ನಿರ್ದೇಶಕ ಪವನ್​ ಒಡೆಯರ್ ಎರಡನೇ ಪತ್ನಿ ಯಾರು? ‘ರೇಮೋ’ ವೇದಿಕೆ ಮೇಲೆ ​ಮಸ್ತ್​ ಮಾತು | Raymo Kannada movie director Pawan Wadeyar calls cinematographer Vaidy S as his second wife

ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾದ ಪವನ್​ ಒಡೆಯರ್ (Pawan Wadeyar) ಅವರು ‘ರೇಮೋ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇಶಾನ್​ ಮತ್ತು ಆಶಿಕಾ ರಂಗನಾಥ್​ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಗುರುವಾರ (ನ.25) ‘ರೇಮೋ’ ಸಿನಿಮಾದ ಟೀಸರ್​ ಬಿಡುಗಡೆ ಆಗಿದೆ. ಈ ಕಾರ್ಯಕ್ರಮದ ವೇದಿಕೆಯಲ್ಲಿ ತುಂಬ ಲವಲವಿಕೆಯಿಂದ ಮಾತನಾಡಿದರು ಪವನ್​ ಒಡೆಯರ್​. ಅನೇಕ ವಿಚಾರಗಳನ್ನು ಅವರು ಹಂಚಿಕೊಂಡರು. ‘ಪವನ್​ ಅವರ ಎರಡನೇ ಹೆಂಡತಿ ಬಗ್ಗೆ ಮಾತನಾಡಿಯೇ ಇಲ್ಲ’ ಎಂದು ನಿರೂಪಕಿ ಅನುಪಮಾ ಭಟ್​ ಅವರು ಕಾಲೆಳೆದರು. ಅದಕ್ಕೆ ಪ್ರತಿಕ್ರಿಯಿಸಿದ ಪವನ್​ ಒಡೆಯರ್​ ಅವರು, ‘ನನ್ನ 2ನೇ ಹೆಂಡತಿ ವೈದಿ ಸರ್​ (Vaidy S). ಈ ಸಿನಿಮಾದ ಛಾಯಾಗ್ರಾಹಕರು’ ಎಂದು ಹೇಳಿ ಜೋರಾಗಿ ನಕ್ಕರು. ಈ ಕಾರ್ಯಕ್ರಮದಲ್ಲಿ ಯೋಗರಾಜ್​ ಭಟ್​ ಕೂಡ ಭಾಗಿ ಆಗಿದ್ದರು. ‘ರೇಮೋ’ ಸಿನಿಮಾದ (Raymo Movie) ಟೀಸರ್​ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ:

ಪುನೀತ್​ ಹೊಸ ಚಿತ್ರ ‘ಲಕ್ಕಿ ಮ್ಯಾನ್​’ ಶೀಘ್ರವೇ ರಿಲೀಸ್​; ಅಪ್ಪು ಅಭಿಮಾನಿಗಳಿಗೆ ಗುಡ್​ ನ್ಯೂಸ್​

ದೇವರಿಗೆ ಮುಡಿ ಕೊಟ್ಟು, ಪುನೀತ್​ಗಾಗಿ ಹಾಡು ಹೇಳಿದ ನಟಿ ವಿಜಯಲಕ್ಷ್ಮೀ; ಇಲ್ಲಿದೆ ವಿಡಿಯೋ

TV9 Kannada

Leave a comment

Your email address will not be published. Required fields are marked *