ನಿರ್ಗಮಿತ ಕೋಚ್​​​​​ ರವಿಶಾಸ್ತ್ರಿಗೆ ವಿಶೇಷ ಗಿಫ್ಟ್​​ ನೀಡಿದ ಕೊಹ್ಲಿ-ರೋಹಿತ್


ಟೀಮ್​ ಇಂಡಿಯಾ ಹೆಡ್​ಕೋಚ್​ ರವಿಶಾಸ್ತ್ರಿ ಅವತ ಅಧಿಕಾರ ನವೆಂಬರ್​​ 8ಕ್ಕೆ ಮುಕ್ತಾಯಗೊಂಡಿದೆ. 2017ರಿಂದ ಹೆಡ್​​ಕೋಚ್ ಆಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ ರವಿಶಾಸ್ತ್ರಿ ಅವರ ನಿರ್ಗಮನ ತಂಡದ ಆಟಗಾರರಿಗೆ ಬೇಸರ ತರಿಸಿದೆ.

ನಿನ್ನೆ ನಮೀಬಿಯಾ ವಿರುದ್ಧದ ಪಂದ್ಯ ಮುಗಿದ ನಂತರ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ತಮ್ಮ ನೆಚ್ಚಿನ ಕೋಚ್​​​ಗೆ ನೆನಪಿನ ಕಾಣಿಕೆ ಒಂದನ್ನು ನೀಡಿದ್ದಾರೆ.

ಇಬ್ಬರೂ ಕೂಡ ತಮ್ಮ ಫೇವರಿಟ್​ ಬ್ಯಾಟ್‌ಗಳನ್ನು ನಿರ್ಗಮಿತ ಕೋಚ್​​ ರವಿಶಾಸ್ತ್ರಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಕೊಹ್ಲಿ- ರೋಹಿತ್​​ ಅವರು ನೀಡಿದ ನೆನಪಿನ ಕಾಣಿಕೆ ಸ್ವೀಕರಿಸಿದ ರವಿಶಾಸ್ತ್ರಿ ಪೋಟೋಗೆ ಫೊಸ್​​ ನೀಡಿದ್ದಾರೆ.

News First Live Kannada


Leave a Reply

Your email address will not be published. Required fields are marked *