ನಿರ್ಬಂಧವಿದ್ದರೂ ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು -ಚೆಕ್​ಪೋಸ್ಟ್​ನಲ್ಲೇ ಶಾಕ್​ ನೀಡಿದ ಪೊಲೀಸರು

ನಿರ್ಬಂಧವಿದ್ದರೂ ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು -ಚೆಕ್​ಪೋಸ್ಟ್​ನಲ್ಲೇ ಶಾಕ್​ ನೀಡಿದ ಪೊಲೀಸರು

ಚಿಕ್ಕಬಳ್ಳಾಪುರ: ಲಾಕ್​ಡೌನ್​ ಸಡಿಲಿಕೆಯಾದ ಬಳಿಕ ಸಾಗರೋಪಾದಿಯಲ್ಲಿ ಜನ ನಂದಿಗಿರಿಧಾಮಕ್ಕೆ ಹರಿದು ಬರುತ್ತಿರುವದರಿಂದ ಮತ್ತೆ ಕೊರೊನಾ ಅಟ್ಟಹಾಸದ ಆತಂತ ವ್ಯಕ್ತಪಡಿಸಿದ್ದ ಜಿಲ್ಲಾಡಳಿತ ಕಳೆದ ವಾರ ನಂದಿಗಿರಿಧಾಮಕ್ಕೆ ಪ್ರವೇಶ ನಿರ್ಬಂಧ ಹೇರಿ ಆದೆಶ ಹೊರಡಿಸಿತ್ತು. ಆದರೂ ಇಂದು ವಿಕ್​​ಎಂಡ್​ ಆದ ಕಾರಣ ಹಲವು ಪ್ರವಾಸಿಗರು ನಂದಿಗಿರಿಧಾಮಕ್ಕೆ ಬೆಳ್ಳಂಬೆಳಗ್ಗೆ ಆಗಮಿಸಿದ್ದಾರೆ.

ಇದನ್ನೂ ಓದಿ: ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು- ನಾ ಮುಂದು ತಾ ಮುಂದು ಅಂತಾ ಬಂದವರಿಗೆ ಶಾಕ್

ಜಿಲ್ಲಾಡಳಿತ ಆದೇಶ ಉಲ್ಲಂಘಿಸಿ ಮತ್ತೆ ಸಾವಿರಾರು ಪ್ರವಾಸಿಗರು ಗಿರಿಧಾಮಕ್ಕೆ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಚೆಕ್​ಪೋಸ್ಟ್​ನಲ್ಲಿಯೇ ತಡೆ ಹಿಡಿದು ಶಾಕ್​ ನೀಡಿದ್ದಾರೆ. ಕಾರು ಬೈಕ್​ಗಳಲ್ಲಿ ಆಗಮಿಸುತ್ತಿರುವ ಪ್ರವಾಸಿಗರನ್ನು ಪೊಲೀಸರು ತಡೆ ಒಡ್ಡಿದ್ದರಿಂದ ಗಿರಿಧಾಮದ ತಪ್ಪಲಿನ ಚೆಕ್​ಪೋಸ್ಟ್​ನಿಂದಲೇ ನಿರಾಸೆಯಿಂದ ವಾಪಸ್​ ಆಗಿದ್ದಾರೆ.

The post ನಿರ್ಬಂಧವಿದ್ದರೂ ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು -ಚೆಕ್​ಪೋಸ್ಟ್​ನಲ್ಲೇ ಶಾಕ್​ ನೀಡಿದ ಪೊಲೀಸರು appeared first on News First Kannada.

Source: newsfirstlive.com

Source link