ನಿರ್ದೇಶಕ ಬಹದ್ದೂರ್​ ಚೇತನ್​ ಕುಮಾರ್​ ಇಂದು ತಮ್ಮ ಸೋದರತ್ತೆಯ ಮಗಳು ಮಾನಸ ಜೊತೆ ಸಪ್ತಪದಿ ತುಳಿದಿದ್ದಾರೆ. ಮೈಸೂರಿನ ಕಲ್ಪವೃಕ್ಷ ರಾಘವೇಂದ್ರ ಸ್ವಾಮಿ ಮಠದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಸದ್ಯ ಚೇತನ್​ ಮದುವೆಯಲ್ಲಿ ಮದುಮಕ್ಕಳನ್ನ ಬಿಟ್ಟರೆ ಎಲ್ಲರ ಕಣ್ಣು ಬಿದ್ದಿದ್ದು ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಮೇಲೆ. ಹೌದು.. ತಮ್ಮ ಪತ್ನಿ ಪ್ರೇರಣಾ ಜೊತೆ ಚೇತನ್​ ಮದುವೆಗೆ ವೈಟ್​ ಆ್ಯಂಡ್​ ವೈಟ್​ನಲ್ಲಿ ಆಗಮಿಸಿರುವ ಧ್ರುವ, ಮತ್ತೆ ತಮ್ಮ ಬಹದ್ದೂರ್​​ ಸಿನಿಮಾದ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಎಕ್ಸ್​​ಕ್ಲೂಸಿವ್​ ಆಗಿ ನ್ಯೂಸ್​ಫಸ್ಟ್​ಗೆ ಸಿಕ್ಕಿದೆ.

ಯೆಸ್​.. ಅದ್ಧೂರಿ, ಬಹದ್ದೂರ್​ ಸಿನಿಮಾದ ಲುಕ್​ನಲ್ಲಿ ನಟ ಧ್ರುವ ಸರ್ಜಾ ಈಗ ಮಿಂಚ್ತಿದ್ದಾರೆ. ಕ್ಲೀನ್​ ಶೇವ್​ ಮಾಡ್ಕೊಂಡು ನೀಟಾಗಿ ಹೇರ್​ ಕಟ್​ ಬೇರೆ ಮಾಡಿಸಿಕೊಂಡಿದ್ದಾರೆ. ಪೊಗರು ಸಿನಿಮಾ ಶೂಟಿಂಗ್​ ಕಂಪ್ಲೀಟ್​ ಆದ ನಂತರ, ಧ್ರುವ ಯಾವಾಗ ಹೇರ್​ ಕಟ್​ ಮಾಡಿಸ್ತಾರೆ… ಅದ್ಯಾವಾಗ ಅವರನ್ನ ಹೊಸ ಲುಕ್​ನಲ್ಲಿ ನೋಡಬಹುದು ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ, ಕಳೆದ ನವೆಂಬರ್​ನಲ್ಲಿ ಧ್ರುವ ಹೊಸ ಲುಕ್​ನಲ್ಲಿ ದರ್ಶನ​ ನೀಡಿದ್ದರು. ಇದೇ ಲುಕ್​ ಧ್ರುವ ಸರ್ಜಾ ಮುಂದಿನ ಸಿನಿಮಾ ದುಬಾರಿಯ ಲುಕ್​ ಅಂತ ಎಲ್ಲೆಡೆ ಸುದ್ದಿ ಕೂಡ ಹಬ್ಬಿತ್ತು.

ಇದೀಗ ಮತ್ತೆ ನೀಟಾಗಿ ಶೇವ್​ ಮಾಡ್ಕೊಂಡು ಚಾಕಲೇಟ್​ ಬಾಯ್​ ಲುಕ್​ನಲ್ಲಿ ದರ್ಶನ ನೀಡಿರುವ ಧ್ರುವ, ಹೊಸ ಸಿನಿಮಾಗೆ ತಯಾರಿ ಮಾಡ್ತಿದ್ದಾರಾ….ಇಲ್ಲಾ ಮದುವೆಗಾಗಿ ಈ ಲುಕ್​ನಲ್ಲಿದ್ದಾರಾ? ಅಥವಾ ಕ್ಯಾಶುವಲ್​ ಆಗಿ ಹೇರ್​ ಕಟ್​ ಮಾಡಿಸ್ಕೊಂಡಿದ್ದಾರಾ ಅನ್ನೋ ನಾನಾ ಪ್ರಶ್ನೆಗಳು ಇದ್ದಿವೆ. ಅದೇನೇ ಇರಲಿ… ಹುಡುಗರಿಗೆ ಧ್ರುವ ಸರ್ಜಾರ ಪೊಗರು ಶಿವನ ಲುಕ್​ ಇಷ್ಟ ಆದ್ರೆ, ಹುಡುಗಿಯರು ಈ ಕ್ಯೂಟ್​ ಚಾಕಲೇಟ್​​ ಬಾಯ್​ ಲುಕ್​​ಗೆ ಫಿದಾ ಆಗೋದು ಗ್ಯಾರಂಟಿ.

 

The post ನಿರ್ದೇಶಕ ಚೇತನ್​ ಮದುವೆಯಲ್ಲಿ ‘ಬಹದ್ದೂರ್​’ ಧ್ರುವ ಸರ್ಜಾ; ಏನಿದು ಹಳೆಯ ಲುಕ್​ ರಹಸ್ಯ.? appeared first on News First Kannada.

Source: newsfirstlive.com

Source link