ಬೆಂಗಳೂರು: ನಿರ್ದೇಶಕರ ಬಗ್ಗೆ ದರ್ಶನ್ ಪುಡಾಂಗ್ ಅಂತ ಹೇಳಿದಕ್ಕೆ ನೋವಾಯಿತು. ಆದ್ದರಿಂದಲೇ ನಾನು ರಿಯಾಕ್ಟ್ ಮಾಡಿದೆ ಎಂದು ನಿರ್ದೇಶಕ ಪ್ರೇಮ್​ ಅಸಮಾಧಾನ ಹೊರಹಾಕಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರೇಮ್​ ಅವರು, ನಿರ್ದೇಶಕರ ಬಗ್ಗೆ ದರ್ಶನ್ ಪುಡಾಂಗ್ ಅಂತ ಹೇಳಿದಕ್ಕೆ ನಾನು ರಿಯಾಕ್ಟ್ ಮಾಡಿದೆ. ಅದನ್ನು ಬಿಟ್ಟು ನನಗೆ ಬೇರೆ ಏನು ಇಲ್ಲ. ನಮಗೆ ಅವರು ಫ್ಯಾಮಿಲಿ ಫ್ರೆಂಡ್. ನಮ್ಮ ಮೇಡಂ ನಾನು ಇಬ್ಬರು ದರ್ಶನ್ ಅವರಿಗೆ ಪ್ರತಿ ಹಂತದಲ್ಲೂ ಜೊತೆ ಇರುತ್ತೇವೆ.

ಆದರೆ ದರ್ಶನ್ ಅವರು ನಡುವೆ ನನ್ನ ಬಗ್ಗೆ ಮಾತಾಡಿದಕ್ಕೆ ನೋವಾಯ್ತು.. ಅದಕ್ಕೆ ರಿಯಾಕ್ಟ್ ಮಾಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ ಅಷ್ಟೇ. ದರ್ಶನ್ ಅವರು ಒಂದು ಪ್ಲೋನಲ್ಲಿ ಮಾತಾಡಿರಬೇಕು. ಅದಕ್ಕೆ ಬೇರೆ ಅರ್ಥ ಕೊಡುವುದು ಬೇಡ. ನನಗೆ ಈಗಲೂ ದರ್ಶನ್ ಆತ್ಮೀಯ ಸ್ನೇಹಿತ. ಆದ್ದರಿಂದಲೇ ನಾನು ಅವರಿಗೆ ಒಂದು ಪತ್ರ ಬರೆದೂ ನಿರ್ದೇಶಕರ ಬಗ್ಗೆ ಈ ರೀತಿ ಮಾತನಾಡದಂತೆ ಮನವಿ ಮಾಡಿದ್ದೀನಿ ಎಂದು ಹೇಳಿದರು.

The post ನಿರ್ದೇಶಕರ ಬಗ್ಗೆ ದರ್ಶನ್ ಪುಡಾಂಗ್ ಅಂತ ಹೇಳಿದಕ್ಕೆ ನೋವಾಯ್ತು- ನಿರ್ದೇಶಕ ಪ್ರೇಮ್​ appeared first on News First Kannada.

Source: newsfirstlive.com

Source link