ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ಅವರಿಗೆ ಕೋವಿಡ್-19 ಸೋಂಕು ಧೃಢಪಟ್ಟಿದೆ. ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಿರೂಪಕಿ ಅನುಪಮಾ ಗೌಡ ಸೋಶಿಯಲ್ ಮೀಡಿಯಾ ಮೂಲಕ ತಮ್ಮಗೆ ಕೋವಿಡ್ ಸೋಂಕು ತಗುಲಿರುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನನಗೆ ಕೋವಿಡ್ -19 ಸೋಂಕು ಧೃಢಪಟ್ಟಿದೆ. ಸದ್ಯಕ್ಕೆ ನಾನು ಐಸೋಲೇಟ್ ಆಗಿದೇನೆ. ವೈದ್ಯರ ಸಲಹೆ ಪಡೆದು ಎಲ್ಲಾ ರೀತಿಯ ಕೋವಿಡ್ ಪ್ರೋಟೋಕಾಲ್ ಅನ್ನು ಪಾಲಿಸುತ್ತಿದೇನೆ. ಎರಡು ಮೂರು ದಿನಗಳ ಹಿಂದೆ ನನ್ನ ಸಂಪರ್ಕಕ್ಕೆ ಬಂದಿರುವವರು ದಯವಿಟ್ಟು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ, ಎಂದು ಬರೆದುಕೊಂಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮವನ್ನು ಅನುಪಮಾ ನಿರೂಪಣೆ ಮಾಡುತ್ತಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ಟೀಂನಲ್ಲಿರುವ ಯಶಸ್ವಿನಿ, ಮಾಸ್ಟರ್ ಆನಂದ್ ಅವರಿಗೂ ಕೊರೊನಾ ಪಾಸಿಟಿವ್ ಆಗಿದೆ.