ನಿರ್ದೇಶಕ ಶಂಕರ್​ ಆ್ಯಕ್ಷನ್​ ಕಟ್​ ಹೇಳಲಿರುವ ಪ್ಯಾನ್​ ಇಂಡಿಯಾ ಸಿನಿಮಾಗೆ ಮೆಗಾ ಪವರ್​ಸ್ಟಾರ್​ ರಾಮ್​ ಚರಣ್​ ತೇಜ ಬಣ್ಣ ಹಚ್ತಿದ್ದಾರೆ. ಇದು ರಾಮ್​ಚರಣ್​ಗೆ 15ನೇ ಸಿನಿಮಾ ಆಗಿರಲಿದ್ದು, ಈ ಸಿನಿಮಾಗೆ ನಾಯಕಿ ಯಾರಾಗ್ತಾರೆ ಅನ್ನೋ ಪ್ರಶ್ನೆ ಅಭಿಮಾನಿಗಳ ಜೊತೆ ಜೊತೆಗೆ ಚಿತ್ರತಂಡಕ್ಕೂ ಇತ್ತು. ಇದೀಗ ಭಟ್​ ಪುತ್ರಿಯ ಕಡೆ ಕಣ್ಣು ಹಾಯಿಸಿರುವ ನಿರ್ದೇಶಕ ಶಂಕರ್​, ಮತ್ತೆ ರಾಮ್​ ಚರಣ್​ ಹಾಗೂ ಆಲಿಯಾ ಭಟ್​ರನ್ನ ಜೋಡಿಯಾಗಿ ತೋರಿಸಲು ಹೊರಟಿದ್ದಾರೆ.

ಹೌದು.. ರಾಜಮೌಳಿ ನಿರ್ದೇಶನದ RRR ಸಿನಿಮಾದಲ್ಲಿ ಸೀತಾ ಪಾತ್ರಧಾರಿಯಾಗಿ ಆಲಿಯಾ ನಟಿಸಿದ್ದಾರೆ. ರಾಮ್​​ಚರಣ್​ ಜೋಡಿಯಾಗಿ ನಟಿಸಿರುವ ಆಲಿಯಾಗೆ ಇದು ಡೆಬ್ಯೂ ಟಾಲಿವುಡ್​ ಸಿನಿಮಾ. ಆದ್ರೂ ತಮ್ಮ ಮೊದಲ ಸಿನಿಮಾದಲ್ಲೇ RRR ತಂಡದ ಮನಗೆದ್ದಿರುವ ಆಲಿಯಾ ಅದಾಗಲೇ ಮತ್ತೊಂದು ಸಿನಿಮಾ ಪಡೆದುಕೊಂಡಿದ್ದಾರೆ. ಆಲಿಯಾ ನಟನೆ, ಡೆಡಿಕೇಷನ್​​ ಗಮನಿಸಿರುವ ನಟ ರಾಮ್​ ಚರಣ್​, ಶಂಕರ್​ ಸಿನಿಮಾಗೆ ರೆಫರ್​​ ಮಾಡಿದ್ದಾರೆ ಅನ್ನೋ ಸುದ್ದಿ ಕೂಡ ಇದೆ.

ಸದ್ಯ ನಿರ್ದೇಶಕ ಶಂಕರ್​ ನಟಿ ಆಲಿಯಾ ಭಟ್​ಗೆ ಕಥೆಯ ಇನೀಷಿಯಲ್​ ರೀಡಿಂಗ್​​ ಕೊಟ್ಟಿದ್ದು, ಇನ್ನೂ ಅಧಿಕೃತವಾಗಿ ಯಾವುದೇ ವಿಚಾರ ಹೊರ ಬಿದ್ದಿಲ್ಲ. ಈಗಾಗಲೇ RRR ಸಿನಿಮಾದಲ್ಲಿ ಆಲಿಯಾ ಲುಕ್​ ನೋಡಿ ಇಷ್ಟ ಪಟ್ಟಿರುವ ಅಭಿಮಾನಿಗಳು ಮತ್ತೊಮ್ಮೆ ರಾಮ್​ ಚರಣ್​​ ಜೋಡಿಯಾಗಿ ಆಲಿಯಾ ಭಟ್​ರನ್ನ ನೋಡೋದಕ್ಕೆ ನೋ ಅನ್ನಲ್ಲ.

ಅಂದ್ಹಾಗೇ, ಶಂಕರ್​ ಹಾಗೂ ತಂಡ ಈ ಸಿನಿಮಾದಲ್ಲಿ ಮತ್ತೋರ್ವ ನಟನ ಪಾತ್ರಕ್ಕೆ ಕಿಚ್ಚ ಸುದೀಪ್​ರನ್ನ ಭೇಟಿಯಾಗಿ ಕಥೆ ಹೇಳಿದ್ದಾರೆ ಅಂತ ಹೇಳಲಾಗ್ತಿದೆ. ಆದ್ರೆ ಅದೂ ಕೂಡ ಸದ್ಯ ಓಕೆ ಆದಂತೆ ಕಾಣುತ್ತಿಲ್ಲ. ಇನ್ನು ಈ ಸಿನಿಮಾದಲ್ಲಿ ರಾಮ್​ ಚರಣ್​ ದ್ವಿಪಾತ್ರದಲ್ಲಿ ನಟಿಸುತ್ತಿದ್ದು, ಸಲ್ಮಾನ್​ ಖಾನ್​, ತಂದೆ ಮೆಗಾಸ್ಟಾರ್​ ಚಿರಂಜೀವಿ, ಪವನ್​ ಕಲ್ಯಾಣ್​ ಕೂಡ ಬಣ್ಣ ಹಚ್ಚಲಿದ್ದಾರೆ ಅನ್ನೋ ಸುದ್ದಿಗಳು ಈ ಹಿಂದೆ ಕೇಳಿ ಬಂದಿತ್ತು.

 

The post ನಿರ್ದೇಶಕ ಶಂಕರ್​ ಕಣ್ಣು ‘ಭಟ್ಟ’ರ ಮಗಳ ಮೇಲೆ; ಮತ್ತೆ ರಾಮ್​ ಚರಣ್​-ಆಲಿಯಾ ರೊಮ್ಯಾನ್ಸ್​.? appeared first on News First Kannada.

Source: newsfirstlive.com

Source link