ಲಿ 1 ಸಾವಿರ ಬಸ್ ಕಾರ್ಯಚರಣೆ ಮಾಡುವಂತೆ ಬಿಎಂಟಿಸಿ ಪ್ಲಾನ್ ಮಾಡಿಕೊಂಡಿತ್ತು. ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಸದ್ಯ 1500 ಬಸ್​ಗಳನ್ನ ಬಿಎಂಟಿಸಿ ರಸ್ತೆಗಿಳಿಸಿದೆ.

BMTC ಎಂಡಿ ಶಿಖಾ ಹೇಳಿಕೆ
ಈಗಾಗಲೇ ಬಿಎಂಟಿಸಿಯ ಮೂವತ್ತು ಸಾವಿರ ಸಿಬ್ಬಂದಿ ಪೈಕಿ, 28 ಸಾವಿರ ನೌಕರರಿಗೆ ಎರಡು ಡೋಸ್ ವ್ಯಾಕ್ಸಿನ್ ಹಾಕಲಾಗಿದೆ. ಸರ್ಕಾರದ ಕಡೆಯಿಂದ ವ್ಯಾಕ್ಸಿನ್ ವ್ಯವಸ್ಥೆ ‌ಮಾಡಲಾಗಿತ್ತು. ಬೇರೆಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ಪ್ರಯಾಣಿಕರು ಆಗಮಿಸಿದ್ದಾರೆ. ಆ ಕಾರಣಕ್ಕಾಗಿ ಇಷ್ಟೊಂದು ಸಮಸ್ಯೆ ಆಗಿದೆ. ಮತ್ತೆ ಇನ್ನಷ್ಟು ಬಸ್​ಗಳನ್ನ ಹೆಚ್ಚಿಸುತ್ತಿದ್ದೇವೆ. ಹೆಚ್ಚಿನ ಜನ ಮೊದಲ ಡೋಸ್ ಮಾತ್ರ ಪಡೆದವರು ಇದ್ದಾರೆ. ಅವರ ಮೊದಲ ಡೋಸ್​ಗೂ ಮತ್ತು ಎರಡನೇ ಡೋಸ್​​ಗೂ ಬೇಕಾದ ಅಂತರ ಇನ್ನು ಮುಗಿದಿಲ್ಲ. ಹಿನ್ನೆಲೆಯಲ್ಲಿ ಮೊದಲ ಡೋಸ್ ಪಡೆದ ಚಾಲಕ ಮತ್ತು ನಿರ್ವಾಹಕರ ಕೋವಿಡ್ ನೆಗೆಟಿವ್ ರಿಪೋರ್ಟ್ ಪಡೆದು ಡ್ಯೂಟಿ ನೀಡಲಾಗುತ್ತಿದೆ ಅಂತಾ ಬಿಎಂಟಿಸಿ ಎಂಡಿ ಶಿಖಾ ಮಾಹಿತಿ ನೀಡಿದ್ದಾರೆ.

The post ನಿರೀಕ್ಷೆಗೂ ಮೀರಿ ಬಂದ ಪ್ರಯಾಣಿಕರು; ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದ BMTC appeared first on News First Kannada.

Source: newsfirstlive.com

Source link