ಸ್ಯಾಂಡಲ್​ವುಡ್​ ಬಾದ್​ಷಾ ಕಿಚ್ಚ ಸುದೀಪ್​ ಈಗಷ್ಟೆ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದು ತಮ್ಮ ದಿನಚರಿಗಳನ್ನ ಶುರು ಮಾಡ್ಕೊಂಡಿದ್ದಾರೆ. ಅಷ್ಟರಲ್ಲೇ ಪಕ್ಕದ ಟಾಲಿವುಡ್​ನಿಂದ ಇಂಟ್ರೆಸ್ಟಿಂಗ್​ ವಿಚಾರವೊಂದು ಹೊರ ಬಿದ್ದಿದೆ. ತೆಲುಗು ಸಿನಿ ಪ್ರೇಕ್ಷಕರಿಗೂ ಚಿರಪರಿಚಿತರಾದ ಕಿಚ್ಚ ಸುದೀಪ್​, ಮತ್ತೊಂದು ಟಾಲಿವುಡ್​ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗ್ತಿದೆ. ಬರೀ ಟಾಲಿವುಡ್​ ಮಾತ್ರವಲ್ಲ, ಇದೊಂದು ಪ್ಯಾನ್​ ಇಂಡಿಯಾ ಸಿನಿಮಾ. ಹೌದು.. ಖ್ಯಾತ ನಿರ್ದೇಶಕ ಶಂಕರ್​ ಆ್ಯಕ್ಷನ್​ ಕಟ್​ ಹೇಳಲಿರುವ ಸಿನಿಮಾಗೆ ಸುದೀಪ್​ರನ್ನ ಅಪ್ರೋಚ್​ ಮಾಡಲಾಗಿದೆ.

ಅಂದ್ಹಾಗೆ ನಟ ರಾಮ್​ ಚರಣ್​ ತೇಜ ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ. ಮತ್ತೋರ್ವ ನಟನ ಜಾಗಕ್ಕೆ ಕಿಚ್ಚ ಸುದೀಪ್​ ಸೂಕ್ತವಾಗಿರ್ತಾರೆ ಅನ್ನೋ ಕಾರಣಕ್ಕೆ ಶಂಕರ್​ ಈಗಾಗಲೇ ಕಿಚ್ಚನನ್ನ ಭೇಟಿ ಮಾಡಿ ಕಥೆ ಹೇಳಿದ್ದಾರಂತೆ. ಇನ್ನು ಈ ಸಿನಿಮಾದಲ್ಲಿ ರಾಮ್​ ಚರಣ್​ ದ್ವಿಪಾತ್ರದಲ್ಲಿ ನಟಿಸುತ್ತಿದ್ದು, ಸಲ್ಮಾನ್​ ಖಾನ್​, ತಂದೆ ಮೆಗಾಸ್ಟಾರ್​ ಚಿರಂಜೀವಿ, ಪವನ್​ ಕಲ್ಯಾಣ್​ ಕೂಡ ಬಣ್ಣ ಹಚ್ಚಲಿದ್ದಾರೆ ಅನ್ನೋ ಸುದ್ದಿಗಳು ಈ ಹಿಂದೆ ಕೇಳಿ ಬಂದಿತ್ತು.

ಇನ್ನು ಕಿಚ್ಚನಿಗೆ ತೆಲುಗು ಹಾಗೇ ತಮಿಳು ಚಿತ್ರರಂಗ ಹೊಸತೇನಲ್ಲ. ಈಗಾಗಲೇ ಎರಡೂ ಭಾಷೆಗಳಲ್ಲೂ ಸಿನಿಮಾ ಮಾಡಿ ಗೆದ್ದಿರುವ ಸುದೀಪ್​, ಇದೀಗ ಈ ಸಿನಿಮಾ ಒಪ್ಪಿಕೊಂಡರೆ ಮತ್ತೊಂದು ಮೈಲಿಗಲ್ಲು ಸೃಷ್ಟಿಸ್ತಾರೆ ಅನ್ನೋದು ಕಿಚ್ಚನ ಅಭಿಮಾನಿಗಳ ಆಸೆ. ಸದ್ಯ ತಮ್ಮ ‘ಕೋಟಿಗೊಬ್ಬ-3’ ಸಿನಿಮಾದ ರಿಲೀಸ್​ಗಾಗಿ ಎದುರು ನೋಡ್ತಿರುವ ಕಿಚ್ಚ, ‘ವಿಕ್ರಾಂತ್​ ರೋಣ’ನ ಉಳಿದ 3-4 ದಿನಗಳ ಶೂಟ್ ಡೇಟ್ಸ್​​ಗೂ ಕಾಯುತ್ತಿದ್ದಾರೆ.​ ನಿರ್ಧರಿಸಿದಂತೆ ಆಗಸ್ಟ್​​ 19ರಂದು ‘ವಿಕ್ರಾಂತ್​ ರೋಣ’ ತೆರೆ ಕಾಣುವ ನಿರೀಕ್ಷೆಯಿದೆ.

ಕಳೆದ ಮೂರು ವಾರಗಳಿಂದ ಅಭಿಮಾನಿಗಳಿಗಾಗಲಿ, ತಮ್ಮ ನೆಚ್ಚಿನ ಬಿಗ್​ಬಾಸ್​ ಮನೆಗೆ ದರ್ಶನ ನೀಡದ ಕಿಚ್ಚ, ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಟ್ವೀಟ್ ಮಾಡುವ ಮೂಲಕ ತಮ್ಮ ಆರೋಗ್ಯ ಚೇತರಿಕೆ ಕಾಣ್ತಿರುವ ಬಗ್ಗೆ ​ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೂಡ ನೀಡಿದ್ದಾರೆ. ಈ ವಾರಾಂತ್ಯಕ್ಕೆ ಕಿಚ್ಚ ಸುದೀಪ್​ ಬಿಗ್​ಬಾಸ್​ ವೇದಿಕೆಯಲ್ಲಿ ಇರಲಿದ್ದಾರೆ ಅನ್ನೋ ನಿರೀಕ್ಷೆ ಇದೆ.

ವಿಶೇಷ ಬರಹ: ರಕ್ಷಿತಾ.ರೈ- ಫಿಲ್ಮ್​ ಬ್ಯೂರೋ

The post ನಿರ್ದೇಶಕ ಶಂಕರ್​ ಮುಂದಿನ ಸಿನಿಮಾದಲ್ಲಿ ಕಿಚ್ಚ​; ರಾಮ್​ ಚರಣ್​ ಜೊತೆ ನಟಿಸ್ತಾರಾ ಸುದೀಪ್​? appeared first on News First Kannada.

Source: newsfirstlive.com

Source link